Cini NewsSandalwoodTV Serial

ಜೂನ್ 26ರಂದು ಡಿ. ಸತ್ಯ ಪ್ರಕಾಶ್ ಸಾರಥ್ಯದ “X&Y” ಚಿತ್ರ ಬಿಡುಗಡೆ.

ಸ್ಯಾಂಡಲ್ ವುಡ್ ನಲ್ಲಿ ತಮ್ಮ ಶೀರ್ಷಿಕೆಯ ಮೂಲಕವೇ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿರುವಂತಹ “X&Y” ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಹಿಂದೆ “ರಾಮಾ ರಾಮಾ ರೇ” ಚಿತ್ರದ ಮೂಲಕ ಎಲ್ಲರ ವಿಶ್ವಾಸ , ಪ್ರೀತಿ , ಗಳಿಸಿದಂತಹ ಖ್ಯಾತ ನಿರ್ದೇಶಕ ಡಿ. ಸತ್ಯಪ್ರಕಾಶ್. ಈಗ ಇದೇ ಜೂನ್ 26ರಂದು “X&Y” ಚಿತ್ರವನ್ನು ನಿರ್ಮಿಸಿ , ನಿರ್ದೇಶಿಸುವುದರ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಈಗಾಗಲೇ ಪೋಸ್ಟರ್ ಸೇರಿದಂತೆ ಕೆಲವು ಕಂಟೆಂಟ್ ಗಳ ಮೂಲಕ ತೀವ್ರ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ನಿರ್ದೇಶಕ ಸತ್ಯಪ್ರಕಾಶ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. “X&Y” ಡಿ. ಸತ್ಯ ಪ್ರಕಾಶ್ ನಿರ್ದೇಶನದ ನಾಲ್ಕನೇ ಚಿತ್ರ. ಈ ಮೊದಲು “ರಾಮಾ ರಾಮಾ ರೇ “, “ಒಂದಲ್ಲಾ ಎರಡಲ್ಲಾ” ಮತ್ತು “ಮ್ಯಾನ್ ಆಫ್ ದಿ ಮ್ಯಾಚ್ ” ಚಿತ್ರಗಳನ್ನು ಅವರು ನಿರ್ದೇಶಿಸಿದ್ದು, ಮೂರು ಚಿತ್ರಗಳು ಭಿನ್ನ ಕಥೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ‌‌. ಈಗ “X&Y” ಚಿತ್ರ ಕೂಡ ಭರ್ಜರಿ ಯಶಸ್ಸು ಕಾಣುವಂತಾಗಲಿ.

ಈ ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಸಂಕಲನ ಬಿ.ಎಸ್. ಕೆಂಪರಾಜು, ಸಂಗೀತ ಕೌಶಿಕ್ ಹರ್ಷ , ಕಲೆ ವರದರಾಜ್ ಕಾಮತ್ ಮಾಡಿದ್ದಾರೆ. ಈ ಚಿತ್ರವನ್ನು ಸತ್ಯ ಪಿಕ್ಚರ್ಸ್ ನಿರ್ಮಿಸಿದ್ದು, ತಾರಾ ಬಳಗದಲ್ಲಿ ಬೃಂದಾ ಆಚಾರ್ಯ, ಡಿ.ಸತ್ಯಪ್ರಕಾಶ್, ಅಯಾನ, ಅಥರ್ವ ಪ್ರಕಾಶ್, ದೊಡ್ಡಣ್ಣ , ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರ್, ತೇನಪ್ಪನ್ ಮುಂತಾದವರು ಅಭಿನಯಿಸಿದ್ದಾರೆ. ಕುತೂಹಲ ಮೂಡಿಸಿರುವ “X&Y” ಚಿತ್ರ ಪ್ರೇಕ್ಷಕರ ಗಮನ ಸೆಳೆಯಬೇಕಿದೆ.

error: Content is protected !!