ಮುಸುಕಿನ ವಾತಾವರಣದ ಸ್ಪ್ಲಿಟ್ ಪರ್ಸನಾಲಿಟಿ “ಮೋಡ ಕವಿದ ವಾತಾವರಣ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

Spread the love

ರೇಟಿಂಗ್ : 3.5 /5
ಚಿತ್ರ : ಮೋಡ ಕವಿದ ವಾತಾವರಣ
ನಿರ್ದೇಶಕ : ಸಿಂಪಲ್ ಸುನಿ
ನಿರ್ಮಾಪಕರು : ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್, ಗೋವಾ ರಮೇಶ್
ಸಂಗೀತ : ಜೂಡಾ ಸ್ಯಾಂಡಿ
ಛಾಯಾಗ್ರಹಣ : ಸಂತೋಷ್ ರೈ ಪಾತಾಜೆ
ತಾರಾಗಣ : ಶೀಲಮ್ , ಸಾತ್ವಿಕಾ, ಮೋಕ್ಷಾ ಕುಶಾಲ್, ಹಾಗೂ ಮುಂತಾದವರು…

ಜೀವನದ ಪಯಣದಲ್ಲಿ ಏರುಪೇರುಗಳು ನಿರಂತರ ಎದುರಾಗುತ್ತಲೇ ಇರುತ್ತದೆ. ನೋವು , ನಲಿವು , ಆಸೆ , ನಿರೀಕ್ಷೆ , ಸ್ನೇಹ , ಪ್ರೀತಿ , ವಿಶ್ವಾಸದ ಜೊತೆ ಮಾನಸಿಕ ಒತ್ತಡದ ಬದುಕಿನಲ್ಲಿ ನಾನಾ ಸಂದರ್ಭಗಳನ್ನು ಎದುರಿಸುತ್ತಾ ಮುಂದೆ ಹೋಗುವಂತಹ ಪರಿಸ್ಥಿತಿ ಮನುಷ್ಯ ನಿಭಾಯಿಸಲೇಬೇಕು. ಇಲ್ಲೊಂದು ವಿಭಿನ್ನ ಮನಸ್ಥಿತಿಯ ಬಹು ವ್ಯಕ್ತಿತ್ವ ಅಸ್ವಸ್ಥತೆ ಹೊಂದಿರುವಂತಹ ಮನುಷ್ಯರ ಸುತ್ತ ನಡೆಯುವ ವಿಚಿತ್ರ ವರ್ತನೆ , ಸ್ನೇಹ , ಪ್ರೀತಿ , ಸಲುಗೆ , ಆತಂಕ, ಕೋಪ , ಗೊಂದಲದ ನಡುವಿನ ವಿಭಿನ್ನ ಪ್ರೇಮಕಥೆಯ ಎಳೆಯಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಮೋಡ ಕವಿದ ವಾತಾವರಣ”.

ತನ್ನಿಷ್ಟದಂತೆ ನೇರ ಮಾತು , ಹಾಸ್ಯ ಪ್ರಜ್ಞೆಯೊಂದಿಗೆ ಜನರ ಸ್ನೇಹವನ್ನ ಗಳಿಸುವಂತಹ ಚರೀಶ್ (ಶೀಲಮ್) ಒಬ್ಬ ಸೈಕಲಾಜಿಕಲ್ ಡಾಕ್ಟರ್ ಹಾಗೆ ಫೇಸ್ಬುಕ್ ಇನ್ಸ್ಟಾ ನಲ್ಲಿ ಆಕರ್ಷಕ ವಿಷಯಗಳನ್ನು ರೀಲ್ಸ್ , ಮಿಮ್ಸ್ ಮಾಡುವ ವ್ಯಕ್ತಿ. ಇದರ ನಡುವೆ ಸಾತ್ವಿಕ (ಸಾತ್ವಿಕ) ಜೊತೆ ಸ್ನೇಹ , ಸಲುಗೆ ಜೊತೆಗೆ ಪ್ರೀತಿಯ ಮೋಹ ಪಾಶಕ್ಕೂ ಬಿದ್ದು ಮದುವೆ ಹಂತಕ್ಕೆ ಹೋದರು ಇಬ್ಬರ ಮನಸ್ಥಿತಿ ಆಗಾಗ ಬೇರೆ ಆಗುವ ಆಲೋಚನೆ ಹೊಂದುತ್ತಾರೆ.

ಇದನ್ನು ಸರಿಪಡಿಸಿಕೊಳ್ಳಲು ದೂರದ ರೆಸಾರ್ಟ್ ಹೋಗಲು ನಿರ್ಧರಿಸುತ್ತಾರೆ.ಇದೇ ರೆಸಾರ್ಟ್ಗೆ ಸೋಪಾರ್ಣಿಕ (ಮೋಕ್ಷ ಕುಶಾಲ್) ಹಾಗೂ ಬಾವಿಪತಿ ಇದ್ದನು ಕೂಡ ಎಂಟ್ರಿ ಆಗುತ್ತಾರೆ. ದಟ್ಟ ಅರಣ್ಯದ ರೆಸಾರ್ಟ್ ನಲ್ಲಿ ಒಂದಿಷ್ಟು ಅವ್ಯವಸ್ಥೆ, ಇದರ ನಡುವೆ ಈ ಎರಡು ಜೋಡಿಗಳ ಸ್ನೇಹ , ಸಂಪರ್ಕ, ವಿಶ್ವಾಸದ ಮಾತುಕತೆ ನಡುವೆ ಒಂದಷ್ಟು ನಿಗೂಢ ಚಲನವಲನ ಎದುರಾಗುತ್ತದೆ. ಚರೀಶ್ ಹಾಗೂ ಸೌಪರ್ಣಿಕಾ ಸ್ನೇಹ , ಸೆಲುಗೆ ಅವರಿಬ್ಬರ ಬದುಕಿನ ಹಾದಿ ನೋವು ನಲಿವುಗಳನ್ನ ಹೇಳಿಕೊಳ್ಳುತ್ತಾರೆ.

ಇದರ ನಡುವೆ ಸೌಪರ್ಣಿಕಾ ಎದುರಿಸುವ ಒಂದಷ್ಟು ವಿಚಿತ್ರ ಘಟನೆಗಳ ಹಿಂದೆ ಬೇರೆ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಇದರಲ್ಲಿ ಯಾವುದು ಸತ್ಯ… ಯಾವುದು ಸುಳ್ಳು… ಎಂದು ಊಹಿಸುವ ಹಂತದಲ್ಲಿ ಸ್ಪ್ಲಿಟ್ ಪರ್ಸನಾಲಿಟಿ ಇರುವ ವ್ಯಕ್ತಿತ್ವದ ಜಾಡು ರೋಚಕವಾಗಿ ತೆರೆದುಕೊಳ್ಳುತ್ತ ಮೋಡ ಕವಿದಿರುವುದು ಯಾರ ಬಾಳಲ್ಲಿ… ಈ ಜೋಡಿಯ ಪ್ರೀತಿ ಏನಾಗುತ್ತೆ…. ಯಾರ ಪ್ರೀತಿ ಯಾರಿಗೆ ಸಿಗುತ್ತೆ… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಲೇಬೇಕು.

ನಿರ್ದೇಶಕ ಸಿಂಪಲ್ ಸನಿ ಈ ಚಿತ್ರದ ಕಥೆಯನ್ನು ಸಿಂಪಲ್ಲಾಗಲ್ಲದೆ ಮೆದುಳಿಗೆ ಯೋಚನೆ ಮಾಡುವ ಹಾಗೆ ಚಿತ್ರಕಥೆ ಮಾಡಿಕೊಂಡು ಏರಿಳಿತದ ಜೊತೆ ಸುಂದರ ದೃಶ್ಯ ವೈಭವವನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಿನಿಪ್ರಿಯರು ಎಷ್ಟರಮಟ್ಟಿಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಕಾದು ನೋಡಬೇಕು. ಸ್ನೇಹ , ಪ್ರೀತಿ, ಪ್ರೇಮದ ಜೊತೆ ಬಹು ವ್ಯಕ್ತಿತ್ವ ಅಸ್ವಸ್ಥತೆ ಹೊಂದಿರುವಂತಹ ಮನುಷ್ಯರ ಸುತ್ತ ಕಟ್ಟಿಕೊಂಡಿರುವ ಎಳೆ ಗಮನ ಸೆಳೆಯುತ್ತದೆ.

ವಿಭಿನ್ನತೆ ಇಷ್ಟಪಡುವವರಿಗೆ ಸುನೀ ಕೆಲಸ ಇಷ್ಟವಾಗುತ್ತದೆ. ತ್ರಿಕೋನ ಪ್ರೇಮಕತೆಯಂತಿರುವ ಈ ಚಿತ್ರಕ್ಕೆ ಬೆಂಬಲ ನೀಡಿರುವ ನಿರ್ಮಾಪಕರ ಧೈರ್ಯವನ್ನ ಮೆಚ್ಚಲೇಬೇಕು. ಇನ್ನು ಛಾಯಾಗ್ರಾಹಕರ ಕೈ ಚಳಕದಲ್ಲಿ ಅದ್ಭುತವಾಗಿ ದೃಶ್ಯಗಳು ಮೂಡಿಬಂದಿದೆ. ಅದೇ ರೀತಿ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಜೊತೆ ತಾಂತ್ರಿಕವಾಗಿಯೂ ಕೂಡ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ನಾಯಕನಾಗಿ ಅಭಿನಯಿಸಿರುವ ಯುವ ನಟ ಶೀಲಮ್ ತಮ್ಮ ಪ್ರಥಮ ಚಿತ್ರದಲ್ಲೇ ಬಹಳಷ್ಟು ಶ್ರಮಪಟ್ಟು ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.

ಇನ್ನು ನಾಯಕಿಯಾಗಿ ಸಾತ್ವಿಕಾ ಸಿಕ್ಕ ಅವಕಾಶವನ್ನ ಸಮರ್ಥವಾಗಿ ನಿರ್ವಹಿಸಿ ಎಲ್ಲರೂ ಗಮನ ಸೆಳೆದಿದ್ದಾರೆ. ಅದೇ ರೀತಿ ಮತ್ತೊಬ್ಬ ನಟಿ ಮೋಕ್ಷಾ ಕುಶಾಲ್ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿ , ತಮ್ಮ ಅಭಿನಯದ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದೇ ರೀತಿ ಧನು ಪಾತ್ರಧಾರಿ ಸೇರಿದಂತೆ ಎಲ್ಲಾ ಪಾತ್ರದಾರಿಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಇದೊಂದು ಸೈನ್ಸ್ ಫಿಕ್ಷನ್ ಕಥಾಹಂದರ ಚಿತ್ರವಾಗಿದ್ದು , ಎಲ್ಲಾ ವರ್ಗದ ವೀಕ್ಷಕರು ನೋಡುವಂತಹ ಚಿತ್ರವಾಗಿ ಮೂಡಿಬಂದಿರುವ ಈ ಮೋಡ ಕವಿದ ವಾತಾವರಣ ಪ್ರಸ್ತುತ ಸೀಸನ್ ಗೆ ತಕ್ಕನಾಗಿ ಹೊರಬಂದಂತಿದೆ.

 

Visited 1 times, 1 visit(s) today
error: Content is protected !!