ಯುವ ಪ್ರತಿಭೆಗಳ ‘ದೊಡ್ಮನ್ಸ’ ಚಿತ್ರದ ಡ್ಯುಯೆಟ್ ಸಾಂಗ್ ರಿಲೀಸ್.

Spread the love

ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಯುವ ಪಡೆಗಳ ತಂಡ ಚಿತ್ರವನ್ನ ಸಿದ್ಧಪಡಿಸಿ ತೆರಿಗೆ ತರಲು ಸಜ್ಜಾಗಿದ್ದಾರೆ. ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ , ಶರತ್ ಕೃಷ್ಣ ನಿರ್ದೇಶನದಲ್ಲಿ ಶರತ್ ಕೃಷ್ಣ ಮತ್ತು ರೇಷ್ಮಾ, ಶಿಲ್ಪಾ ಮುಖ್ಯ ಪಾತ್ರದಲ್ಲಿ ನಟಿಸಿರುವ “ದೊಡ್ಮನ್ಸ” ಚಿತ್ರದ ಪ್ರಣಯ ಗೀತೆ ರಿಲೀಸ್ ಆಗಿದೆ. ಬೀಚ್ ನಂತೆ ಕಾಣುವ ಸಾಲ್ಟ್ ಇರುವ ಜಾಗದಲ್ಲಿ ನಡುವಲ್ಲಿ, ಆ ನೀರಿನ ಸದ್ದಲ್ಲಿ, ಪ್ರೇಮಿಗಳಿಬ್ಬರ ಗೀತೆ ಮನಸ್ಸಿಗೆ ಮುದ ನೀಡುವಂತೆ ಇದೆ. ಶರತ್ ಹಾಗೂ ರೇಷ್ಮಾ ಕೆಮಿಸ್ಟ್ರಿ ಅದ್ಭುತವಾಗಿ ಕಾಣಿಸಿದೆ. ಗುಜರಾತ್ ನಲ್ಲಿ ಶೂಟ್ ಮಾಡಲಾಗಿದೆ.

ಈ ಸಂಬಂಧ ನಿರ್ದೇಶಕ ಶರತ್ ಕೃಷ್ಣ ಮಾತನ್ನಾಡಿ, ದೊಡ್ಮನ್ಸ ಎಂಬ ಟೈಟಲ್ ನೋಡೋಕೆ ಖುಷಿಯಾಗುತ್ತೆ. ವಿಷ್ಣು ಸರ್ ಗೆ ಇದ್ದ ಟೈಟಲ್ ನಮಗೆ ಸಿಕ್ಕಿದ್ದು ಬಹಳ ಖುಷಿ ಆಯ್ತು. ನಾರಾಯಣ್ ಅವರೇ ನಮಗೆ ಅಪ್ರಿಷಿಯೇಷನ್ ಮಾಡಿದ್ದರು. ಅವರು ಹೇಳಿದ್ದಾಗಲೇ ಗೊತ್ತಾಗಿದ್ದು. ದುಡ್ಡಿದ್ದೋರಲ್ಲ ಗುರು ದೊಡ್ಡ ಮನ್ಸ ದೊಡ್ಡ ಮನಸ್ಸಿದ್ದೋನೆ ದೊಡ್ಮನ್ಸ ಅನ್ನೋದನ್ನ ಹೇಳುವ ರೀತಿಯ ಕಥೆ ಇದು. ಎಲ್ಲಾ ಸೇರಿದಾಗ ಒಂದು ದೊಡ್ಮನ್ಸ ಸಿನಿಮಾ ಆಗುತ್ತೆ. ಆಟೋ ಡ್ರೈವರ್ ಗಳಿಗೆ ಒಂದು ಸ್ಪೆಷಲ್ ಶೋಗಳನ್ನ ಎಂಟು ಜಿಲ್ಲೆಗಳಲ್ಲಿ ಕೊಡ್ತಾ ಇದ್ದೇವೆ. ಅದಕ್ಕೆ ಆದಂತ ಆಪ್ ಅನ್ನು ರೆಡಿ ಮಾಡಿದ್ದೇವೆ. ಇದರ ಜೊತೆಗೆ ಲಕ್ಕಿ ಡ್ರಿಪ್ ಮಾಡಿ, ಗೆದ್ದ ಒಬ್ಬ ಚಾಲಕನಿಗೆ ಒಂದು ಆಟೋ ಕೊಡ್ತಾ ಇದ್ದೀವಿ ಎಂದಿದ್ದಾರೆ.

ನಟಿ ರೇಷ್ಮಾ ಮಾತನ್ನಾಡಿ, ತುಂಬಾ ಇಷ್ಟಪಟ್ಟು, ತುಂಬಾ ಭರವಸೆಯನ್ನ ಇಟ್ಕೊಂಡು ಈ ಸಿನಿಮಾ ಮಾಡಿದ್ದೇವೆ. ನಾವೂ ಕಂಡ ಕನಸ್ಸನ್ನ ನನಸು ಮಾಡಿಕೊಳ್ಳುವುದಕ್ಕೆ ಅಡ್ಡಿಯಾಗುವುದೆಲ್ಲವನ್ನು ಮೀರಿ ಗೆಲ್ಲುವುದೇ ಜೀವನ. ನಾನು ಸ್ನೇಹಾ ಎಂಬ ಪಾತ್ರವನ್ನ ಮಾಡಿದ್ದೇನೆ. ಮಿಡಲ್ ಕ್ಲಾಸ್ ಹುಡುಗಿ. ಒಂದು ಆಟೋ ಡ್ರೈವರ್ ನ ಇಷ್ಟ ಪಟ್ಟಾಗ ಏನೆಲ್ಲಾ ಆಗುತ್ತೆ ಅನ್ನೋದನ್ನ ಹೇಳಿದೇವೆ ಎಂದರು. ಶಿಲ್ಪಾ ಶಿವಕುಮಾರ್ ಮಾತನ್ನಾಡಿ, ಈ ಸಿನಿಮಾದಲ್ಲಿ ನನ್ನೊಂದು ಪುಟ್ಟ ಪಾತ್ರ. ಆದರೆ ಪ್ರಾಮುಖ್ಯತೆ ಹೆಚ್ಚು ಇದೆ. ನನಗೆ ಸಾಂಗ್ ಇಲ್ಲ ಅಂತ ನಮ್ಮ ನಿರ್ದೇಶಕರ ಹತ್ರ ಕೇಳಿದ್ದೆ, ಸಾಂಗ್ ಇಲ್ಲದೆ ಹೋದರು ಫೈಟ್ ಇದೆ ಅಂತಿದ್ದರು. ನನಗೋಸ್ಕರ ಅವರು ಹೊಡೀತಾರೆ ಎಂದಿದ್ದಾರೆ. ನಿರ್ಮಾಪಕ ವೇದಿಕ್ ವೀರ ಮಾತನ್ನಾಡಿ, ದೊಡ್ಮನ್ಸ ದೊಡ್ಡದಾಗಿದೆ. ಒಳ್ಳೊಳ್ಳೆ ಕಂಟೆಂಟ್ ಜನರಿಗೆ ರೀಚ್ ಆಗಬೇಕು ಅನ್ನೋದು ಆಸೆ. ಪ್ರತಿವೊಂದು ಹಂತದಲ್ಲೂ ಏನೇನು ಬೇಕೋ ಅದೆಲ್ಲವನ್ನು ನೀಡಿದ್ದೇವೆ. ನಾನು ಎಡಿಟರ್, ಎಲ್ಲರು ಸೇರಿ ಸಿನಿಮಾ ಮಾಡಿದ್ದೇವೆ ಎಂದಿದ್ದಾರೆ.
ಬಾಲ ರಾಜ್ವಾಡಿ, ಹುಲಿ ಕಾರ್ತಿಕ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Visited 1 times, 1 visit(s) today
error: Content is protected !!