ಭರ್ಜರಿ ಸದ್ದು ಮಾಡುತ್ತಿದೆ ರಾಕಿಂಗ್ ಸ್ಟಾರ್ ಯಶ್ “ಟಾಕ್ಸಿಕ್” ಟ್ರೈಲರ್
ಬೆಂಗಳೂರಿನಲ್ಲಿ ಮುಂಬೈ ತಾರೆಯರ ದಂಡು. ಹೇಳಿದಂತೆ ನಡೆದುಕೊಂಡ ರಾಕಿಂಗ್ ಸ್ಟಾರ್ ಯಶ್. ಬಹು ನಿರೀಕ್ಷಿತ ಟಾಕ್ಸಿಕ್ ಚಿತ್ರದ ಟ್ರೈಲರ್ ನಗರದ ಎ. ಎಂ. ಬಿ ಕಪಾಲಿ ಮಾಲಿನಲ್ಲಿರುವ ಅದ್ದೂರಿ ಸ್ಕ್ರೀನ್ ನಲ್ಲಿ ಅದ್ದೂರಿಯಾಗಿ “ಟಾಕ್ಸಿಕ್” ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಕೆವಿಎನ್ ಸಂಸ್ಥೆ ಆಯೋಜಿಸಿದ್ದು , ಈ ವರ್ಣರಂಜಿತ ವೇದಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಟಾಕ್ಸಿಕ್ ಚಿತ್ರದ ಟ್ರೈಲರನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ವೇಳೆ ತುಂಬಾ ಭಾವುಕರಾಗಿ ಮಾತನಾಡಿದ ನಾಯಕ ಕಮ್ ನಿರ್ಮಾಪಕ ರಾಕಿಂಗ್ ಸ್ಟಾರ್ ಯಶ್, ಇವತ್ತು ನಾವೆಲ್ಲರೂ ಇಲ್ಲಿ ಟಾಕ್ಸಿಕ್ ಇವೆಂಟ್ಗೆ ಸೇರಿದ್ದೇವೆ ಅಂದ್ರೆ ಅದಕ್ಕೆಲ್ಲ ಮುಖ್ಯ ಕಾರಣ ನಮ್ಮ ಕರ್ನಾಟಕದ ಜನತೆ. ಅವರು ನನಗೆ ಕೊಟ್ಟಿರುವ ಆಶೀರ್ವಾದ, ಅವರು ಕೊಟ್ಟಿರುವ ಶಕ್ತಿ, ಜವಾಬ್ದಾರಿ.
ಪ್ರತಿ ಸಿನಿಮಾದಲ್ಲೂ ಅವರು ನನಗೆ ಶಕ್ತಿ ಬೆಂಬಲ ನೀಡುತ್ತಾ ಬಂದಿದ್ದಾರೆ, ಅವರು ಗೆಲುವು ಕೊಟ್ಟಾಗಲೂ, ನನ್ನ ಸಿನಿಮಾ ಹಿಟ್ ಮಾಡಿದಾಗಲೂ ನನ್ನ ತಲೆಯಲ್ಲಿ ಓಡ್ತಿದ್ದು ಒಂದೇ ವಿಷಯ, ಅದು ನನ್ನ ಅಚೀವ್ಮೆಂಟ್ ಅಲ್ಲ, ಹೋಗು ನೀನಲ್ಲಿ ಕೆಲಸ ಮಾಡು ಅಂತ ಜನ ನನಗೆ ಕೊಟ್ಟಿದ್ದ ಜವಾಬ್ದಾರಿ, ಅದೇ ರೀತಿ ನಾನಲ್ಲಿ ಕೆಲಸ ಮಾಡ್ತ ಮುಂದಿನ ಹೆಜ್ಜೆ ಇಡ್ತಿದ್ದೀನಿ, ಇನ್ನೂ ಒಂದು ಹೆಜ್ಜೆ ಮುಂದೆ ಇಡಲು ನಿಮ್ಮೆಲ್ಲರ ಆಶೀರ್ವಾದ ಬೇಕು, ಟಾಕ್ಸಿಕ್ ನೀವು ಕೊಟ್ಟ ಹಳೆಯ ಗೆಲುವಿನ ಪ್ರತೀಕ. ಯಶ್ ಮೇಲೆ ನಂಬಿಕೆ ಇರಲಿ, ಕೆಲವೊಮ್ಮೆ ನಾವು ಕಾಲಕ್ಕೆ ತಕ್ಕಂತೆ ನಡೀಬೇಕು, ಕಾಲಕ್ಕೆ ತಕ್ಕಂತೆ ಕುಣೀಬೇಕು, ಇವತ್ತಿನ ಯುವಪೀಳಿಗೆ, ಇವತ್ತಿನ ನಮ್ಮ ಮನಸಿನ ಗೊಂದಲಗಳು ಏನಿರುತ್ತೆ ಅದಕ್ಕೆಲ್ಲ ಟಾಕ್ಸಿಕ್ ಸಿನಿಮಾ ಉತ್ತರ ನೀಡುತ್ತೆ. ಕನ್ನಡಿಗರು ಯಾವತ್ತೂ ತಲೆ ತಗ್ಗಿಸೋಕೆ ನಾವು ಬಿಡಲ್ಲ, ತಲೆ ಎತ್ಕೊಂಡು ಓಡಾಡಂಗಿರುತ್ತೆ, ಎಲ್ಲರೂ ಮೆಚ್ಚುವ ಅದ್ಭುತ ಸಿನಿಮಾ ಇದಾಗುತ್ತದೆ. ಹೆಮ್ಮೆಯಿಂದ ಸಿನಿಮಾ ನೋಡಿ. ಇದು ಬರೀ ಯಶ್ ಸಿನಿಮಾ ಅಲ್ಲ, ಈಸ್ ಆ್ಯನ್ ಇಂಡಿಯನ್ ಫಿಲಂ ಎಂದು ಹೇಳಿದರು.
ನಂತರ ಅವರು ಮಾತು ಮುಂದುವರೆಸುತ್ತಾ 2 ವರ್ಷಗಳ ಹಿಂದೆ ಆ.8 ರಂದು ಈ ಸಿನಿಮಾನ ಪ್ರಾರಂಭಿಸಿದೆವು. ಈ ಸಮಯದಲ್ಲಿ ನನ್ನ ಪತ್ನಿಗೆ ಧನ್ಯವಾದ ಹೇಳುತ್ತೇನೆ, ಅವರು ನನ್ನ ಜತೆ ಅಸೋಸಿಯೇಟ್ ರೀತಿ ಕೆಲಸ ಮಾಡಿದರು. ಈ ಸಿನಿಮಾಗೆ ತುಂಬಾ ಸಮಯ ತಗೊಂಡರೂ ಸಹನೆಯಿಂದ ನನ್ನ ನೋಡಿಕೊಂಡರು. ಹುಮಾ ಈ ಸಿನಿಮಾದ ಬ್ರಾಂಡ್ ಅಂಬಾಸಿಡರ, ರುಕ್ಮಿಣಿ ವಸಂತ್ ಅಂದ್ರೆ ನಮಗೆಲ್ಲ ಹೆಮ್ಮೆ, ಅವರು ಲಂಡನ್ನಲ್ಲಿ ಆಕ್ಟಿಂಗ್ ಕಲಿತು ಬಂದಿದ್ದಾರೆ. ಕಿಯಾರ ಈಸ್ ಡೌನ್ ಟು ಅರ್ಥ ಎಂದು ತಮ್ಮ ಚಿತ್ರದ ಕಲಾವಿದರ ಪಾಲ್ಗೊಳ್ಳುವಿಕೆಯನ್ನು ಮೆಚ್ಚಿಕೊಂಡರು,
ನಾಯಕಿ ಹುಮಾ ಖುರೇಶಿ ಮಾತನಾಡುತ್ತ ಬೆಂಗಳೂರು ನನಗೆ ತುಂಬಾ ಇಷ್ಟ. ನಾನೀ ಸುಂದರ ಸಿನಿಮಾದ ಭಾಗವಾಗಿರೋದು ನನ್ನ ಅದೃಷ್ಟ. ಪಾತ್ರದ ಬಗ್ಗೆ ಈಗಲೇ ಹೇಳಲಾರೆ. ಸಿನಿಮಾ ನೋಡಿ ಎಂದರೆ. ಮತ್ತೊಬ್ಬ ನಾಯಕಿ ರುಕ್ಮಿಣಿ ವಸಂತ್ ಮಾತನಾಡಿ ಇವತ್ತು ನಮ್ಮ ಸಿನಿಮಾದ ಪ್ರಚಾರದ ಮೊದಲನೇ ಹೆಜ್ಜೆ. ತುಂಬಾ ಸಂತಸದ ದಿನ. ಮೊದಲ ಚಿತ್ರದಿಂದ ಇಲ್ಲಿವರೆಗೆ ನನ್ನನ್ನು ಬೆಳೆಸುತ್ತ ಬಂದಿದ್ದೀರಿ. ಗೀತು ಅವರು ಈ ಚಿತ್ರದಲ್ಲಿ ನನಗೆ ಒಂದು ವಿಭಿನ್ನವಾದ ಪಾತ್ರವನ್ನು ಕೊಟ್ಟಿದ್ದಾರೆ ಎಂದು ಹೇಳಿಕೊಂಡರು.
ಉಳಿದಂತೆ ಚಿತ್ರದ ನಾಯಕಿಯರಾದ ತಾರಾ ಸುತಾರಿಯ, ಕಿಯಾರಾ ಅದ್ವಾನಿ, ನಯನತಾರಾ , ರುಕ್ಮಿಣಿ ವಸಂತ್ ಸೇರಿದಂತೆ ಹಾಗೂ ಅನೇಕ ಕಲಾವಿದರು ಚಿತ್ರದ ಕುರಿತು ಹಾಗೂ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಒಟ್ಟಾರೆ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಟಾಕ್ಸಿಕ್ ಚಿತ್ರ ಅದ್ದೂರಿ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
