ಯುವ ಪ್ರತಿಭೆಗಳ “ರೈತ ಮಕ್ಕಳಿಗೆ ಹೆಣ್ಣು ಕೊಡಿ” ಚಿತ್ರಕ್ಕೆ ಯುಎ ಸರ್ಟಿಫಿಕೇಟ್
ರೈತ ಮಕ್ಕಳಿಗೆ ಹೆಣ್ಣು ಸಿಗೋಲ್ಲ ಎಂಬುದು ಅನಾದಿ ಕಾಲದಿಂದಲೂ ಹೇಳುತ್ತಾ ಬಂದಿದ್ದು, ಈಗಲೂ ವಿಷಯ ಚಾಲ್ತಿಯಲ್ಲಿದೆ. ಇಂತಹದ್ದೇ ಅಂಶಗಳನ್ನು ಬಳಸಿಕೊಂಡು “ರೈತರ ಮಕ್ಕಳಿಗೆ ಹೆಣ್ಣು ಕೊಡಿ” ಎಂಬ ಸಿನಿಮಾವೊಂದನ್ನು ಸದ್ದಿಲ್ಲದೆ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ. ಕೆಂಪುರಾಮ್ ಹೆಡಿಯಾಲ ಸಿನಿಮಾಕ್ಕೆ ಕಥೆ , ಚಿತ್ರಕಥೆ , ಸಂಭಾಷಣೆ ಸಾಹಿತ್ಯ ರಚಿಸಿ ನಿರ್ದೇಶನ ಮಾಡುವ ಜೊತೆಗ ಮೆಲ್ಲುಲಿಗಾನ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಅನ್ನದಾತ ಮಕ್ಕಳಿಗೆ ವಧು ಸಿಗೋಲ್ಲ ಎಂಬುದು ರಾಜ್ಯವ್ಯಾಪ್ತಿ ಮಾರ್ದನಿಸಿ ಅವರ ಬದುಕಿನಲ್ಲಿ ತಲ್ಲಣವನ್ನ ಉಂಟು ಮಾಡುತ್ತಿದೆ. ಚಿತ್ರವು ವಿಭಿನ್ನ ಹಾಗೂ ವಿಶಿಷ್ಠವಾದ ಅನುಭವಗಳನ್ನು ತೋರಿಸಿಕೊಡುತ್ತದೆ. ಅವರ ಬದುಕಿನ ಸೂಕ್ಷ್ಮತೆಗಳು, ಅಲ್ಲಿನ ಗಂಭೀರ ಅಂಶಗಳು ಗಮನ ಸೆಳೆದು , ಬುದ್ಧಿ, ಭಾವ, ಚಿತ್ತ ಜಾಗೃತಗೊಳ್ಳುವಂತೆ ಮಾಡುತ್ತ ನೋಡುಗರ ಮನಸ್ಸನ್ನು ಒಳಹೊಕ್ಕಿಸಿ, ಸನ್ನಿವೇಶಗಳಲ್ಲಿ ಕಾಣುವ ಪಾತ್ರಗಳನ್ನು ನಮ್ಮ ಜೀವನದ ಪ್ರತಿಬಿಂಬವಾಗುವಂತೆ ಮಾಡುತ್ತದೆ. ಗೆಲ್ಲುತ್ತಾ ಹೋಗುವವರು ಇತಿಹಾಸ ಸೃಷ್ಟಿಸುತ್ತಾರೆ. ಆದರೆ ಸೋತು ಗೆಲ್ಲುವವರು ಇತಿಹಾಸವನ್ನ ಬದಲಾಯಿಸುತ್ತಾರೆ ಎನ್ನುವಂತಹ ತೂಕದ ಸಂದೇಶವನ್ನು ಹೇಳಲಾಗಿದೆ.
ಬಹುತೇಕ ರಂಗಭೂಮಿ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ತಾರಾಗಣದಲ್ಲಿ ಜಗದೀಶ್ ಮೂಕ, ದಿವ್ಯಶ್ರೀ, ಜೈ ಅಮೋಘ ದಾಸ್, ಅಗಸ್ತ್ಯ ಪ್ರೇಮ್, ಸಂತೋಷ್ ಜೋಗುಳ್, ಅಶ್ವಿನಿ ಮುಂತಾದವರು ನಟಿಸಿದ್ದಾರೆ.
ಸಂಗೀತ , ಛಾಯಾಗ್ರಹಣ , ಸಂಕಲನ , ರೋಹನ್ .ಎಸ್
ದೇಸಾಯಿ , ಸಾಹಸ ಸಂತೋಷ ರಾಥೋಡ್ , ನೃತ್ಯ ಅಕುಲ್ ಮಾಸ್ಟರ್ , ಅಜಯ್ ಜೈ ಕೃಷ್ಣ , ಸಾಕ್ಷಿ ಅವರದಾಗಿದೆ. ಹುಬ್ಬಳ್ಳಿ ಧಾರವಾಡ, ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.
