Cini NewsSandalwoodTV Serial

“ಲವ್ ಮಾಕ್ಟೇಲ್3” ಮುದ್ದು ಮಗಳೇ’ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್.

Spread the love

ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ `ಲವ್ ಮಾಕ್ಟೇಲ್೩’ ಚಿತ್ರ ಮಾರ್ಚ್ 19ರಂದು ತೆರೆಗಾಣಲಿದೆ. ವಾರದ ಹಿಂದಷ್ಟೇ ಟ್ರೈಲರ್ ಬಿಡುಗಡೆಗೊಳಿಸಿದ್ದ ಚಿತ್ರತಂಡವೀಗ, ಬಿಡುಗಡೆಯ ದಿನಗಳು ಹತ್ತಿರದಲ್ಲಿರುವಾಗಲೇ ಒಂದಿಡೀ ಚಿತ್ರದ ಆತ್ಮದಂಥಾ `ಮುದ್ದು ಮಗಳೇ’ ಎಂಬ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಪ್ರೇಕ್ಷಕರ ಮುಂದಿಟ್ಟಿದೆ. ಅಪ್ಪ ಮಗಳ ಬಂಧವನ್ನು ಸಮರ್ಥವಾಗಿ ಹಿಡಿದಿಟ್ಟುಕೊಂಡಿರುವ ಸಾಹಿತ್ಯ, ಅದಕ್ಕೊಪ್ಪುವ ಸಂಗೀತದ ಮೂಲಕ ಈ ಹಾಡು ಕೇಳುಗರನ್ನು ಸೆಳೆಯವಂತಿದೆ.

 

ನಕ್ಕರೂ ಚೆಂದ ಅತ್ತರೂ ಚೆಂದ ಮುದ್ದಾದ ಬಂಧ ಈ ನನ್ನ ಕಂದ ಎಂಬಂಥಾ ಮಮತೆಯ ಸಾಲುಗಳಿರುವ ಈ ಹಾಡನ್ನು ಅರುಣ್ ನಾಯಕ್ ಬರೆದಿದ್ದಾರೆ. ನಕುಲ್ ಅಭಯಂಕರ್ ಸಂಗೀತವಿರುವ ಗೀತೆಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಹಾಡುಗಳ ಮೂಲಕ ನಕುಲ್ ಅಭಯಂಕರ್ ಸಂಗೀತ ನಿರ್ದೇಶಕರಾಗಿ ಮೋಡಿ ಮಾಡಿದ್ದಾರೆ. ಈ ಹಾಡು ಒಟ್ಟಾರೆ ಕಥೆಯ ಸೂಕ್ಷ್ಮ ಬಿಂದುವೊಂದನ್ನು ಪ್ರೇಕ್ಷಕರಿಗೆ ದಾಟಿಸುವಂತಿದೆ. ಲವ್ ಮಾಕ್ಟೇಲ್ ಸರಣಿಯುದ್ದಕ್ಕೂ ಹಾಡುಗಳಿಗೆ ನೀಡುತ್ತಾ ಬಂದಿರುವ ಪ್ರಾಶಸ್ತ್ಯ ಈ ಮೂಲಕ ಮುಂದುವರೆದಿದೆ.

ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Visited 1 times, 1 visit(s) today
error: Content is protected !!