Cini NewsSandalwood

ಕೋಟಿ” ಜರ್ನಿಯ ಪರಮ್ : ಜೂ.14ರಂದು ʼಕೋಟಿʼ ಅದ್ದೂರಿಯಾಗಿ ಬಿಡುಗಡೆ.

ಪ್ರತಿಯೊಬ್ಬ ಮನುಷ್ಯನಿಗೂ ಅವಕಾಶ ಸಿಕ್ಕೆ ಸಿಗುತ್ತದೆ. ಆ ಸಮಯ , ಸಂದರ್ಭ , ಅದೃಷ್ಟ ಕೈಗೂಡಿದರೆ ಖಂಡಿತ ಅವನ ಜರ್ನಿ ಕೋಟಿ ಕಡೆ ಸಾಗುತ್ತದೆ ಎಂದೇ ಹೇಳಬಹುದು. ಆದರೆ ಹೇಳಿಕೊಳ್ಳುವಷ್ಟು ಸುಲಭವಲ್ಲದ ಈ ಜರ್ನಿಯಲ್ಲಿ ನಿರ್ದೇಶಕ ಪರಮ್ ಕೂಡ ಸಾಗಿದ್ದು , ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಪರಮೇಶ್ವರ್ ಗುಂಡ್ಕಲ್ ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಬಂದವರು.

ಬರವಣಿಗೆ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದ ಪರಮೇಶ್ವರ್ ತಮ್ಮದೇ ಒಂದು ಟ್ಯಾಬ್ಲಾಯ್ಡ್ ಪತ್ರಿಕೆ ಆರಂಭಿಸಲು ಬಹಳಷ್ಟು ಶ್ರಮಪಟ್ಟು , ತದನಂತರ ಬೆಂಗಳೂರಿಗೆ ಬಂದು ಪತ್ರಿಕೋದ್ಯಮದಲ್ಲಿ ಏನಾದರೂ ಸಾಧಿಸಬೇಕೆಂಬ ಮಹದಾಸೆಯೊಂದಿಗೆ ಪತ್ರಿಕೆಗಳಲ್ಲಿ ವರದಿಗಾರರಿಗೆ ಕೆಲಸ ಮಾಡುತ್ತಾ ಹಂತ ಹಂತವಾಗಿ ಬೆಳೆದು ಕಲರ್ಸ್ ಕನ್ನಡದ ವಾಹಿನಿ ಮುಖ್ಯಸ್ಥರಾಗಿ ಸೇವೆ ಮಾಡುತ್ತಾ ಟಿವಿ ಲೋಕದಲ್ಲಿ ಒಂದು ಹೊಸ ಸಂಚಲನ ಮೂಡಿಸುತ್ತಾ , ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನ ನೀಡುವ ಮೂಲಕ ವೀಕ್ಷಕರು ಮನಸನ್ನ ಸೆಳೆಯುವುದರಲ್ಲಿ ಸಫಲರಾದವರು.

ಸರಿಸುಮಾರು ಹತ್ತು ವರ್ಷಗಳ ಸುದೀರ್ಘ ಪಯಣದ ನಂತರ ಈಗ ಪರಮ್ ಜಿಯೋ ಸ್ಟುಡಿಯೋಸ್ ಮೂಲಕ ನಿರ್ದೇಶಕರಾಗಿ ಹೊರ ಬರುತ್ತಿದ್ದಾರೆ. ಹಲವಾರು ಯಶಸ್ವಿ ಹಿಂದಿ ಚಿತ್ರಗಳನ್ನು ನೀಡಿದಂತ ಜಿಯೋ ಸ್ಟುಡಿಯೋಸ್ ಈಗ ಕನ್ನಡ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ನಿರ್ಮಾಣ ಸಂಸ್ಥೆಯನ್ನ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

ಈ ಚಿತ್ರದ ನಿರ್ದೇಶಕ ಪರಂಮ್ ಕನಸು ನನಸಾಗಿದೆ ಎನ್ನಬಹುದು , ಅವರ ಪ್ರಕಾರ ಇದೊಂದು ಕೋಟಿ ಕನಸು ಕಾಣುವ ಒಬ್ಬ ಕಾಮನ್ ಮ್ಯಾನ್ ಕಥೆಯಾಗಿದ್ದು , ಯಾರಿಗೂ ಮೋಸ ಮಾಡದೆ , ನೋವು ನೀಡದೆ ತನ್ನ ಕುಟುಂಬವನ್ನ ಚೆನ್ನಾಗಿ ನೋಡಿಕೊಳ್ಳುವ ಬಯಕೆಯಿಂದ ದುಡ್ಡಿಗಾಗಿ ಒದ್ದಾಡುವ ಒಬ್ಬ ಮನುಷ್ಯನ ಭಾವನೆಗಳನ್ನು ಹೇಳುವ ಜೊತೆಗೆ ಸ್ನೇಹ , ಪ್ರೀತಿ , ತಾಯಿಯ ಮಮಕಾರ, ಅಣ್ಣ ತಂಗಿಯ ಬಾಂಧವ್ಯ , ದುಷ್ಟ ವ್ಯಕ್ತಿಗಳ ಕೈವಾಡ ಸುತ್ತ ಎಣಿದಿರುವ ಒಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಥೆಯಾಗಿದ್ದು , ಈ ಚಿತ್ರಕ್ಕಾಗಿ ಒಂದು ದೊಡ್ಡ ತಂಡವೇ ಬಹಳಷ್ಟು ಶ್ರಮಪಟ್ಟು ಕೆಲಸ ಮಾಡಿದೆ. ತಾಂತ್ರಿಕ ವರ್ಗ ಸೇರಿದಂತೆ ಕಲಾವಿದರ ಬಳಗವು ಕೂಡ ಅಷ್ಟೇ ಅಚ್ಚುಕಟ್ಟಾಗಿ ಸಾತ್ ನೀಡಿದ್ದಾರೆ. ಖಂಡಿತ ಎಲ್ಲಾ ವರ್ಗದ ಪ್ರೇಕ್ಷಕರು ಇದನ್ನು ಒಪ್ಪಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ನನ್ನದು ಎನ್ನುತ್ತಾರೆ ನಿರ್ದೇಶಕರು.

ಇದೊಂದು ಅಪ್ಪಟ ಕನ್ನಡ ಮಣ್ಣಿನ ಕಥೆಯಾಗಿದ್ದು , ಈ ಕೋಟಿ ಚಿತ್ರದಲ್ಲಿ ಡಾಲಿ ಧನಂಜಯ್ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಾಯಕಿಯಾಗಿ ಮೋಕ್ಷಾ ಕುಶಾಲ್‌ , ಖಳನಾಯಕನಾಗಿ ರಮೇಶ್ ಇಂದಿರಾ , ರಂಗಾಯಣ ರಘು , ತಾರಾ , ಸರ್ದಾರ್‌ ಸತ್ಯ ಜೊತೆಗೆ ಯುವ ಪ್ರತಿಭೆಗಳಾದ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಹಾಗೆಯೇ ಈ ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದು, ಹಿನ್ನೆಲೆ ಸಂಗೀತ ನೊಬಿನ್‌ ಪೌಲ್‌ ನೀಡಿದ್ದಾರೆ. ಪ್ರತೀಕ್‌ ಶೆಟ್ಟಿ ಸಂಕಲನ , ಅರುಣ್ ಛಾಯಾಗ್ರಹಣ ಈ ಚಿತ್ರಕ್ಕೆದೆ.

ಈಗಾಗಲೇ ಬಿಡುಗಡೆಗೊಂಡಿರುವ ಈ ಚಿತ್ರದ ಟ್ರೈಲರ್ ಬಾರಿ ವೈರಲ್ ಆಗಿದ್ದು , ಜಿಯೋ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರವನ್ನು ಕೆ .ಆರ್. ಜೆ ವಿತರಣಾ ಸಂಸ್ಥೆ ಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ʼಕೋಟಿʼ ಜೂನ್‌ 14ರಂದು ಅದ್ದೂರಿಯಾಗಿ ಸಿದ್ಧವಾಗಿದೆ

error: Content is protected !!