Cini NewsSandalwood

ಈ ವಾರ ಯುವ ಪ್ರತಿಭೆಗಳ ‘ನಾಲ್ಕನೇ ಆಯಾಮ’ ತೆರೆಗೆ

ಪ್ರೇಮಗೀಮ ಜಾನೆದೋ ಎನ್ನುತ್ತಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಯುವ ಪ್ರತಿಭೆ ಗೌತಮ್ . ಆರ್ ಇದೀಗ ನಾಲ್ಕನೇ ಆಯಾಮದ ಕಥೆ ಒಪ್ಪಿಸೋದಿಕ್ಕೆ ಸಜ್ಜಾಗಿ ನಿಂತಿದ್ದಾರೆ. ಪ್ರೇಮಗೀಮ ಜಾನೆದೋ ಚಿತ್ರ ಮೂಲಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಗೌತಮ್ ಈಗ ನಾಯಕನ ಜೊತೆ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಅವರ ನಿರ್ದೇಶನದ ನಾಲ್ಕನೇ ಆಯಾಮಾ ಇದೇ ಶುಕ್ರವಾರ ತೆರೆಗೆ ಬರ್ತಿದೆ.

ಗೌತಮ್ ನಟಿಸಿ ನಿರ್ದೇಶಿಸಿರುವ ನಾಲ್ಕನೇ ಆಯಾಮದಲ್ಲಿ ನಾಯಕಿಯಾಗಿ ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ಸಾಥ್ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಮಾಸ್ಟರ್ ಆನಂದ್ ಮಗಳು ಪಟಾಕಿ ಅಂಜನಿ ವಂಶಿಕಾ ಕಶ್ಯಪ್ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದು, ಅಮಿತ್ ಗೌಡ ಯಶಸ್ವಿನಿ ಎಂ , ಬಲ ರಾಜ್ ವಾಡಿ, ವಿನ್ಸೆಂಟ್, ಮಂಜು ಸ್ವಾಮಿ, ಚಂದ್ರಕಲಾ ಮೋಹನ್, ಬೇಬಿ ನಿಷಿತಾ ತಾರಾಬಳಗದಲ್ಲಿದ್ದಾರೆ.

ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ನಾಲ್ಕನೇ ಆಯಾಮ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ, ಅಭಿನಂದನ್ ಕಶಪ್ಯ ಬ್ಯಾಗ್ರೌಂಡ್ ಸ್ಕೋರ್ ಹಾಗೂ ಸೌಂಡ್ ಡಿಸೈನ್ ಮಾಡಿದ್ದು, ಕೆ ಭ್ರಮೇಂದ್ರ ಹಾಗೂ ಅರುಣ್ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನವಿದೆ. ಇಂಚರಾ ಕ್ರಿಯೇಷನ್ ನಡಿ ಅರುಣಾ ಮುತ್ತು ರಾಯಪ್ಪ ನಿರ್ಮಾಣ ಮಾಡಿದ್ದು, ಕಿರಣ್ ರಾಯಚೋಟಿ, ದಿವ್ಯಾ ಸಜೋಗ್ ನಿರ್ಮಾಣದಲ್ಲಿ ಜೊತೆಯಾಗಿ ನಿಂತಿದ್ದಾರೆ. ಟ್ರೇಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ನಾಲ್ಕನೇ ಆಯಾಮಾ ಇದೇ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

error: Content is protected !!