Cini NewsMovie ReviewSandalwood

ಸರಿ ತಪ್ಪುಗಳ ವಾದ-ವಿವಾದದ ಕೋರ್ಟ್ ಡ್ರಾಮಾ “ದ ಜಡ್ಜ್‌ಮೆಂಟ್” (ಚಿತ್ರವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5
ಚಿತ್ರ : ದ ಜಡ್ಜ್‌ಮೆಂಟ್
ನಿರ್ದೇಶಕ : ಗುರುರಾಜ ಕುಲಕರ್ಣಿ
ನಿರ್ಮಾಣ : G9 ಎಂಟರ್ಟೈನ್ಮೆಂಟ್
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಹಕ : ಪಿ.ಕೆ.ಹೆಚ್ ದಾಸ್
ಸಂಕಲನ : ಬಿ.ಎಸ್. ಕೆಂಪರಾಜು
ತಾರಾಗಣ : ವಿ. ರವಿಚಂದ್ರನ್ , ಲಕ್ಷ್ಮಿ ಗೋಪಾಲಸ್ವಾಮಿ, ಮೇಘನಾ ಗಾಂವ್ಕರ್, ದಿಗಂತ್, ಧನ್ಯ ರಾಮ್‌ಕುಮಾರ್ , ರಂಗಾಯಣ ರಘು, ಕೃಷ್ಣ ಹೆಬ್ಬಾಳೆ ಪ್ರಕಾಶ್ ಬೆಳವಾಡಿ ಹಾಗೂ ಮುಂತಾದವರು…

ಬೆಳ್ಳಿ ಪರದೆ ಮೇಲೆ ಕೋರ್ಟ್ ಡ್ರಾಮಾ ಕಥಾನಕ ಚಿತ್ರಗಳು ತುಂಬಾ ವಿರಳ. ಕುತೂಹಲ ಮೂಡಿಸುವ ವಾದ ವಿವಾದ , ಸರಿ ತಪ್ಪುಗಳ ಚರ್ಚೆ ಹೀಗೆ ಅನೇಕ ವಿಚಾರಗಳು ಗಮನ ಸೆಳೆಯುತ್ತಿತ್ತು. ಸುಂದರ ಬದುಕು ಕಟ್ಟಿಕೊಳ್ಳುವ ಯುವಕನ ಬದುಕಿನಲ್ಲಿ ಎದುರಾಗುವ ಕೊಲೆಯ ವಿಚಾರ.

ಸ್ಟೇಷನ್ , ಕೋರ್ಟ್ ನಲ್ಲಿ ಪರದಾಟ. ಕುಟುಂಬ , ಸ್ನೇಹಿತರು , ಪ್ರೇಯಸಿಯಿಂದ ದೂರ. ಕೋರ್ಟ್ ನಲ್ಲಿ ಕಾಣದ ಕೈಗಳ ಕಾಟ. ಹೀಗೆ ಹಲವು ವಿಚಾರಗಳ ಸುಳಿಯಲ್ಲಿ ನಡೆಯುವ ಕೋರ್ಟ್ ರೂಮ್ ಡ್ರಾಮಾವನ್ನ ಲೀಗಲ್ ಹಾಗೂ ಥ್ರಿಲ್ಲರ್ ಮೂಲಕ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ದ ಜಡ್ಜ್‌ಮೆಂಟ್”. ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಹಣ ಗಳಿಸಿ ತಂದೆ ತಾಯಿಯನ್ನ ಸಾಕುತ್ತಾ ತನ್ನ ಬಾಲ್ಯದ ಗೆಳತಿಯನ್ನ ಮದುವೆ ಮಾಡಿಕೊಂಡು ನೆಮ್ಮದಿಯಾಗಿರಬೇಕೆಂಬ ಆಸೆ ಅನಿಲ್ (ದಿಗಂತ್) ಗೆ.

ಇದರ ನಡುವೆ ಗೆಳೆಯರೊಟ್ಟಿಗೆ ಪಾರ್ಟಿಯಲ್ಲಿದ್ದ ಅನಿಲ್ ಗೆ ಸಾಮಾಜಿಕ ಕಾರ್ಯಕರ್ತೆ ಎನ್‌ಜಿಓ ಮುಖ್ಯಸ್ಥೆ ರೂಪ ಕರೆ ಮಾಡಿ ಅಪಾರ್ಟ್ಮೆಂಟ್ಗೆ ಬರುವಂತೆ ಹೇಳುತ್ತಾಳೆ. ಅನಿಲ್ ಒಬ್ಬ ಏಜೆಂಟಾಗಿದ್ದು ಶೇರು ಮಾರುಕಟ್ಟೆಗೆ ಇನ್ವೆಸ್ಟ್ಮೆಂಟ್ ಹಾಗೂ ಪ್ರಾಪರ್ಟಿ ಕೊಡಿಸುವ ಕೆಲಸವನ್ನು ಮಾಡುತ್ತಿರುತ್ತಾನೆ.ಈ ವಿಚಾರವಾಗಿ ಬಂದು ಚರ್ಚೆ ಮಾಡುತ್ತಾನೆ. ಇದರ ನಡುವೆ ಫೋನ್ ಬಂದ ಕಾರಣ ಅನಿಲ್ ಹೊರಹೋಗಿ ಬರುವಷ್ಟರಲ್ಲಿ ರೂಪ ಕೊಲೆಯಾಗಿರುತ್ತದೆ.

ಇದು ಹೈ ಪ್ರೊಫೈಲ್ ಕೇಸ್ ಆಗಿದ್ದು , ಅನಿಲ್ ವಿರುದ್ಧ ಕೇಸನ್ನ ಫೇಮಸ್ ಲಾಯರ್ ಗೋವಿಂದ್ (ವಿ. ರವಿಚಂದ್ರನ್ ) ತೆಗೆದುಕೊಳ್ಳುತ್ತಾರೆ. ತನ್ನ ಮಗನನ್ನ ರಕ್ಷಿಸುವಂತೆ ಅನಿಲ್ ತಂದೆ (ರಂಗಾಯಣ ರಘು) ಫೇಮಸ್ ಲಾಯರ್ ಭಾರ್ಗವಿ (ಲಕ್ಷ್ಮಿ ಗೋಪಾಲಸ್ವಾಮಿ) ಮೊರೆ ಹೋಗುತ್ತಾನೆ.

ಈ ಕೇಸ್ ಇಬ್ಬರು ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಫಾಸ್ಟ್ರ್ಯಾಕ್ ಕೋರ್ಟ್ಗೆ ಒಳಪಟ್ಟಿರುತ್ತದೆ. ಇದು ಇಬ್ಬರೂ ವಕೀಲರಿಗೂ ಪ್ರತಿಷ್ಠೆಯಾಗಿದ್ದು , ಸತ್ಯವನ್ನ ಹೊರಹಾಕಲು ವಾದ ವಿವಾದ ಜೋರಾಗಿರುತ್ತದೆ. ಈ ಕೇಸಿನ ಒಂದೊಂದೇ ವಿಚಾರ ಹೊರ ಬರುತ್ತಿದ್ದಂತೆ ದೇಶವನ್ನೇ ಬೆಚ್ಚಿಬಿಳಿಸಿದಂತಹ ಹವಾಲ ಹಣದ ವೈವಾಟು, ರಾಜಕೀಯ ನಾಯಕರ ಷಡ್ಯಂತರ, ಕೊಲೆಯ ಹಿಂದಿನ ನಿಗೂಢತೆ , ಹೀಗೆ ಒಂದಕ್ಕೊಂದು ಸರಪಳಿಯಂತೆ ಸಾಗಿ ಅಮಾಯಕ ಕೂಡ ಶಿಕ್ಷೆ ಅನುಭವಿಸುವ ಹಂತಕ್ಕೆ ಬಂದರೂ ಅದರಿಂದ ಹೊರಬರಲು ನಡೆಯುವ ರೋಚಕ ಘಟನೆಗಳು ಗಮನ ಸೆಳೆಯುವಂತೆ ಕ್ಲೈಮ್ಯಾಕ್ಸ್ ಅಂತಕ್ಕೆ ಬಂದು ನಿಲ್ಲಿಸುತ್ತದೆ.

ಕೊಲೆ ಮಾಡಿದ್ದು ಯಾರು…
ಅನಿಲ್ ಗೆ ಜೈಲು ವಾಸ ಪಕ್ಕನಾ…
ರಾಜಕೀಯ ಕೈವಾಡನಾ…
ಗೆಲುವು ಯಾರಿಗೆ…
ಈ ಎಲ್ಲಾ ಕೋರ್ಟ್ ಡ್ರಾಮಾ ನೋಡಬೇಕಾದರೆ ಒಮ್ಮೆ ಜಡ್ಜ್ ಮೆಂಟ್ ಚಿತ್ರ ನೋಡಿ.

ಒಂದು ಮರ್ಡರ್ ಕತೆಯನ್ನು ಕೋರ್ಟ್ ಡ್ರಾಮಾ ಮೂಲಕ ಬಹಳ ಸಮರ್ಥವಾಗಿ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕ ಗುರುರಾಜ್ ಕುಲಕರ್ಣಿ. ಬಹಳ ದಿನಗಳ ಬಳಿಕ ಲೀಗಲ್ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ಕೋರ್ಟ್ ದೃಶ್ಯಗಳು ಗಮನ ಸೆಳೆಯುವಂತಿತ್ತು. ಸಂಬಂಧ , ಮುಗ್ಧತೆ , ಪ್ರೀತಿ , ತಂತ್ರ , ಪ್ರತಿತಂತ್ರ , ರಾಜಕೀಯ ಷಡ್ಯಂತರ ಸುತ್ತ ಆಯ್ಕೆ ಮಾಡಿಕೊಂಡಿರುವ ಪಾತ್ರವರ್ಗಗಳ ಕೂಡ ಉತ್ತಮವಾಗಿ ಮೂಡಿಬಂದಿದೆ.

ಆದರೆ ಕ್ಲೈಮ್ಯಾಕ್ಸ್ ಸ್ವಲ್ಪ ವೇಗವಾಗಿ ಮುಗಿಸಿದಂತಿದೆ. ಇಂತಹ ವಿಭಿನ್ನ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರುಗಳ ಸಹಕಾರ ಮೆಚ್ಚುವಂತಿದೆ. ಇನ್ನು ಛಾಯಾಗ್ರಹಕ ಪಿ.ಕೆ.ಹೆಚ್ ದಾಸ ಕ್ಯಾಮೆರಾ ಕೈಚಳಕ, ಅನುಪ್ ಸೀಳಿನ್ ಹಿನ್ನೆಲೆ ಸಂಗೀತ ಹಾಗೂ ಬಿ.ಎಸ್. ಕೆಂಪರಾಜ್ ಸಂಕಲನ ಅಚ್ಚುಕಟ್ಟಾಗಿ ಮೂಡಿಬಂದಿದೆ.

ಇನ್ನು ಬಹಳ ಗ್ಯಾಪ್ ನಂತರ ಕ್ರೇಜಿಸ್ಟಾರ್ ವಿ .ರವಿಚಂದ್ರನ್ ಲಾಯರ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಯುದ್ದಕಾಂಡ ಚಿತ್ರದ ಲಾಯರ್ ಪಾತ್ರದ ಗತ್ತು ನೆನಪು ಮಾಡಿಸುತ್ತದೆ. ಇದು ರವಿಚಂದ್ರನ್ ಗೆ ಸಿಕ್ಕ ಮತ್ತೊಂದು ಸೂಕ್ತ ಪಾತ್ರ ಎನಿಸುತ್ತದೆ. ಅದೇ ರೀತಿ ಇನ್ನೋರ್ವ ಲಾಯರ್ ಪಾತ್ರಧಾರಿ ಲಕ್ಷ್ಮಿ ಗೋಪಾಲಸ್ವಾಮಿ ಕೂಡ ಸೌಮ್ಯವಾಗಿ ವಾದ ಮಂಡಿಸುತ್ತಾ ತಮ್ಮ ಪಾತ್ರವನ್ನು ಜೀವಿಸಿದ್ದಾರೆ.

ಇನ್ನು ಅಮಾಯಕ ಮುಗ್ಧ ಹುಡುಗನಾಗಿ , ಕೋರ್ಟ್ ನಲ್ಲಿ ಪರದಾಡುವ ಪಾತ್ರವನ್ನು ದಿಗಂತ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನೂ ನಾಯಕನ ತಂದೆಯಾಗಿ ರಂಗಾಯಣ ರಘು ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಇನ್ನು ಮಂತ್ರಿ ಖುರೇಶಿಯ ಪಾತ್ರದಲ್ಲಿ ಕೃಷ್ಣ ಹೆಬ್ಬಾಳೆ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ನಾಯಕನ ಪ್ರೇಯಸಿಯಾಗಿ ಧನ್ಯ ರಾಮ್ ಕುಮಾರ್ , ಕ್ರಿಮಿನಲ್ ಬುದ್ಧಿಯ ಲಾಯರಾಗಿ ಪ್ರಕಾಶ್ ಬೆಳವಾಡಿ , ರವಿಚಂದ್ರನ್ ಪತ್ನಿಯಾಗಿ ಮೇಘನಾ ಗಾಂವ್ಕರ್, ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ರವಿಶಂಕರ್ ಗೌಡ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಪೂರಕವಾಗಿ ಮೂಡಿ ಬಂದಿದೆ. ಒಟ್ಟಾರೆ ಕುತೂಹಲ ಮೂಡಿಸುವ ಈ ಚಿತ್ರವು ವಾದ ವಿವಾದಗಳ ನಡುವೆಯೇ ವಿಭಿನ್ನ ಅನುಭವ ನೀಡಿದ್ದು , ಒಮ್ಮೆ ನೋಡುವಂತಿದೆ

error: Content is protected !!