Cini NewsSandalwood

ಸೆಟ್ಟೇರಿತು ಡ್ರೀಮ್ ವಾರಿಯರ್ ಪಿಕ್ಚರ್ಸ್ ‘ಸೂರ್ಯ 45’ ಸಿನಿಮಾ

Spread the love

ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಡ್ರೀಮ್ ವಾರಿಯರ್ ಪಿಕ್ಚರ್ಸ್ ತಮಿಳಿನ ಖ್ಯಾತ ನಟ ಸೂರ್ಯ 45ನೇ ಚಿತ್ರ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಮುಹೂರ್ತ ಸಮಾರಂಭ ಅನೈಮಲೈನಲ್ಲಿರುವ ಅರುಲ್ಮಿಗು ಮಾಸಾನಿ ಅಮ್ಮನ್ ದೇವಸ್ಥಾನದಲ್ಲಿಂದು ನೇರವೇರಿದೆ. ಕೊಯಮತ್ತೂರಿನಲ್ಲಿ ಮೊದಲ ಹಂತದ ಶೂಟಿಂಗ್ ನಡೆಸಲಾಗುವುದು. ಸೂರ್ಯ ಮತ್ತು ಇತರ ತಾರಾಬಳಗ ಒಳಗೊಂಡ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯಡಿ ಧೀರನ್, ಅರುವಿ, ಎನ್‌ಜಿಕೆ, ರಾಕ್ಷಸಿ, ಖೈದಿ, ಭೋಲಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು ನಿರ್ಮಾಣಗೊಂಡಿವೆ. ಇದೀಗ ಡ್ರೀಮ್ ವಾರಿಯರ್ ಪಿಕ್ಚರ್ಸ್ ತಮಿಳಿನ ಸೂಪರ್ ಸ್ಟಾರ್ ಸೂರ್ಯ ಜೊತೆ ಕೈ ಜೋಡಿಸಿದೆ.

ಮೂಕುತಿ ಅಮ್ಮನ್ ಮತ್ತು ವೀಟ್ಲ ವಿಶೇಷಂನಂತಹ ಸಾಮಾಜಿಕ ಜವಾಬ್ದಾರಿಯುತ ಚಿತ್ರಗಳನ್ನು ನಿರ್ದೇಶಿಸಲು ಹೆಸರುವಾಸಿಯಾಗಿರುವ ಆರ್‌ಜೆ ಬಾಲಾಜಿ ಸೂರ್ಯ ಅವರ 45ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಆರ್‌ಜೆ ಬಾಲಾಜಿ ಅವರ ಚಿತ್ರಕಥೆ ಇಷ್ಟಪಟ್ಟಿರುವ ಆಸ್ಕರ್ ವಿಜೇತ ಎ.ಆರ್ ರೆಹಮಾನ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲು ಸಮ್ಮತಿ ಸೂಚಿಸಿದ್ದಾರೆ. ಈ ಹಿಂದೆ ಸೂರ್ಯ ಹಾಗೂ ರೆಹಮಾನ್ ಸಿಲ್ಲುನು ಒರು ಕಾದಲ್, ಆಯುಧ ಎಳುತ್ತು ಮತ್ತು ’24’ ನಂತಹ ಕ್ಲಾಸಿಕ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಆರ್‌ಜೆ ಬಾಲಾಜಿ ಮತ್ತು ಡ್ರೀಮ್ ವಾರಿಯರ್ ಪಿಕ್ಚರ್ಸ್ ಈ ಪ್ರತಿಷ್ಠಿತ ಪ್ರಾಜೆಕ್ಟ್ ಗೆ ಸೂರ್ಯ ಜೊತೆಗೆ ಹಲವು ದೊಡ್ಡ ತಾರಾಬಳಗ ಸೇರ್ಪಡೆಯಾಗಲಿದೆ. ಚಿತ್ರತಂಡ 2025 ರ ದ್ವಿತೀಯಾರ್ಧದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.

Visited 1 times, 1 visit(s) today
error: Content is protected !!