Cini NewsSandalwood

ಮಿಲ್ಕಿ ಬ್ಯೂಟಿ ತಮನ್ನಾ ಜೊತೆ ಕನ್ನಡದ ಸಿಂಹ….ಯಾವುದು ಆ ಸಿನಿಮಾ..?

ಸ್ಯಾಂಡಲ್‌ವುಡ್‌ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ ಓದೆಲಾ ರೈಲ್ವೆ ಸ್ಟೇಷನ್ ಸಿನಿಮಾ ಮೂಲಕ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ. ಈ ಮೂಲಕ ತೆಲುಗು ನೆಲದಲ್ಲಿ ಗಾಯನದ ಜೊತೆಗೆ ಕಲಾ ಸೇವೆಯನ್ನೂ ಮುಂದುವರೆಸಲಿದ್ದಾರೆ.

2022ರಲ್ಲಿ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಓದೆಲಾ ರೈಲ್ವೆ ಸ್ಟೇಷನ್ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಈ ಚಿತ್ರದಲ್ಲಿ ವಸಿಷ್ಠ ಸಿಂಹ ವಿಭಿನ್ನ ಪಾತ್ರದಲ್ಲಿ ಅಭಿನಯ ಮಾಡಿದ್ದರು. ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಕಾಣಿಸಿದ್ದಾರೆ.

ಇದೀಗ ಓದೆಲಾ ರೈಲ್ವೆ ಸ್ಟೇಷನ್‌ ಪಾರ್ಟ್ 2 ತಯಾರಾಗುತ್ತಿದೆ. ಅದರ ಭಾಗವಾಗಿ ನಿನ್ನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಮಿಲ್ಕ್​ ಬ್ಯೂಟಿ ತಮನ್ನಾ, ವಸಿಷ್ಠ ಸಿಂಹ ಫೋಟೋಗೆ ಪೋಸ್ ಕೊಟ್ಟಿದ್ದು, ಇದರಲ್ಲಿ ಹರಿಪ್ರಿಯ ಕೂಡ ಇದ್ದಾರೆ. ಓದೆಲಾ ರೈಲ್ವೆ ಸ್ಟೇಷನ್ ಸೀಕ್ವೆಲ್​ನ ಶೂಟಿಂಗ್ ನಿನ್ನೆಯಿಂದನೇ ಪ್ರಾರಂಭವಾಗಿದೆ.

ಓದೆಲಾ ರೈಲ್ವೆ ಸ್ಟೇಷನ್ ಮೊದಲ ಭಾಗದಲ್ಲಿ ನಟಿ ಹೆಬಾ ಪಟೇಲ್ ಜೊತೆ ವಸಿಷ್ಠ ಸಿಂಹ ಅಭಿನಯಿಸಿದ್ದರು. ಆದರೆ ಎರಡನೇ ಭಾಗದಲ್ಲಿ ಮಿಲ್ಕ್​​ ಬ್ಯೂಟಿ ತಮನ್ನಾ ಭಾಟಿಯಾ ಜೊತೆ ವಸಿಷ್ಠ ಸಿಂಹ ಹೆಜ್ಜೆ ಹಾಕಲಿದ್ದಾರೆ.ಹಾಗಂತ ಹೆಬಾ ಪಟೇಲ್ ಇಲ್ಲ ಅಂತಲ್ಲ. ಅವರು ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಮಧು ಕ್ರಿಯೇಷನ್ಸ್ ಮತ್ತು ಸಂಪತ್ ನಂದಿ ಟೀಂ ವರ್ಕ್ ಬ್ಯಾನರ್ ನಡಿ ಡಿ.ಮಧು ಚಿತ್ರ ನಿರ್ಮಾಣ ಮಾಡುತ್ತಿದ್ದು, ಅಶೋಕ ತೇಜ ಓದೆಲಾ ರೈಲ್ವೆ ಸ್ಟೇಷನ್ ಸೀಕ್ವೆಲ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೌಂದರ್ ರಾಜನ್ ಎಸ್ ಛಾಯಾಗ್ರಹಣ, ಕಾಂತಾರ ಮ್ಯೂಸಿಕ್ ಮಾಂತ್ರಿಕ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

error: Content is protected !!