Cini NewsMovie ReviewSandalwood

ಸಾವಿನ ಹಿಂದಿನ ಥ್ರಿಲ್ಲಿಂಗ್ “ಎವಿಡೆನ್ಸ್” (ಚಿತ್ರವಿಮರ್ಶೆ-ರೇಟಿಂಗ್ : 3/5)

ರೇಟಿಂಗ್ : 3/5
ಚಿತ್ರ : ಎವಿಡೆನ್ಸ್
ನಿರ್ದೇಶಕ : ಪ್ರವೀಣ್ ಸಿ. ಪಿ.
ನಿರ್ಮಾಪಕರು :ಶ್ರೀನಿವಾಸ್‌ ಪ್ರಭು , ಕೆ.ಮಾದೇಶ್, ನಟರಾಜ್ ಸಿ.ಎಸ್.
ಸಂಗೀತ : ಆರೋನ್ ಕಾರ್ತಿಕ್ ವೆಂಕಟೇಶ್
ಛಾಯಾಗ್ರಹಕ : ರವಿ ಸುವರ್ಣ
ತಾರಾಗಣ : ರೋಬೊ ಗಣೇಶನ್ , ಮಾನಸ ಜೋಶಿ, ಆಕರ್ಷ್ ಆದಿತ್ಯ , ರಚಿತಾ, ಮನಮೋಹನ್ ರೈ , ಪೂಜಿತ ಬೋಬೆಗೌಡ, ಚಮಕ್‌ಚಂದ್ರ, ಶಿವಕುಮಾರ್ ಆರಾಧ್ಯ ಹಾಗೂ ಮುಂತಾದವರು…

ಸಾಮಾನ್ಯವಾಗಿ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯುವುದು ಸರ್ವೇ ಸಾಮಾನ್ಯ. ಇಂತಹದ್ದೇ ಕಥಾನಕದಲ್ಲಿ ಒಂದು ತ್ರಿಕೋನ ಪ್ರೇಮಕಥಾಹಂದರದಲ್ಲಿ ಸ್ನೇಹ , ಪ್ರೀತಿ , ಸಹಕಾರ , ದ್ವೇಷದ ಸುಳಿಯಲ್ಲಿ ಕೊಲೆ ನಡೆದಾಗ ಪೊಲೀಸ್ ಅಧಿಕಾರಿಗಳು ಯಾವ ರೀತಿ ಇಂಟರ್ಗೇಷನ್ ಮಾಡಿ ಸಾಕ್ಷಿಗಳನ್ನ ಹೇಗೆ ಹೊರ ತೆಗೆಯುತ್ತಾರೆ ಎಂಬುದನ್ನ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ಎವಿಡೆನ್ಸ್”.

ಗೂಗಲ್ ಮ್ಯಾಪ್ ನೋಡಿಕೊಂಡು ಬೇರೆಯದೆ ಸ್ಥಳಕ್ಕೆ ಹೋಗುವ ವ್ಯಕ್ತಿಗೆ ಸಿಗುವ ಒಂದು ಬ್ಯಾಗ್ , ಅದರಲ್ಲಿರುವ ಕ್ಯಾಮೆರಾ ವಿಡಿಯೋ ನೋಡುತ್ತಿದ್ದಂತೆ ತೆರೆದುಕೊಳ್ಳುವ ಕಥಾಂದರ, ಡಾಕ್ಟರ್ ಕೆವೀನ್ (ರೋಬೋ ಗಣೇಶ್) ನನ್ನ ವಿಶೇಷ ಇನ್ವೆಸ್ಟಿಗೇಷನ್ ಆಫೀಸರ್ ಪ್ರಿಯ ರಾಮಕೃಷ್ಣನ್ (ಮಾನಸ ಜೋಶಿ) ಸುಯಿಸೈಡ್ ಕೇಸ್ ಎಂದು ಕ್ಲೋಸ್ ಆಗಿರುವ ಮರ್ಡರ್ ಕೇಸ್ ಅನ್ನ ಓಪನ್ ಮಾಡಿ ವಿಚಾರಣೆ ನಡೆಸುವ ಹಂತದಲ್ಲಿ ಸತ್ತ ದಂಪತಿಗಳ ಆತ್ಮೀಯ ಗೆಳೆಯ ಡಾ. ಕೆವಿನ್ ರವರನ್ನು ಕರೆಸಿ ವಿಚಾರಣೆ ನಡೆಸುತ್ತಾರೆ.

ಬಾಲ್ಯದಿಂದಲೂ ಒಟ್ಟಿಗೆ ಬೆಳೆದ ಕೆವಿನ್ ಹಾಗೂ ಅನಾಥ ಹುಡುಗ ಸ್ವರೂಪ್ ಆತ್ಮೀಯ ಸ್ನೇಹಿತರು, ಓದು ಆಟದ ವಿಚಾರದಲ್ಲಿ ಇಬ್ಬರಿಗೂ ಪೈಪೋಟಿ. ಬೆಳೆದು ದೊಡ್ಡವರಾದ ಮೇಲೆ ಕೆವಿನ್ ಮೆಡಿಕಲ್ ಓದಿ ಡಾಕ್ಟರ್ ಆಗುತ್ತಾನೆ. ಗೆಳೆಯ ಸ್ವರೂಪ್ ಅಚಾನಕ್ಕಾಗಿ ಹಾಸ್ಪಿಟಲ್ ನಲ್ಲಿ ಡಾಕ್ಟರ್ ಕೆವಿನ್ ಗೆ ಸಿಗುತ್ತಾನೆ. ಮುಂದೆ ಇಬ್ಬರು ಸ್ನೇಹಿತರು ಒಟ್ಟಗೆ ಇರಲು ನಿರ್ಧರಿಸುತ್ತಾರೆ.

ಇದರ ನಡುವೆ ಸ್ವರೂಪ್ ತನ್ನ ಗೆಳತಿ ಸಾನ್ವಿಯನ್ನು ಮದುವೆಯಾಗಲು ಮುಂದಾಗುತ್ತಾನೆ. ಅದಕ್ಕೆ ಗೆಳೆಯ ಕೆವಿನ್ ಕೂಡ ಸಾತ್ ನೀಡುತ್ತಾನೆ. ಮುಂದೆ ಹಲವು ಸಂದರ್ಭಗಳು ಈ ಜೋಡಿಗಳ ಮೇಲೆ ಕೊಲೆಯ ಅಟ್ಯಾಕ್ ನಡೆಯುತ್ತದೆ , ಸಾನ್ವಿಗೆ ಗರ್ಭಪಾತವಾಗುತ್ತಿದೆ. ಹೀಗೆ ಒಂದೊಂದೇ ಸಮಸ್ಯೆಗಳು ಎದುರಾಗುತ್ತಾ ಹೋಗಿ ಕೊಲೆಯಲ್ಲಿ ಅಂತ್ಯವಾಗುತ್ತದೆ.

ಇದನ್ನು ಭೇದಿಸುವ ನಿಟ್ಟಿನಲ್ಲಿ ವಿಶೇಷ ಪೊಲೀಸ್ ತಂಡ ಮುಂದಾಗುತ್ತದೆ.
ಇದು ಕೊಲೆನಾ… ಸುಸೈಡ್…
ಡಾ. ಕೆವಿನ್ ಹೇಳಿದ್ದು ಏನು…
ಇನ್ಟ್ರಾಗೇಶನ್ ಹೇಗಿರುತ್ತೆ…
ಕೊನೆಗೆ ಸಿಗುವ ಎವಿಡೆನ್ಸ್ ಏನು…
ಇದಕ್ಕಾಗಿ ನೀವು ಈ ಚಿತ್ರ ನೋಡಲೇಬೇಕು.

ಸಸ್ಪೆನ್ಸ್ , ಮರ್ಡರ್ ಮಿಸ್ಟರಿ , ಕಥೆಯನ್ನು ನಿರ್ದೇಶಕ ಪ್ರವೀಣ್ ಸಿ. ಪಿ. ಬಹಳ ಸೂಕ್ಷ್ಮವಾಗಿ ಇನ್ವೆಸ್ಟಿಗೇಷನ್ ರೂಪದಲ್ಲಿ ತೆರೆಯ ಮೇಲೆ ತರುವ ಪ್ರಯತ್ನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಪ್ರೀತಿ , ಸ್ನೇಹ , ಗೆಳೆತನದ ವ್ಯಕ್ತಿಗಳ ಮನಸ್ಥಿತಿ ಹಾದಿಯಲ್ಲಿ ದ್ವೇಷದ ಕಿಚ್ಚು ಹಚ್ಚಿಕೊಂಡರೆ ಏನೆಲ್ಲ ಅವಾಂತರ ನಡೆಯುತ್ತದೆ ಎಂಬುದನ್ನ ತೆರೆದಿಟ್ಟಿದ್ದು , ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು. ತಾಂತ್ರಿಕವಾಗಿಯೂ ಹೇಳಿಕೊಳ್ಳುವಂತೆನಿಲ್ಲ, ಛಾಯಾಗ್ರಹಕರ ಕೆಲಸ ತಕ್ಕಮಟ್ಟಕ್ಕಿದೆ. ಆದರೆ ಸಂಗೀತದ ಜೊತೆ ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದೆ. ಇಂತಹ ವಿಭಿನ್ನ ಚಿತ್ರಕ್ಕೆ ಸ್ನೇಹಿತರಲ್ಲ ಸೇರಿ ಬಂಡವಾಳ ಹಾಕಿರುವ ಧೈರ್ಯವನ್ನ ಮೆಚ್ಚಲೇಬೇಕು.

ಇನ್ನು ಕಲಾವಿದರಾಗಿ ರೋಬೋ ಗಣೇಶ್ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಲು ಶ್ರಮಪಟ್ಟಿದ್ದಾರೆ. ವಿಶೇಷ ತನಿಖಾ ಅಧಿಕಾರಿಯಾಗಿ ಮಾನಸ ಜೋಶಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಹಸ ಪಟ್ಟಿದ್ದಾರೆ. ಯುವ ಜೋಡಿಗಳಾಗಿ ಅಭಿನಯಿಸಿರುವ ಪ್ರತಿಭೆಗಳು ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರಕ್ಕೆ ಉತ್ತಮ ಸಾತ್ ನೀಡಿದ್ದು, ಈ ಚಿತ್ರವನ್ನು ಒಮ್ಮೆ ನೋಡಬಹುದು

error: Content is protected !!