Cini NewsSandalwood

“ದಿ ಮೀನಾಕ್ಷಿ ಕಾಫಿ ಬಾರ್” ಶುಭಾರಂಭ…ಕಾಫಿ ಸವಿದು ದೋಸೆ ಚಪ್ಪರಿಸಿದ ಶಾನ್ವಿ ಶ್ರೀವಾಸ್ತವ್.

Spread the love

2019ರಲ್ಲಿ ರಾಂಧವ ಎಂಬ ಸಿನಿಮಾ ಬಂದಿತ್ತು. ಭುವನ್ ಪೊನ್ನಣ್ಣ ಹೀರೋ ಆಗಿ ನಟಿಸಿದ್ದ ಈ ಚಿತ್ರಕ್ಕೆ ಸುನೀಲ್ ಎಸ್ ಆಚಾರ್ಯ ಆಕ್ಷನ್ ಕಟ್ ಹೇಳಿದ್ದರು. ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಸುನೀಲ್ ಇದೀಗ ಹೊಸ ಪಯಣ ಆರಂಭಿಸಿದ್ದಾರೆ. ಹೋಟೆಲ್ ಉದ್ಯಮಕ್ಕೆ ಹೆಜ್ಜೆ ಇಟ್ಟಿದ್ದಾರೆ. ದಿ ಮೀನಾಕ್ಷಿ ಕಾಫಿ ಬಾರ್ ಎಂಬ ಹೊಸ ರೆಸ್ಟೋರೆಂಟ್ ಗೆ ಪ್ರಾರಂಭಿಸಿದ್ದಾರೆ.

ಬೆಂಗಳೂರಿನ ರಾಜಾಜಿ ನಗರದಲ್ಲಿ ದಿ ಮೀನಾಕ್ಷಿ ಕಾಫಿ ಬಾರ್ ಶುಭಾರಂಭಗೊಂಡಿದೆ. ಸುನೀಲ್ ಎಸ್ ಆಚಾರ್ಯ ಹೊಸ ಕನಸಿಗೆ ಸ್ಯಾಂಡಲ್ ವುಡ್ ಸಾಥ್ ಕೊಟ್ಟಿದೆ. ನಟಿಯರಾದ ಶಾನ್ವಿ ಶ್ರೀವಾಸ್ತವ್, ಅನುಷಾ ರೈ, ಹಿರಿಯ ಕಲಾವಿದೆ ಯಮುನಾ ಶ್ರೀನಿಧಿ, ನಾಯಕರಾದ ಕಾರ್ತಿಕ್, ಪ್ರಥಮ್, ಗುರುನಂದನ್ ಕಾಫಿ ಕುಡಿದು ದೋಸೆ ಸವಿದು ಸುನೀಲ್ ಹೊಸ ಕೆಲಸಕ್ಕೆ ಶುಭಾಶಯ ತಿಳಿಸಿದರು.

ಅಂದಹಾಗೇ ಸುನೀಲ್ ಎಸ್ ಆಚಾರ್ಯ ಈ ಹಿಂದೆ ದೊಡ್ಡ ಹೋಟೆಲ್ ವೊಂದರ ಡೈರೆಕ್ಟರ್ ಆಗಿ ಕೆಲಸ ಮಾಡಿದವರು. ಆ ಅನುಭವದಿಂದ ಅವರನ್ನು ಸ್ವತಃ ರೆಸ್ಟೋರೆಂಟ್ ಪ್ರಾರಂಭಿಸಿದ್ದಾರೆ. ದಕ್ಷಿಣ ಭಾರತದ ಆಹಾರಗಳಾದ ಇಡ್ಲಿ, ದೋಸೆ ಸೇರಿದಂತೆ ಬಗೆ ಬಗೆಯ ಖಾದ್ಯಗಳು ಇಲ್ಲಿ ದೊರೆಯುತ್ತವೆ.

ದಿ ಮೀನಾಕ್ಷಿ ಕಾಫಿ ಬಾರ್ ಓಪನ್ ಆಗಿ ಎರಡು ಮೂರು ದಿನವಷ್ಟೇ ಕಳೆದಿದ್ದು, ಗ್ರಾಹಕರಿಂದ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ. ಮೊದಲ ಶಾಖೆ ಕಾರ್ಯ ಆರಂಭಗೊಂಡಿರುವ ಬೆನ್ನಲ್ಲೇ ಮತ್ತೆ ಐದು ಬ್ರ್ಯಾಂಚ್ ತೆರೆಯೋದಿಕ್ಕೆ ಸುನೀಲ್ ಸಜ್ಜಾಗಿದ್ದಾರೆ. ಮುಂದಿನ ತಿಂಗಳು ಎರಡನೇ ಶಾಖೆ ಆರಂಭಿಸಲಿದ್ದು ಆ ನಂತರ ಮಿಕ್ಕ ನಾಲ್ಕು ಬ್ರ್ಯಾಂಚ್ ಓಪನ್ ಮಾಡದಿದ್ದಾರೆ. ಸುನೀಲ್ ಎಸ್ ಆಚಾರ್ಯ ಈ ರೆಸ್ಟೋರೆಂಟ್ ಸಂಸ್ಥಾಪಕರಾಗಿದ್ದು, ಪ್ರದೀಪ್ ಡೈರೆಕ್ಟರ್ ಆಗಿದ್ದಾರೆ.

Visited 1 times, 1 visit(s) today
error: Content is protected !!