ತುತ್ತ – ಮುತ್ತ ಸೆಳೆತದ ನಡುವೆ ವಿಧಿಯ ಆಟ “ರಾಶಿ” (ಚಿತ್ರವಿಮರ್ಶೆ-ರೇಟಿಂಗ್ : 3.5/5)

Spread the love

ರೇಟಿಂಗ್ : 3.5/5
ಚಿತ್ರ : ರಾಶಿ
ನಿರ್ದೇಶಕ , ಸಂಗೀತ : ವಿಜಯ್ ಪಾಳೇಗಾರ್
ನಿರ್ಮಾಪಕ : ಅಖಿಲೇಶ್
ಛಾಯಾಗ್ರಹಣ : ನವೀನ್
ತಾರಾಗಣ : ಆದಿತ್ಯ ಶಶಿಕುಮಾರ್, ಸಮೀಕ್ಷಾ, ವೀಣಾ ಸುಂದರ್, ತಬಲಾ ನಾಣಿ, ರಮೇಶ್ ಇಂದಿರಾ, ಮಂಜು ಪಾವಗಡ, ಹುಲಿ ಕಾರ್ತಿಕ್, ವಿನೋದ್ ಗೊಬ್ಬರಗಾಲ, ಉಗ್ರಂ ರವಿ , ಭಜರಂಗಿ ಪ್ರಸನ್ನ ಹಾಗೂ ಮುಂತಾದವರು…

ಜೀವನವೇ ಒಂದು ಪಾಠ , ಪ್ರತಿಯೊಬ್ಬರಿಗೂ ಸಮಯ ಸಂದರ್ಭವೇ ತಕ್ಕ ದಾರಿಯನ್ನು ತೋರುತ್ತಾ ಹೋಗುತ್ತದೆ. ಇಲ್ಲೊಂದು ಹಳ್ಳಿ ಸೊಗಡಿನ ತಾಯಿ-ಮಗನ ಬಾಂಧವ್ಯ, ಪ್ರೀತಿ , ಕೌಟುಂಬಿಕ ಸಂಬಂಧಗಳ ನಂಟು, ಕಾಲೇಜ್ ಜೀವನ , ಗೆಳೆತನ, ನಿಷ್ಕಲ್ಮಶ ಪ್ರೀತಿಗೆ ಎದುರಾಗುವ ಸಂಕಷ್ಟಗಳ ಸುತ್ತ ವಿಧಿಯ ಆಟ ಏನು ಎಂಬ ಸೂಕ್ಷ್ಮತೆಯನ್ನು ಮನಸೆಳೆಯುವ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ರಾಶಿ”.

ಹಳ್ಳಿಯಲ್ಲಿ ತನ್ನಿಷ್ಟದಂತೆ ಬದುಕುವ ಕುಡುಕ ತಂದೆ ರಂಗಪ್ಪ ( ತಬಲಾ ನಾಣಿ) ಕಷ್ಟಪಟ್ಟು ಮನೆಯನ್ನ ನಿಭಾಯಿಸುವ ತಾಯಿ ಲಕ್ಷ್ಮಿ (ವೀಣಾ ಸುಂದರ್) ಯ ಆಸೆಯಂತೆ ಪುತ್ರ ಶಿವರಾಜ್(ಆದಿತ್ಯ ಶಶಿಕುಮಾರ್) ಜಿಲ್ಲೆಗೆ ಪ್ರಥಮ ರಾಂಕ್ ಪಡೆದು ಗ್ರಾಮದ ಜನರಿಂದ ಸನ್ಮಾನ ಪಡೆದು ಇಂಜಿನಿಯರಿಂಗ್ ಗಾಗಿ ಗುರುಗಳ ಬೆಂಬಲದಿಂದ ಸೀಟ್ ಪಡೆದು ಹಾಸ್ಟೆಲ್ ಗೆ ಸೇರುತ್ತಾನೆ.

ತಾಯಿಗೆ ಮಗ ಚೆನ್ನಾಗಿ ಓದಿ ತನ್ನ ಅಕ್ಕನ ಮದುವೆ ಮಾಡಿಸಿ , ನೆಮ್ಮದಿ ಬದುಕು ಕಟ್ಟಿಕೊಳ್ಳುವ ಆಸೆ ಹೊಂದಿರುತ್ತಾಳೆ, ಆದರೆ ಕಾಲೇಜಿನಲ್ಲಿ ಆಕಸ್ಮಿಕವಾಗಿ ಭೇಟಿಯಾಗುವ ಸಹ ವಿದ್ಯಾರ್ಥಿನಿ ರಾಧ್ಯ (ಸಮೀಕ್ಷಾ) ಳನ್ನ ನೋಡಿ ಇಷ್ಟಪಡುತ್ತಾನೆ. ಆದರೆ ಸ್ನೇಹ , ಪರಸ್ಪರ ಮಾತುಕತೆ, ಗೊಂದಲದ ನಡುವೆ ಪ್ರೀತಿಯ ಸೆಳೆತ ಶುರುವಾಗುತ್ತೆ. ಶ್ರೀಮಂತ ಕುಟುಂಬದ ಶಂಕರೇಗೌಡ ಪುತ್ರಿ ರಾದ್ಯಗೆ ಎಂಎಲ್ಎ ಮಗನನ್ನು ಮದುವೆ ಮಾಡಿಸುವ ಆಸೆ. ಮುಂದೆ ಎದುರಾಗುವ ಒಂದಷ್ಟು ಘಟನೆಗಳು ಇವರಿಬ್ಬರ ಬದುಕಿನಲ್ಲಿ ಬಿರುಗಾಳಿಯನ್ನು ಬೀಸುತ್ತದೆ. ತಾಯಿ ಲಕ್ಷ್ಮಿ ಆಸೆ ಕೈಗೂಡುತ್ತೆ…
ಶಿವು ಬದುಕು ಏನಾಗುತ್ತೆ…

ರಾದ್ಯಗೆ ಪ್ರೀತಿ ಸಿಗುತ್ತಾ…
ಕ್ಲೈಮಾಕ್ಸ್ ಹೇಳುವ ಉತ್ತರ ಏನು… ಇದೆಲ್ಲವೂ ತಿಳಿಯಬೇಕಾದರೆ ನೀವು ಈ ಚಿತ್ರವನ್ನು ನೋಡಬೇಕು.

ಇನ್ನು ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಮನ ಸೆಳೆಯುವಂತಿದ್ದು ,
ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಸಂಬಂಧವನ್ನು ಆಧರಿಸಿ, ಪ್ರೀತಿಯ ಸೆಳೆತ ಮಧ್ಯ ಪ್ರವೇಶಿಸಿದಾಗ ಬದುಕು ಏನೆಲ್ಲ ಎದುರಿಸಿ ಜೀವನ ಎತ್ತ ಸಾಗುತ್ತದೆ ಎಂಬ ಸೂಕ್ಷ್ಮತೆಯ ಜೊತೆಗೆ ಗೆಳೆತನ , ಸಹಕಾರ , ದ್ವೇಷ, ನೋವು ನಲುವಿನ ಮಧ್ಯೆ ಮನಸೆಳೆಯುವ ದೃಶ್ಯವನ್ನು ಬಹಳ ಅಚ್ಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು.

ಗ್ರಾಮೀಣ ಭಾಗದ ನಡೆ ನುಡಿ ಪದ್ಧತಿ ನಡುವೆ ಸಂಭಾಷಣೆ ಗಮನ ಸೆಳೆಯುತ್ತದೆ ಅದಕ್ಕೆ ಪೂರಕವಾಗಿ ಸಂಗೀತವೂ ಕೂಡ ಮೂಡಿಬಂದಿದೆ. ಛಾಯಾಗ್ರಹಣ , ಸಂಕಲನ ಉತ್ತಮವಾಗಬೇಕಿತ್ತು. ಇಂಥ ಹಳ್ಳಿ ಸೊಗಡಿನ ಚಿತ್ರ ನಿರ್ಮಿಸಿರುವ ನಿರ್ಮಾಪಕರ ಧೈರ್ಯವನ್ನ ಮೆಚ್ಚಲೇಬೇಕು.

ನಾಯಕನಾಗಿ ಅಭಿನಯಿಸಿರುವ ಆದಿತ್ಯ ಶಶಿಕುಮಾರ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಬಹಳಷ್ಟು ಶ್ರಮಪಟ್ಟಿದ್ದಾರೆ. ಇನ್ನಷ್ಟು ಪರಿಪಕ್ವತೆ ಅಗತ್ಯ ಅನಿಸುತ್ತದೆ. ನಾಯಕಿಯಾಗಿ ಅಭಯಸಿರುವ ಸಮೀಕ್ಷಾ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಗಮನ ಸೆಳೆಯುತ್ತಾರೆ.

ಚಿನ್ನು ಕುಡುಕ ತಂದೆಯ ಪಾತ್ರದಲ್ಲಿ ತಬಲಾ ನಾಣಿ ಅದ್ಭುತವಾಗಿ ನಟಿಸಿ, ಮಾತಿನ ಚಟಾಕಿ ಮೂಲಕ ತಮ್ಮ ಸಮರ್ಥ್ಯವನ್ನು ತೋರಿದ್ದಾರೆ. ಈ ಚಿತ್ರದ ಕೇಂದ್ರ ಬಿಂದುವಾಗಿ ತಾಯಿಯ ಪಾತ್ರದಲ್ಲಿ ವೀಣಾ ಸುಂದರ್ ಅದ್ಭುತವಾಗಿ ಜೀವಿಸಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಾರೆ. ಇನ್ನು ನಾಯಕಿಯ ತಂದೆಯ ಪಾತ್ರದಲ್ಲಿ ರಮೇಶ್ ಇಂದಿರಾ ಸೇರಿದಂತೆ ಮಂಜು ಪಾವಗಡ , ಹುಲಿ ಕಾರ್ತಿಕ್, ವಿನೋದ್ ಗೊಬ್ಬರಗಾಲ , ಭಜರಂಗಿ ಪ್ರಸನ್ನ , ಉಗ್ರಂ ರವಿ, ವರ್ಧನ್ ತೀರ್ಥಳ್ಳಿ, ಕರಿಸುಬು, ಸಂಗೀತ ಎಲ್ಲರೂ ಚಿತ್ರದ ಓಟಕ್ಕೆ ಪೂರಕವಾಗಿ ಸಾಗಿದ್ದಾರೆ. ಇಡೀ ಚಿತ್ರದ ಹೈಲೈಟ್ ಕ್ಲೈಮ್ಯಾಕ್ಸ್ ಎಂದೇ ಹೇಳಬಹುದು. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರ ಇದಾಗಿದೆ.

Visited 1 times, 1 visit(s) today
error: Content is protected !!