Cini NewsSandalwood

ಸೆಪ್ಟೆಂಬರ್ 27 ರಂದು “ಮರ್ಫಿ” ಚಿತ್ರ ಬಿಡುಗಡೆ

ಪ್ರಭು ಮುಂಡ್ಕೂರ್, ರೋಶನಿ ಪ್ರಕಾಶ್, ಇಳಾ ವೀರ್ಮಲ್ಲ ನಟಿಸಿರುವ ಮರ್ಫಿ ಚಿತ್ರ ಇದೇ ಸೆಪ್ಟೆಂಬರ್ ೨೭ ರಂದು ಬಿಡುಗಡೆಯಾಗಲಿದೆ. ಬಿ.ಎಸ್.ಪಿ ವರ್ಮ ರವರ ನಿರ್ದೇಶನದ ಎರಡನೇ ಕನ್ನಡ ಚಿತ್ರವಾಗಿದ್ದು ಇದರ ಸಂಗೀತವನ್ನು ಅರ್ಜುನ ಜನ್ಯ, ಸಿಲ್ವೆಸ್ಟರ್ ಪ್ರದೀಪ್ ಹಾಗೂ ರಜತ್-ಕೀರ್ತನ್ ರವರು ಒದಗಿಸಿದ್ದಾರೆ. ಈ ಚಿತ್ರದ ಛಾಯಾಗ್ರಹಣೆಯನ್ನು ಆದರ್ಶ ಆರ್ ರವರು ಮಾಡಿ, ಬಿ ಎಸ್ ಪಿ ವರ್ಮ ರವರೊಡನೆ ಪ್ರಭು ಮುಂಡ್ಕೂರ್ ರವರು ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ.

ಇನ್ನು ತಾರಾಬಳಗದಲ್ಲಿ ಹೆಚ್.ಜಿ.ದತ್ತಾತ್ರೇಯ(ದತ್ತಣ್ಣ), ಅಶ್ವಿನ್ ರಾವ್ ಪಲ್ಲಕ್ಕಿ, ಮಹಾಂತೇಶ ಹಿರೇಮಠ ಮತ್ತು ರಾಮಪ್ರಸಾದ್ ಬಾಣಾವರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ನಾಲ್ಕು ವರ್ಷ ಪರಿಶ್ರಮದ ಈ ಚಲನಚಿತ್ರಕ್ಕೆ ಕಾಂತಾರ, ಸಲಾರ್ ಹಾಗೂ ಸಪ್ತ ಸಾಗರದಾಚೆಯೆಲ್ಲೋ ಖ್ಯಾತಿಯ ಎಂ ಆರ್ ರಾಜಕೃಷ್ಣನ್ ರವರ ಆಡಿಯೋಗ್ರಫಿ ಹಾಗೂ ಶ್ರೀಜಿತ್ ಸಾರಂಗ್ ರವರ ಡಿ ಐ, ಚಿತ್ರದ ನಕ್ಷೆಯನ್ನು ಉನ್ನತ ರೀತಿಯಲ್ಲಿ ಬದಲಿಸಿದೆ. ಮರ್ಫಿ ಚಲನಚಿತ್ರವು ಇದೇ ಸೆಪ್ಟೆಂಬರ್ 27 ರಂದು ಕರ್ನಾಟಕಾದ್ಯಂತ ಬಿಡುಗಡೆಯಾಗಲಿದ್ದು ಎಲ್ಲರಿಗೂ ಕಥೆ, ಕಾವ್ಯ, ಸಂಗೀತ, ನಟನೆ, ಹಾಗೂ ಭಾವನಾತ್ಮಕದ ರಸದೌತನ ನೀಡಲಿದೆಯಂತೆ

error: Content is protected !!