Cini NewsSandalwood

ಡಾಲಿ ಲಿರಿಕ್ಸ್… ಪ್ರೇಮ್ ವಾಯ್ಸ್…“ಟಗರು ಪಲ್ಯ “ ಪ್ರಮೋಷನಲ್ ಸಾಂಗ್ ರೀಲೀಸ್.

ಡಾಲಿ ಧನಂಜಯ್‌ ನಿರ್ಮಾಣದಲ್ಲಿ ತಯಾರಾಗಿರುವ ಗ್ರಾಮೀಣ ಸೊಗಡಿನ ಕಥೆ ಹೊಂದಿರುವ ‘ಟಗರು ಪಲ್ಯ’ ಸವಿಯೋದಿಕ್ಕೆ ದಿನಗಣನೆಯಷ್ಟೇ ಬಾಕಿ ಉಳಿದಿದೆ. ಇದೇ ಶುಕ್ರವಾರದಂದು ರಾಜ್ಯಾದ್ಯಂತ ಚಿತ್ರ ದಿಬ್ಬಣ ಹೊರಡಲಿದೆ. ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಟಗರು ಪಲ್ಯ ಸಿನಿಮಾ ಪ್ರಮೋಷನಲ್ ಹಾಡು ಬಿಡುಗಡೆಯಾಗಿದೆ.

ಸಂಬಂಜ ಅನ್ನೋದು ದೊಡ್ದು ಕನಾ ಎಂಬ ಹಾಡು ಡಾಲಿ ಪಿಕ್ಚರ್ಸ್ ನಲ್ಲಿ ಅನಾವರಣಗೊಂಡಿದೆ. ಸಂಬಂಧಗಳ ಮೌಲ್ಯ ತಿಳಿಸಿಕೊಡುವ ಹಾಡಿಗೆ ಧನಂಜಯ್ ಸಾಹಿತ್ಯ ಬರೆದಿದ್ದು, ಜೋಗಿ ಪ್ರೇಮ್ ಧ್ವನಿಯಾಗಿದ್ದು, ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಈ ಹಾಡಿನ ವಿಶೇಷ ಏನಂದರೇ ತೆರೆಹಿಂದೆ ಹಾಗೂ ತೆರೆಮೇಲೆ ಕಲಾವಿದರು, ತಂತ್ರಜ್ಞನರು ಕಾಣಿಸಿಕೊಂಡಿದ್ದಾರೆ.


ಟಗರು ಪಲ್ಯ ಚಿತ್ರವನ್ನು ಡಾಲಿ ಪಿಕ್ಚರ್ಸ್‌ ಬ್ಯಾನರ್‌ ಅಡಿ ನಟ ಧನಂಜಯ್‌ ನಿರ್ಮಿಸಿದ್ದಾರೆ. ಉಮೇಶ್‌ ಕೃಪ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅಮೃತಾ ತಂದೆ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾಯಿ ಪಾತ್ರದಲ್ಲಿ ತಾರಾ ಅನುರಾಧಾ ನಟಿಸಿದ್ದಾರೆ.‌

ಇಕ್ಕಟ್ ಖ್ಯಾತಿಯ ನಾಗಭೂಷಣ್ ನಾಯಕನಾಗಿ ಅಭಿನಯಿಸಿದ್ದು, ಮೈಸೂರು ಆರ್ಕೆಸ್ಟ್ರಾ ಖ್ಯಾತಿಯ ಪೂರ್ಣಚಂದ್ರ, ವೈಜನಾಥ್‌ ಬಿರಾದಾರ್‌, ಚಿತ್ರಾ ಶೆಣೈ, ಶ್ರೀನಾಥ್‌ ವಸಿಷ್ಠ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದು ಅವರೂ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಟಗರು ಪಲ್ಯ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದು, ಸಿನಿಮಾ ನೋಡುವುದಾಗಿಯೂ ತಿಳಿಸಿದ್ದಾರೆ‌. ಇದೇ 27ಕ್ಕೆ ಟಗರು ಪಲ್ಯ ಥಿಯೇಟರ್ ನಲ್ಲಿ ದರ್ಶನ ಕೊಡಲಿದೆ

error: Content is protected !!