ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ “ಸರ್ಚ್” ಚಿತ್ರ ಶುಭಾರಂಭ.
ಯುವ ಪ್ರತಿಭೆಗಳ ಸರ್ಚ್ ಚಿತಕ್ಕೆ ನಟ ಶ್ರೀನಗರ ಕಿಟ್ಟಿ , ಸಾಹಿತಿ , ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಸಾಥ್.
ಬೆಂಗಳೂರು ನಗರದ ವಿಶ್ವೇಶ್ವರಯ್ಯ ಲೇಔಟ್ ಸಮೀಪದ ಮುದ್ದಿನ ಪಾಳ್ಯದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹೊಸ ಪ್ರತಿಭೆಗಳ ನಿರ್ಮಾಣದ “ಸರ್ಚ್” ಚಿತ್ರದ ಮುಹೂರ್ತ ನೆರವೇರಿತು. ಈ ಒಂದು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ನಟ
ಶ್ರೀನಗರ ಕಿಟ್ಟ ಕ್ಯಾಮೆರಾ ಚಾಲನೆ ಮಾಡಿದ್ದು , ಸಾಹಿತಿ , ಚಿತ್ರ ನಿರ್ದೇಶಕ ಹಾಗೂ ವಿ. ನಾಗೇಂದ್ರ ಪ್ರಸಾದ್ ಕ್ಲಾಪ್ ಹಿಡಿದು ಚಿತ್ರಕ್ಕೆ ಚಾಲನೆ ನೀಡಿ ಯುವ ಪ್ರತಿಭೆಗಳ ತಂಡಕ್ಕೆ ಶುಭವನ್ನು ಹಾರೈಸಿದರು.

ಸೌರಭ ನಾಗರಾಜ್ ಅರ್ಪಿಸಿ , ಶ್ರೀ ಬಾಲಾಜಿ ಕಂಬೈನ್ ಮೂಲಕ ನಿರ್ಮಾಣಗೊಳ್ಳುತ್ತಿರುವ ಚಿತ್ರ “ಸರ್ಚ್”. ಈ ಚಿತ್ರವನ್ನು ಯೋಗೇಶ್. ಎನ್ ನಿರ್ಮಾಣ ಮಾಡುತ್ತಿದ್ದು , ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ಇದು ನನ್ನ ಪ್ರಥಮ ಪ್ರಯತ್ನದ ಚಿತ್ರ. ನಾನು ಮೂಲತಃ ಕಂಟ್ರಾಕ್ಟರ್. ಒಂದು ಉತ್ತಮ ಸಿನಿಮಾ ನಿರ್ವಾಣ ಮಾಡಬೇಕೆಂಬ ಆಸೆಯಿಂದ ಈ ಚಿತ್ರ ಆರಂಭಿಸಿದ್ದೇನೆ. ನಿರ್ದೇಶಕರು ಹೇಳಿದ ಕಥೆ ನನಗೆ ಬಹಳ ಇಷ್ಟ ಆಯಿತು. ಹಾಗಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇನೆ. ಒಂದು ಚಿತ್ರ ನಿರ್ಮಾಣದಲ್ಲಿ ಯಾರ್ಯಾರು ಯಾವ ಕೆಲಸ ಮಾಡಬೇಕು ಅದನ್ನ ಮಾಡಿದರೆ ಚಿತ್ರ ಖಂಡಿತ ಉತ್ತಮವಾಗಿ ಬರುತ್ತದೆ ಎಂಬ ಅಭಿಪ್ರಾಯ ನನ್ನದು, ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.

ಈ ಚಿತ್ರವನ್ನು ಯುವ ನಿರ್ದೇಶಕ ವೈ . ಬಿ. ರಮೇಶ್ ಕೋಟೆ ಸಾರಥ್ಯ ವಹಿಸಿಕೊಂಡಿದ್ದು , ಚಿತ್ರದ ಕುರಿತು ಮಾತನಾಡುತ್ತಾ ನಾನು ಬಹಳ ವರ್ಷಗಳಿಂದ ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ. ಮೊದಲಿಗೆ ಲೈಟ್ ಮ್ಯಾನ್ ಆಗಿ ಬಂದು ಸಹಾಯಕ ಛಾಯಾಗ್ರಹಕನಾಗಿ ಕೆಲಸ ಮಾಡುತ್ತಾ , ಶಾರ್ಟ್ ಫಿಲಂ ಗಳನ್ನು ನಿರ್ದೇಶಿಸುತ್ತಾ ಸಾಗಿ ಬಂದೆ. ಈಗ ಸ್ವತಂತ್ರವಾಗಿ ಸರ್ಚ್ ಎಂಬ ವಿಭಿನ್ನ ಕಥೆಯ ಚಿತ್ರವನ್ನ ಆರಂಭಿಸಲು ಮುಂದಾಗಿದ್ದೇನೆ. ಇದೊಂದು ಒಂದು ರಾತ್ರಿಯಲ್ಲಿ ನಡೆಯುವಂತಹ ಕಥೆ ಇದು. ಆಕಸ್ಮಿಕವಾಗಿ ಪರಿಚಯ ಇದ್ದಂತಹ ಹುಡುಗಿ ಒಬ್ಬರು ಕಾಣೆಯಾದಾಗ ಅವರನ್ನು ಹುಡುಕುವಂತಹ ಕಥಾನಕ ಈ ಚಿತ್ರ ಒಳಗೊಂಡಿದೆ. ಇದರಲ್ಲಿ ಮತ್ತೊಂದು ಪ್ಯಾರಲಲ್ ಕಥೆ ಕೂಡ ಸಾಗುತ್ತದೆ. ಇದೆಲ್ಲವೂ ಕಥೆಗೆ ಪೂರಕವಾಗಿದ್ದು , ಕ್ಲೈಮಾಕ್ಸ್ ನಲ್ಲಿ ಕುತೂಹಲ ಹೆಚ್ಚಿಸುತ್ತದೆ. ಸುಮಾರು 25 ದಿನಗಳ ಕಾಲ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು , ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ಮಾಡಬೇಕೆಂದುಕೊಂಡಿದ್ದ ದೃಶ್ಯ ಈಗ ಚಿತ್ರೀಕರಣ ಮಾಡಲು ಆಗುತ್ತಿಲ್ಲ ಹಾಗಾಗಿ ಬೆಂಗಳೂರಿನಲ್ಲೇ ಒಂದು ಸೆಟ್ ಹಾಕಿ ಶೂಟ್ ಮಾಡಲು ನಿರ್ಧರಿಸಿದ್ದೇವೆ. ಈ ಚಿತ್ರದಲ್ಲಿ ನಟ ಪಂಕಜ್ ಎಸ್ ನಾರಾಯಣ್ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಹೊಸ ಪ್ರತಿಭೆಗಳು ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಮ್ಮ ಚಿತ್ರದ ಛಾಯಾಗ್ರಹಕ್ಕಾಗಿ ಅಶೋಕ್. ಕೆ. ರಾಜ್ , ಸಂಗೀತ ನಿರ್ದೇಶಕರಾಗಿ ಶ್ರೀ ಅಂಜನ್ , ಸಂಕಲನ ಅರ್ಜುನ್ ಹಾಗೂ ಸಹ ನಿರ್ಮಾಪಕರಾಗಿ ಸುಭಾನ್ ಕಾರ್ಯ ನಿರ್ವಹಿಸುತ್ತಿದ್ದು , ಈ ಚಿತ್ರದ ಜವಾಬ್ದಾರಿ ನೀಡಿರುವ ನಿರ್ಮಾಪಕ ಯೋಗೇಶ್ .ಎನ್ ರವರ ನಂಬಿಕೆ ಉಳಿಸಿಕೊಳ್ಳುತ್ತೇನೆ. ಈ ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಕೇಳಿಕೊಂಡರು.

ಇನ್ನು ಖ್ಯಾತ ನಿರ್ದೇಶಕ ಎಸ್ . ನಾರಾಯಣ್ ಸುಪುತ್ರ ಪಂಕಜ್ ಎಸ್ ನಾರಾಯಣ್ ಬಹಳ ಗ್ಯಾಪ್ ನಂತರ ಮತ್ತೆ ಕಾಣಿಸಿಕೊಂಡಿದ್ದು , ಈ ಸರ್ಚ್ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಿದ್ಧರಾಗಿದ್ದಾರೆ. ಚಿತ್ರದ ಕುರಿತು ಮಾತನಾಡುತ್ತಾ ನಾನು ಇಲ್ಲಿವರೆಗೂ ಒಂದಷ್ಟು ಸಿನಿಮಾಗಳನ್ನ ಮಾಡಿದೀನಿ , ಈ ರೀತಿಯಾದಂತ ಪಾತ್ರ ನಾನು ಮಾಡಿಲ್ಲ , ಇದೊಂದು ರಾತ್ರಿಯಲ್ಲಿ ನಡೆಯುವಂತಹ ಕಥೆ ಬಹಳ ಕುತೂಹಲವಾಗಿ ಸಾಗುತ್ತದೆ. ನಿರ್ದೇಶಕರು ಬಹಳ ಸೊಗಸಾಗಿ ಚಿತ್ರಕಥೆ ಮಾಡಿಕೊಂಡಿದ್ದಾರೆ. ನನಗೆ ಎರಡು ವರ್ಷಗಳ ಹಿಂದೆ ಇವರ ಪರಿಚಯವಾಗಿದ್ದು , ನನ್ನ ಹಿಂದಿನ ಸಿನಿಮಾದಲ್ಲೂ ಇವರ ಜೊತೆ ಕೆಲಸ ಮಾಡಿದ್ದೇನೆ. ಸದ್ಯದಲ್ಲೇ ಅದು ಬಿಡುಗಡೆಯಾಗಲಿದೆ. ಈ ಚಿತ್ರದ ನನ್ನ ಪಾತ್ರಕ್ಕೆ ನಾನು 100 ಪರ್ಸೆಂಟ್ ಶ್ರಮವಹಿಸಿ ಕೆಲಸ ಮಾಡುತ್ತೇನೆ. ಈಗಾಗಲೇ ಈ ಚಿತ್ರದ ಸಿನಿಮಾದ ಸಬ್ಜೆಕ್ಟ್ ಲೈನ್ ಚೆನ್ನಾಗಿದೆ. ಖಂಡಿತ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.

ಇನ್ನು ಚಿತ್ರದಲ್ಲಿ ನಾಯಕಿಯಾಗಿ ಕೃತಿಕಾ ಗೌಡ ಹಾಗೂ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕೊಡಗಿನ ಬೆಡಗಿ , ಸೀರಿಯಲ್ ನಟಿ ದಾಮಿನಿ ಅಭಿನಯಿಸುತ್ತಿದ್ದು , ಮತ್ತೊಂದು ಪ್ಯಾರಲಲ್ ಪಾತ್ರದ ಪ್ರಮುಖ ಪಾತ್ರಧಾರಿಯಾಗಿ ಸುಭಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಮತ್ತೊಂದು ಪಾತ್ರದಲ್ಲಿ ಲಕ್ಕಿ ರಾಮ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು , ಅನುಭವಿ ಹಾಗೂ ಯುವ ಪ್ರತಿಭೆಗಳ ದಂಡು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ.