ದುಷ್ಟ ಕಾಮುಕರಿಗೆ ತಕ್ಕ ಪಾಠ… ” ಮೃತ್ಯುದೇವತೆ” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಮೃತ್ಯುದೇವತೆ
ನಿರ್ದೇಶಕ : ನವೀನ್ ಮಹದೇವ್
ನಿರ್ಮಾಪಕಿ : ಸರಸ್ವತಿ
ಸಂಗೀತ : ಶಿವಪ್ರಸಾದ್
ಛಾಯಾಗ್ರಹಣ : ಅನಿರುಧ್
ತಾರಾಗಣ : ನವೀನ್ ಮಹದೇವ್ , ವಿನಯಾ ಪ್ರಸಾದ್, ಹಿಮಶ್ರೀ, ಸಾರಿಕಾ ರಾವ್, ಡಯಾನಾ, ಮಾಹೀನ್ ಹಾಗೂ ಮುಂತಾದವರು…
ನಮ್ಮ ಪರಂಪರೆಯಲ್ಲಿ ಹೆಣ್ಣನ್ನು ಭೂಮಿತಾಯಿಗೆ ಹೋಲಿಸುವ ನಾವು ಹೆಣ್ಣೆಂದರೆ ತಾಯಿ , ಶಕ್ತಿ , ತಾಳ್ಮೆ , ದೇವತೆ ಎಂದು ಪೂಜಿಸಿ , ಗೌರವಿಸುತ್ತ ಬದುಕು ನಡೆಸಿಕೊಂಡು ಸಾಗುತ್ತಿರುವುದು ಸರ್ವೇಸಾಮಾನ್ಯ. ಇಂತಹ ಸಮಾಜದ ನಡುವೆಯೇ ಪ್ರತಿನಿತ್ಯ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ , ಟ್ರ್ಯಾಪ್, ಕೊಲೆ ಪ್ರಕರಣಗಳು ನಿರಂತರವಾಗಿ ಕಾಮುಕರ ಅಟ್ಟಹಾಸಕ್ಕೆ ಸಿಲುಕಿ ಒದ್ದಾಡುವಂತಹ ಯುವತಿಯರು ತಿರುಗಿ ನಿಂತರೆ ಏನಾಗುತ್ತೆ ಎಂಬ ಸೂಕ್ಷ್ಮ ಎಳೆಯೊಂದಿಗೆ ಸ್ನೇಹ , ಪ್ರೀತಿ , ಸಂಬಂಧ , ದ್ವೇಷ , ಆತ್ಮದ ಸುಳಿಯ ನಡುವೆ ಕುತೂಹಲಕಾರಿ ಕಥೆಯೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ ಮೃತ್ಯುದೇವತೆ.
ಶ್ರೀ ಮಲೆ ಮಹದೇಶ್ವರ ಬೆಟ್ಟದ ದಟ್ಟ ಅರಣ್ಯ ಪ್ರದೇಶ ಪ್ರದೇಶದ ಊರೊಂದರಲ್ಲಿ ತನ್ನ ತಾಯಿ (ವಿನಯ ಪ್ರಸಾದ್) , ತಂಗಿ , ಬಂಟನ ಜೊತೆ ವಾಸ ಮಾಡುತ್ತಾ , ಊರಿನ ಆಚೆ ತೋಟದ ಮನೆಯ ಸಮೀಪ ಗಾಂಜಾ ಸೊಪ್ಪನ್ನ ಬೆಳೆಯುತ್ತಾ ತನ್ನಿಷ್ಟದಂತೆ ಕುಡಿದು , ಸ್ತ್ರೀ ವ್ಯಾಮೋಹದ ಆಸೆಯೊಂದಿಗೆ ಸಿಟಿಗೆ ಹೋಗಲು ನಿರ್ಧರಿಸುವ ನಾಟಿ ಕೋಳಿ ಮಹದೇವ (ನವೀನ್ ಮಹಾದೇವ). ಇನ್ನು ಸಿಟಿಯಲ್ಲಿ ವಾಸ ಮಾಡುವ ಗೆಳೆಯ ಗೆಳತಿಯರಾದ ಕಿಶನ್(ಮಾಹೀನ್) , ಆರತಿ(ಸಾರಿಕಾ ರಾವ್) ದೀಪ( ಡಯಾನ ) ಮೋಜು , ಮಸ್ತಿ ಮಾಡಲು ಅನುಷ್( ಮಧು ಸೂರ್ಯ) ಫಾರ್ಮ್ ಹೌಸ್ ಗೆ ಹೋಗಲು ನಿರ್ಧಾರ ಮಾಡುತ್ತಾರೆ. ಇಬ್ಬರು ಗೆಳೆಯರಿಗೂ ತಮ್ಮ ಗೆಳೆತಿಯರನ್ನು ಅದಲು ಬದಲು ಮಾಡಿಕೊಂಡು ಮಜಾ ಮಾಡಲು ಮುಂದಾಗುತ್ತಾರೆ.
ಮುಂಜಾನೆ ಆರತಿ ಸೈಕಲ್ ಮೂಲಕ ನಾಟಿ ಕೋಳಿ ತರಲು ಊರೊಳಗೆ ಹೋಗುತ್ತಾಳೆ. ಇದರ ನಡುವೆ ದೀಪಾಳ ಬದುಕಿನಲ್ಲಿ ಆಟ ಆಡುವ ಅನುಷ್ಪ ಹಾಗೂ ಕಿಶನ್. ಕೋಪಗೊಳ್ಳುವ ದೀಪಳನ್ನ ಕೊಲೆ ಮಾಡುತ್ತಾರೆ. ಇನ್ನು ಕೋಳಿ ತರುವಾಗ ಆಕಸ್ಮಿಕವಾಗಿ ಮಾದೇವನ ಕಣ್ಣಿಗೆ ಬೀಳುವ ಆರತಿಯ ಸೌಂದರ್ಯ ನೋಡಿ ಆಕೆಯನ್ನು ಅನುಭವಿಸಲು ಇಷ್ಟಪಡುತ್ತಾನೆ.
ಇಬ್ಬರ ನಡುವೆ ಮಾತಿನ ಚಿಕ್ಕಮಕಿ ನಡೆಯುತ್ತದೆ. ನಂತರ ಮನೆಗೆ ಬರುವ ಆರತಿಯ ಎದುರು ಸುಳ್ಳು ಹೇಳುವ ಇಬ್ಬರು ಗೆಳೆಯರಲ್ಲಿ ಕಿಶನ್ ಆರತಿಯ ಮೇಲೆ ಬಲತ್ಕಾರ ಮಾಡಲು ಮುಂದಾಗುತ್ತಾನೆ. ತಪ್ಪಿಸಿಕೊಳ್ಳುವ ಆರತಿ ಕಾಡಿನೊಳಗೆ ಹೋಗಿ ಪಾತಾಳಕ್ಕೆ ಬೀಳುತ್ತಾಳೆ. ಮುಂದೆ ಎದುರಾಗುವ ಒಂದಷ್ಟು ಘಟನೆಗಳು ರೋಚಕ ತಿರುವಿನತ್ತ ಸಾಗಿ ಆತ್ಮದ ಸುಳಿವುನೊಂದಿಗೆ ರೋಚಕ ಹಂತಕ್ಕೆ ಬಂದು ನಿಲ್ಲುತ್ತದೆ. ಅರತಿ ಎದುರಿಸುವ ಕಷ್ಟ ಏನು…
ದುಷ್ಟರ ಬಲೆಗೆ ಬೀಳುತ್ತಾಳ…
ಆತ್ಮ ಯಾರದು…
ಮಾದೇವನ ಆಸೆ ಏನಾಗುತ್ತೆ..
ಕ್ಲೈಮಾಕ್ಸ್ ಸಂದೇಶ ಏನು…
ಇದೆಲ್ಲದಕ್ಕಾಗಿ ಒಮ್ಮೆ ಈ ಚಿತ್ರವನ್ನು ನೋಡಬಹುದು.

ಇದೊಂದು ಮಹಿಳಾ ಪ್ರಧಾನ ಕಥಾಹಂದರ ಇಟ್ಟುಕೊಂಡು ನಿರ್ದೇಶಕ ನವೀನ್ ಮಹದೇವ್ ಮಾಡಿರುವ ಕೆಲಸ ಗಮನ ಸೆಳೆಯುವಂತಿದೆ. ಹೆಣ್ಣು ಎಷ್ಟು ಶಾಂತ ಸ್ವರೂಪಿಯೋ , ದುಷ್ಟರ ಸಂಹಾರಕ್ಕೆ ದುರ್ಗಿಯು ಆಗುತ್ತಾಳೆ. ಕಾಮ, ದಾಹವೇ ಬದುಕಲ್ಲ , ಸ್ನೇಹ , ಪ್ರೀತಿಗೆ ನಂಬಿಕೆ ದ್ರೋಹ ಮಾಡಬಾರದು, ಹೆಣ್ಣನ್ನ ವಸ್ತುವಾಗಿ ಬಳಸಬೇಡಿ ಪೂಜಿಸಿ, ಗೌರವಿಸಿ ಎಂಬ ಸೂಕ್ಷ್ಮತೆಯನ್ನು ತೆರೆದು ಇಟ್ಟಿದ್ದಾರೆ. ಆದರೆ ಚಿತ್ರಕಥೆ ಬಹಳ ನಿಧಾನಗತಿಯಲ್ಲಿ ಸಾಗಿದ್ದು , ನೋಡುವುದಕ್ಕೆ ಕಷ್ಟವೆನಿಸುತ್ತದೆ.
ಇನ್ನು ಸಂಗೀತ , ಹಿನ್ನೆಲೆ ಸಂಗೀತ ಉತ್ತಮವಾಗಿದ್ದು , ಛಾಯಾಗ್ರಾಹಕರ ಕೈಚಳಕವು ಚೆನ್ನಾಗಿದೆ.ತಾಂತ್ರಿಕವಾಗಿ ತಂಡ ಶ್ರಮಪಟ್ಟಿರುವುದು ಕಾಣುತ್ತದೆ. ಇನ್ನು ನಿರ್ದೇಶನದ ಜೊತೆ ನಾಯಕನಾಗಿ ಪ್ರಥಮ ಪ್ರಯತ್ನದಲ್ಲಿ ಬಹಳಷ್ಟು ಶ್ರಮಪಟ್ಟು ತಮ್ಮ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ ನವೀನ್ ಮಹಾದೇವ್. ನಾಯಕನ ಅತ್ತೆ ಮಗಳಾಗಿ ಹಿಮ ಮೋಹನ್ ಸಿಕ್ಕ ಅವಕಾಶಕ್ಕೆ ನ್ಯಾಯ ನೀಡಿದ್ದು , ತಾಯಿಯಾಗಿ ವಿನಯ ಪ್ರಸಾದ್ ತಮ್ಮ ಪಾತ್ರದಲ್ಲಿ ಜೀವಿಸಿದ್ದಾನೆ.
ಇನ್ನು ಉಳಿದ ನಾಯಕಿಯರಾಗಿ ಸಾರಿಕಾ ರಾವ್ , ಡಯಾನ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ನಟ ಮಧು ಸೂರ್ಯ ಸೇರಿದಂತೆ ಮಾಹೀನ್ ಕೂಡ ಉತ್ತಮವಾಗಿ ಅಭಿನಯಿಸಿದ್ದು , ಪ್ರತಿಭಾವಂತ ವಿಲನ್ ಚಿತ್ರರಂಗಕ್ಕೆ ಸಿಕ್ಕಿದ್ದಾರೆ ಎನ್ನಬಹುದು. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದು, ಒಮ್ಮೆ ಚಿತ್ರ ನೋಡುವಂತಿದೆ.