“Out of ಸಿಲಬಸ್” ಟ್ರೇಲರ್ ಬಿಡುಗಡೆ
ಚಂದನವದಲ್ಲಿ ಮತ್ತೊಂದು ಯೂತ್ ಒರಿಎಂಟೆಡ್ ಕಾಲೇಜ್ , ಲವ್ , ರಿಲೇಷನ್ಶಿಪ್ , ಲೈಫ್ ಜೊತೆಗೆ ಸಂಪೂರ್ಣ ಮನೋರಂಜನೆ ನೀಡುವಂತಹ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಪ್ರಚಾರದ ಹಂತವಾಗಿ ತಂಡ “ಔಟ್ ಆಫ್ ಸಿಲಬಸ್” ಟ್ರೈಲರ್ ಅನ್ನ ಅದ್ದೂರಿಯಾಗಿ ಬಿಡುಗಡೆ ಮಾಡಿದೆ.
AD6 ಎಂಟರ್ಟೈನ್ಮೆಂಟ್ ಬ್ಯಾನರ್ ಮೂಲಕ ಶ್ರೀಮತಿ ಕೆ. ವಿಜಯ ಕಲಾ ಸುಧಾಕರ್, ತನುಷ್ ಎಸ್. ವಿ, ದೇಸಾಯಿ ಗೌಡ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು
ಪ್ರದೀಪ್ ದೊಡ್ಡಯ್ಯ ನಟಿಸಿ, ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಜೊತೆಗೆ ಚಿತ್ರ ಬಿಡುಗಡೆಯ ದಿನಾಂಕವನ್ನು ಸಹ ಚಿತ್ರ ತಂಡ ಅಧಿಕೃತವಾಗಿ ಘೋಷಣೆ ಮಾಡಿತು.
ಈ ಚಿತ್ರದ ನಿರ್ಮಾಪಕರಾದ ಕೆ. ವಿಜಯಕಲಾ ಸುಧಾಕರ್ ಮಾತನಾಡುತ್ತಾ ನಾವು ಅಡ್ವಟೈಸ್ಮೆಂಟ್ ಸಂಸ್ಥೆ ನಡೆಸುತ್ತಿದ್ದೇವೆ. ನಿರ್ದೇಶಕರು ನಮಗೆ ಬಹಳ ಆತ್ಮೀಯರು , ಒಮ್ಮೆ ಅವರ ಬಳಿ ಇದ್ದ ಕಥೆ ಹೇಳಿದರು. ನಮಗೆ ಇಷ್ಟವಾಯಿತು ಹಾಗಾಗಿ ನಾವು ಈ ಚಿತ್ರವನ್ನ ನಿರ್ಮಾಣ ಮಾಡಿದ್ದೇವೆ.
ನಿರ್ದೇಶಕರಿಗೆ ಸಂಪೂರ್ಣ ಜವಾಬ್ದಾರಿಯನ್ನ ನೀಡಿದ್ದು , ಚಿತ್ರವು ಉತ್ತಮವಾಗಿ ಬಂದಿದೆ. ನಮ್ಮ “ಔಟ್ ಆಫ್ ಸಿಲಬಸ್” ಚಿತ್ರ ಇದೆ ಡಿಸೆಂಬರ್ 27ರಂದು ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದೇವೆ. ನಿಮ್ಮೆಲ್ಲರ ಸಹಕಾರ ನಮ್ಮ ಚಿತ್ರದ ಮೇಲೆ ಇರಲಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ಪ್ರದೀಪ್ ದೊಡ್ಡಯ್ಯ ಮಾತನಾಡುತ್ತಾ ಯುವ ಜನತೆಯನ್ನು ಕೇಂದ್ರವಾಗಿಟ್ಟು, ಭರ್ಜರಿ ಮನೋರಂಜನೆ ಕೊಡುವ ಎಲ್ಲ ಅಂಶಗಳನ್ನು ಒಳಗೊಂಡಿರುವ ಚಿತ್ರ ನಮ್ಮದಾಗಿದೆ. ಈ ಔಟ್ ಆಫ್ ಸಿಲಬಸ್ ಟ್ರೈಲರ್ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.
ನಾನು ಈಗಾಗಲೇ ಮೋಟಿವೇಶನ್ ಸ್ಪೀಕರ್ ಆಗಿ, ಹಲವಾರು ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನ ಹೇಳಿ, ಅದರ ಜೊತೆಗೆ ಜಾಹೀರಾತು ಸಂಸ್ಥೆಯಲ್ಲಿ ಕೆಲಸ ಮಾಡಿ , ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಒಂದಷ್ಟು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವವನ್ನು ಪಡೆದುಕೊಂಡು , ಪ್ರಸ್ತುತ ಎಂಗರ್ ಜನರೇಷನ್ ಒಡೆನಾಟ ಇರುವದರಿಂದ ಈ ಒಂದು ಕಥೆಯನ್ನ ಸಿದ್ದಪಡಿಸಿ ನಾನು ಚಿತ್ರರಂಗಕ್ಕೆ ಬರಲು ಮುಂದಾದೆ. ಅದರಂತೆ ಚಿತ್ರವನ್ನು ಕೂಡ ಈಗ ತೆರಿಗೆ ತರಲು ಸಿದ್ಧನಿದ್ದೇನೆ.
ಈಗ ಟ್ರೇಲರ್ ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಗೋಕುಲ್ ಫಿಲಂಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದೇವೆ. ನಮ್ಮ ಚಿತ್ರ ಓಟಿಟಿಗೆ ಬರುವವರೆಗೂ ಕಾಯಿಬೇಡಿ , ಯಾಕೆಂದರೆ ಓ ಟಿ ಟಿ ಗೆ ಸ್ವಲ್ಪ ವಿಭಿನ್ನ ರೀತಿ ಹಾಗೂ ಚಿತ್ರಮಂದಿರಕ್ಕೆ ಮತ್ತೊಂದು ರೀತಿ ಸಿನಿಮಾ ಸಿದ್ಧವಾಗುತ್ತಿದೆ. ಎಲ್ಲರೂ ಬಂದು ನಮ್ಮ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರದ ನಾಯಕಿ ಹೃತಿಕಾ ಶ್ರೀನಿವಾಸ್ ಮಾತನಾಡುತ್ತಾ ಈ ಚಿತ್ರ ತಂಡದ ಜೊತೆ ಕೆಲಸ ಮಾಡಿ ತುಂಬಾ ಕಲಿತಿದ್ದೇನೆ. ನಿರ್ದೇಶಕರು ಹೇಳುವ ಪ್ರಕಾರ ನಾನು ಕಣ್ಣಲ್ಲೇ ಮಾತನಾಡುತ್ತೇನೆ ಎಂದಿದ್ದು ಖುಷಿ ಇದೆ. ನನಗೆ ನನ್ನ ತಂದೆಯೇ ಮಾರ್ಗದರ್ಶನ. ಈ ಚಿತ್ರ ವಿಭಿನ್ನವಾಗಿ ಬಂದಿದೆ ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಹರಸಿ ಎಂದರು.
ಇನ್ನು ಈ ಚಿತ್ರದಲ್ಲಿ ಅನುಭವಿ ಹಾಗೂ ಯುವ ಪ್ರತಿಭೆಗಳ ದಂಡೆ ಸೇರಿಕೊಂಡಿದೆ ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ , ಚಿತ್ಕಲ ಬಿರಾದಾರ, ಮಂಜು ಪಾವಗಡ, ಮಹಾಂತೇಶ್ ಹಿರೇಮಠ್ ಸೇರಿದಂತೆ ಹಲವಾರು ಅಭಿನಯಿಸಿದ್ದಾರೆ. ಇನ್ನು ಚಿತ್ರದ ತಾಂತ್ರಿಕ ವಿಭಾಗದಲ್ಲಿ ದೇವ ವಡ್ಡೆ ಛಾಯಾಗ್ರಹಣ, ಉಮೇಶ್ ಆರ್. ಬಿ ಸಂಕಲನ ಮಾಡಿದ್ದಾರೆ. ಇದೇ ತಿಂಗಳು ಬಿಡುಗಡೆಯಾಗುತ್ತಿರುವ ಎರಡು ದೊಡ್ಡ ಚಿತ್ರಗಳ ನಡುವೆ ಈ ಔಟ್ ಆಫ್ ಸಿಲಬಸ್ ಸಿನಿಮಾ ಬಿಡುಗಡೆಯಾಗುತ್ತಿದೆ.