“ಲೈಫ್ ಟುಡೆ” ಚಿತ್ರದ ನೀನೊಬ್ಬಳೆ ಹಾಡು ಬಿಡುಗಡೆ ಮಾಡಿದ ಡಾ. ನಾಗೇಂದ್ರ ಪ್ರಸಾದ್

Spread the love

ನಾಯಕ ಕಿರಣ್ ಆದಿತ್ಯ ಮತ್ತು ನಟಿ ಲೇಖಾ ಚಂದ್ರ ಕಾಣಿಸಿಕೊಂಡಿರುವ “ಲೈಫ್ ಟುಡೆ” ಚಿತ್ರದ ‘ನೀನೊಬ್ಬಳೆ’… ಹಾಡು ಬಿಡುಗಡೆಯಾಗಿ ಗಮನ ಸೆಳೆದಿದ್ದು, ಚಿತ್ರ ಶೀಘ್ರದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಹಿರಿಯ ಗೀತರಚನೆಕಾರ ಹಾಗು ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್ ಅವರೇ ಬರೆದಿರುವ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಕಾಂತ ಕನ್ನಲ್ಲಿ ನಿರ್ದೇಶನವಿರುವ ಚಿತ್ರಕ್ಕೆ ಮೇಘನಾ ಪ್ರದೀಪ್ ಬಂಡವಾಳ ಹಾಕಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ಚಿತ್ರಕ್ಕಿದೆ

ಡಾ.ನಾಗೇಂದ್ರ ಪ್ರಸಾದ್ ಮಾತನಾಡಿ ,ಇಡೀ ಸಿನಿಮಾ ಪ್ರೀತಿಯ ಸುತ್ತ ಕಥೆ ಸಾಗಲಿದೆ. ಯುವಜನರಿಗೆ ಹತ್ತಿತರವಾಗುವ ಸಿನಿಮಾ.ನಿರ್ದೇಶಕ ಕಾಂತಾ ಕನ್ನಲ್ಲಿ ಚಿತ್ರಕ್ಕೆ ಆಕ್ಷನ್‍ಕಟ್ ಹೇಳಿದ್ದು ಹೊಸ ನಾಯಕ ಕಿರಣ್ , ನಿರ್ಮಾಪಕ ಪ್ರದೀಪ್ ಹಾಗು ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರು ಸೇರಿ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ, ಗುಣಮಟ್ಟದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ನಟ ಕಿರಣ್, ನಿರ್ಮಾಪಕ ಪ್ರದೀಪ್ ಅವರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಪ್ರೀತಿ, ತ್ಯಾಗ, ನೋವು, ಕೌಟಂಬಿಕ ಬದ್ದತೆ ಸೇರಿ ಹಲವು ಅಂಶಗಳಿರುವ ಮನರಂಜನಾತ್ಮಕ ಚಿತ್ರ .ಮುಂದಿನ ದಿನಗಳಲ್ಲಿ ಟ್ರೈಲರ್ ಮೂಲಕ ಸಿನಿಮಾದ ಕಥೆ ತಿಳಿಯಲಿದೆ ಎಂದರು.

ನಟ ಕಿರಣ್ ಆದಿತ್ಯ ಮಾತನಾಡಿ ಹೊಸಬರ ಸಿನಿಮಾಗೆ ಬರಗಾಲದಲ್ಲಿ ಸೌಂಡ್ ಮಾಡೋಕೆ ನಾವು ಬರ್ತಾ ಇದ್ದೇವೆ. ಆಡಿಯೆನ್ಸ್ ರಿಜೆಕ್ಷನ್ ಗೊತ್ತಿದೆ.ಮತ್ತೊಂದು ಮುಂಗಾರು ಮಳೆ ರೀತಿ ಬರುವ ಉದ್ದೇಶ ಇದೆ. ಜೂನ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿದೆ. ವರ್ಷದ ಹಿಟ್ ಆಗಲಿದೆ ಎಂದರು. ನಿರ್ಮಾಪಕ ಪ್ರದೀಪ್ ಮಾತನಾಡಿ ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದಿದೆ ಎಂದು ಎಲ್ಲರ ಶ್ರಮವನ್ನು ಮೆಚ್ಚಿಗೆ ವ್ಯಕ್ತಪಡಿಸಿದರು

ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ , ಕನ್ನಡದ ಬಗ್ಗೆ ಹಲವು ಹಾಡುಗಳು ಮೂಡಿಬಂದಿದೆ. ಹಾಡು ಚೆನ್ನಾಗಿ ಮೂಡಿ ಬರಲು ನಟ ಕಿರಣ್ ಆದಿತ್ಯ ಕಾರಣ. ಒಂದೊಂದು ಹಾಡು ಒಂದೊಂದು ರೀತಿ ಬಿಡುಗಡೆ ಆಗಿದೆ. ಗಾಯಕ ಸಂಚಿತ್ ಹೆಗ್ಡೆ ಮತ್ತು ಅನುರಾಧ ಭಟ್ ಉತ್ತಮವಾಗಿ ಹಾಡಿದ್ದಾರೆ ಎಂದರು. ಕಲಾವಿದ ಕಾಕ್ರೋಚ್ ಸುಧಿ ಮಾತನಾಡಿ ಚಿತ್ರದ ಮೂರು ಹಾಡುಗಳು ಚೆನ್ನಾಗಿ ಬಂದಿದೆ ಎಂದರು.

 

Visited 1 times, 1 visit(s) today
error: Content is protected !!