Cini NewsSandalwood

ಪಿ. ಲಂಕೇಶ್ ಮೊಮ್ಮಗನ “ಗೌರಿ” ಮಯ

ಚಂದನವನಕ್ಕೆ ಮತ್ತೊಬ್ಬ ಯಂಗ್ ಅಂಡ್ ಎನರ್ಜಿಟಿಕ್ ಹ್ಯಾಂಡ್ ಸಮ್ ಲುಕಿಂಗ್ ಹೀರೋ ಸಮರ್ಥವಾಗಿ ಪೂರ್ವ ತಯಾರಿ ಮಾಡಿಕೊಂಡು ಮಿಂಚಲು ಸಿದ್ಧನಾಗಿದ್ದಾನೆ. ಕನ್ನಡದ ಖ್ಯಾತ ಲೇಖಕ , ಲಂಕೇಶ್ ಪತ್ರಿಕೆಯ ಸಂಪಾದಕ , ಅಧ್ಯಾಪಕ, ಕವಿ , ನಾಟಕಕಾರ , ನಿರ್ಮಾಪಕ , ನಟ , ಕಾದಂಬರಿಕಾರ ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿರುವ ಪಿ. ಲಂಕೇಶ್ ರವರ ಮೊಮ್ಮಗ ಹಾಗೂ ಸ್ಯಾಂಡಲ್ವುಡ್ ನ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಬರಹಗಾರ , ಪತ್ರಕರ್ತ , ನಟ , ನಿರ್ಮಾಪಕರ ಸುಪುತ್ರ ಈ ಸ್ಮಾರ್ಟ್ ಹೀರೋ ಸಮರ್ಜಿತ್ ಲಂಕೇಶ್.

ಈ ಯುವ ನಟನಿಗೆ ಸಿನಿಮಾ ನಂಟು ಹೊಸದೇನಲ್ಲ , ಮೂರನೇ ತಲೆಮಾರಿನ ಈ ಪ್ರತಿಭೆ ಬಾಲ ನಟನಾಗಿಯೂ ಕೂಡ ಅಭಿನಯಿಸಿದ್ದಾರೆ. ಈಗ ಸಮರ್ಜಿತ್ ಲಂಕೇಶ್ ಸಮರ್ಥವಾಗಿ ಆಕ್ಟಿಂಗ್ , ಡ್ಯಾನ್ಸ್ , ಫೈಟ್, ಡಬ್ಬಿಂಗ್ ಸೇರಿದಂತೆ ಸಿನಿಮಾ ವಿಭಾಗಕ್ಕೆ ಬೇಕಾದಂತ ಎಲ್ಲಾ ತಯಾರಿಯನ್ನು ಮಾಡಿಕೊಂಡು ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿ ಪರದೆಯ ಮೇಲೆ “ಗೌರಿ” ಚಿತ್ರದ ಮೂಲಕ ಬರ್ತಿದ್ದಾನೆ ಎಂದು ಚಿತ್ರದ ನಿರ್ದೇಶಕ , ನಿರ್ಮಾಪಕ , ನಾಯಕನ ತಂದೆ ಇಂದ್ರಜಿತ್ ಲಂಕೇಶ್ ಮಾಹಿತಿಯನ್ನು ನೀಡಿದರು.

ಇದೊಂದು ಹೈ ಬಜೆಟ್ ಚಿತ್ರವಾಗಿದ್ದು , ಯುವ ಪ್ರತಿಭೆಗಳ ಮೇಲೆ ಇಷ್ಟೊಂದು ಹಣ ಹಾಕಿ ಚಿತ್ರ ನಿರ್ಮಾಣ ಮಾಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಈ ಒಂದು ಕಥೆ ಬರೆಯಲು ಶುರು ಮಾಡಿದ್ದು , ಇದೊಂದಷ್ಟು ಸತ್ಯ ಘಟನೆಗಳ ಆಧಾರಿತ ಚಿತ್ರವಾಗಿದೆ. ಆಗ ನನ್ನ ತಲೆಯಲ್ಲಿ ನನ್ನ ಮಗ ಈ ಚಿತ್ರಕ್ಕೆ ಹೀರೋ ಆಗ್ತಾನೆ ಅಂದುಕೊಂಡಿರಲಿಲ್ಲ.

ಸ್ಟೋರಿ ಲೈನ್ ಫೈನಲ್ ಆದಮೇಲೆ ಕ್ಯಾರೆಕ್ಟರನ್ನ ಹುಡುಕುತ್ತಾ ಹೋದಾಗ ಸಮರ್ಜಿತ್ ಲಂಕೇಶ್ ನಾಯಕನ ಪಾತ್ರಕ್ಕೆ ಸೂಕ್ತ ಅನಿಸಿತು, ನಂತರ ಪುಟ್ಟಗೌರಿ ಧಾರಾವಾಹಿ ಹಾಗೂ ಬಿಗ್ ಬಾಸ್ ಬೆಡಗಿ ಸಾನ್ಯಾ ಅಯ್ಯರ್ ನಾಯಕಿಯಾಗಿ ಆಯ್ಕೆಗೊಂಡರು. ಹಾಗೆಯೇ ಈ ಒಂದು ಚಿತ್ರದಲ್ಲಿ ಕಾಂತಾರ ಖ್ಯಾತಿಯ ಮಾಲತಿ ಸುಧೀರ್ , ಕೆಜಿಎಫ್ ಖ್ಯಾತಿಯ ಸಂಪತ್ ಮೈತ್ರಿಯ , ನಟ ಲೂಸ್ ಮಾದ ಯೋಗಿ , ಹಿರಿಯ ಕಲಾವಿದರಾದ ಸಿಹಿ ಕಹಿ ಚಂದ್ರು , ಮುಖ್ಯಮಂತ್ರಿ ಚಂದ್ರು , ಖ್ಯಾತ ನಟಿ ಪ್ರಿಯಾಂಕ ಉಪೇಂದ್ರ , ವಸುಂದರಾದಾಸ್ , ಅಕುಲ್ ಬಾಲಾಜಿ ಸೇರಿದಂತೆ ದೊಡ್ಡ ಸ್ಟಾರ್ ಕ್ಯಾಸ್ಟ್ ಈ ಚಿತ್ರದಲ್ಲಿದೆ.

ಸರಿಸುಮಾರು ನೂರು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು , ಈ ಚಿತ್ರಕ್ಕೆ ಇಬ್ಬರು ಛಾಯಾಗ್ರಹಾಕರಾದ ಎ .ಜೆ .ಶೆಟ್ಟಿ ಹಾಗೂ ಕೃಷ್ಣಕುಮಾರ್ ಕೆಲಸ ಮಾಡಿದ್ದು , ಸುಂದರ ತಾಣಗಳಲ್ಲಿ , ಅದ್ದೂರಿ ಸೆಟ್ಟುಗಳ ಮೂಲಕ ದೃಶ್ಯಗಳನ್ನ ಸರಿಹಡಿಯಲಾಗಿದೆ. ಈ ಚಿತ್ರದ ವಿಶೇಷ ಎಂದರೆ ಒಟ್ಟು ಐದು ಜನ ಸಂಗೀತ ನಿರ್ದೇಶಕರು ಕೆಲಸ ಮಾಡಿರುವುದು. ಜೆಸ್ಸಿ ಗಿಫ್ಟ್ ,ಚಂದನ್ ಶೆಟ್ಟಿ , ಶಿವು ಬೆರ್ಗಿ ಹಾಗೂ ಅನಿರುದ್ಧ ಶಾಸ್ತ್ರಿ ಸಂಗೀತ ನಿರ್ದೇಶನ ಮಾಡಿದರೆ. ಮ್ಯಾಥ್ಯೂಸ್ ಮನು ರೀ ರೆಕಾರ್ಡಿಂಗ್ ಮಾಡಿದ್ದಾರೆ.

ಈ “ಗೌರಿ” ಚಿತ್ರಕ್ಕೆ ಸಂಭಾಷಣೆಯನ್ನು ಬಿ.ಎ. ಮಧು , ರಾಜಶೇಖರ್ , ಗುಬ್ಬಿ ಪಂಚಿಂಗ್ ಡೈಲಾಗ್ ಬರದಿದ್ರೆ , ರವಿವರ್ಮ , ಡಿಫ್ರೆಂಟ್ ಡ್ಯಾನಿ ಭರ್ಜರಿ ಫೈಟ್ಸ್ ಮಾಡ್ಸಿದ್ದಾರಂತೆ. ಒಟ್ಟರೆ ಲಾಫಿಂಗ್ ಬುದ್ಧ ಫಿಲಂಸ್ ಲಾಂಛನದಡಿಯಲ್ಲಿ ಇಂದ್ರಜಿತ್ ಲಂಕೇಶ್ ಒಂದು ಬ್ಯೂಟಿಫುಲ್ ಮ್ಯೂಸಿಕಲ್ ಯೂತ್ ಅಂಡ್ ಫ್ಯಾಮಿಲಿ ಡ್ರಾಮಾ ಚಿತ್ರವನ್ನು ಅದ್ದೂರಿಯಾಗಿ ತೆರೆಯ ಮೇಲೆ ತರಲು ಸಿದ್ದರಾಗಿದ್ದಾರೆ. ಹಂತ ಹಂತವಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನ ಸೆಳೆಯಲು ಪ್ರಚಾರದ ಕಾರ್ಯವನ್ನು ಆರಂಭಿಸಿರುವ ಈ “ಗೌರಿ” ಚಿತ್ರತಂಡ ಕಥಾವಸ್ತು ಬಗ್ಗೆ ಬಹಳಷ್ಟು ನಂಬಿಕೆ ಇಟ್ಟುಕೊಂಡು ಮುಂದೆ ಬಂದಿದ್ದು , ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚುತ್ತಾರೆ ಎಂಬ ನಂಬಿಕೆ ನಮಗಿದೆ ಎಂದಿದ್ದಾರೆ ನಿರ್ದೇಶಕ , ನಿರ್ಮಾಪಕ ಇಂದ್ರಜಿತ್ ಲಂಕೇಶ್.

error: Content is protected !!