Cini NewsSandalwood

ಯುವ ಪ್ರತಿಭೆಗಳ “ಶೋಷಿತೆ” ಟ್ರೇಲರ್ ಬಿಡುಗಡೆ

ಚಂದನವನಕ್ಕೆ ಸಾಫ್ಟ್ ವೇರ್ ಉದ್ಯೋಗಿಗಳು ತಂಡ ಒಂದು ವಿಭಿನ್ನ ಬಗೆಯ, ಜಾಗೃತಿ ಮೂಡಿಸುವಂತಹ “ಶೋಷಿತೆ” ಎಂಬ ಚಿತ್ರವನ್ನು ತೆರೆಗೆ ತರಲು ಸಿದ್ಧರಾಗಿದ್ದಾರೆ. ಈ ಚಿತ್ರವನ್ನು ಆಂಧ್ರಪ್ರದೇಶ ಮೂಲದ ಬೆಂಗಳೂರು ನಿವಾಸಿ ಶಶಿಧರ್ ನಿರ್ದೇಶನ ಮಾಡಿದ್ದಾರೆ. ಮೊದಲಿನಿಂದಲೂ ಸಿನಿಮಾರಂಗದ ಮೇಲೆ ಆಸಕ್ತಿ ಹಾಗೂ ಹಿರಿಯ ನಿರ್ದೇಶಕರುಗಳಾದ ಕೆ.ಬಾಲಚಂದರ್, ಮಣಿರತ್ನಂ, ರಾಮ್‌ಗೋಪಾಲ್‌ ವರ್ಮ ಮುಂತಾದವರ ಪ್ರೇರಣೆಯಿಂದ ತಾನು ಸಹ ಇಲ್ಲಿಯೇ ಸಾಧನೆ ಮಾಡಬೇಕೆಂದು ಚಿಂತನೆ ನಡೆಸಿ ಅದರ ಪ್ರತಿಫಲವಾಗಿ ಎರಡು ಕಿರುಚಿತ್ರಗಳನ್ನು ನಿರ್ದೇಶನ ಮಾಡಿ, ಇದರ ಅನುಭವದಿಂದಲೇ ಕನ್ನಡ ಭಾಷೆ ಕಲಿತು ’ಶೋಷಿತೆ’ ಸಿನಿಮಾಕ್ಕೆ ರಚನೆ, ಚಿತ್ರಕಥೆ, ಸಂಭಾಷಣೆ, ಸಂಕಲನ ಹಾಗೂ ಆಕ್ಷನ್ ಕಟ್ ಹೇಳಿದ್ದಾರೆ.

ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸದೆ ’ಯು’ ಪ್ರಮಾಣಪತ್ರ ನೀಡಿದೆ. ಎ ನೇಚರ್ ವ್ಯೂ ಔಟ್‌ಡೋರ್ ಕಾರ್ನಿವಲ್ ಪ್ರೊಡಕ್ಷನ್ ಮೂಲಕ ಸಿರಿಶಾಅಲ್ಲ ನಿರ್ಮಾಣ ಮಾಡಿರುವುದು ಹೊಸ ಅನುಭವ. ಪ್ರಚಾರದ ಮೊದಲ ಹಂತವಾಗಿ ಸಿನಿಮಾದ ಟ್ರೇಲರ್ ಹಾಗೂ ಹಾಡು ಬಿಡುಗಡೆ ಕಾರ್ಯಕ್ರಮ ಎಸ್‌.ಆರ್‌.ವಿ ಪ್ರೀವೂ ಥಿಯೇಟರ್ ನಲ್ಲಿ ನಡೆಯಿತು. 2015ರಲ್ಲಿ ನೆಲ್ಲೂರುದಲ್ಲಿ ನಡೆದಂತ ಘಟನೆಯು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದರ ಒಂದು ಏಳೆಯನ್ನು ತೆಗೆದುಕೊಂಡು ಕಥೆಯನ್ನು ರೂಪಿಸಲಾಗಿದೆ.

ಮಧ್ಯಮ ವರ್ಗದ ಹುಡುಗಿಗೆ ಯಾವ ರೀತಿಯ ಕಷ್ಟಗಳು ಒದಗಿ ಬರುತ್ತದೆ. ಅದನ್ನು ಹೇಗೆ ಎದುರಿಸುತ್ತಾಳೆ. ಸಮಾಜದಲ್ಲಿ ಇಂತಹವರಿಗೆ ಬರುವ ತೊಂದರೆಗಳಾದರೂ ಏನು? ಗೆಳತನ, ಹಣದ ವಿಚಾರದಲ್ಲಿ ಯಾರನ್ನೂ ನಂಬಬೇಡಿ. ಇಂತಹ ಸೂಕ್ಷ ವಿಷಯಗಳು ಎಲ್ಲಾ ಕಡೆಗಳಲ್ಲಿ ನಡೆಯುತ್ತಲೇ ಇರುತ್ತದೆ. ಇದರಿಂದ ನೀವುಗಳು ಜಾಗೃತರಾಗಬೇಕೆಂದು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.

ಪಂಚಭಾಷೆಗಳಲ್ಲಿ “ಇನಾಮ್ದಾರ್” ಚಿತ್ರದ ಟ್ರೇಲರ್ ಬಿಡುಗಡೆ

ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಹಾಗೂ ’ಕಲರ‍್ಸ್ ಕನ್ನಡ’ದಲ್ಲಿ ಖ್ಯಾತ ನಿರೂಪಕಿಯಾಗಿರುವ ಡಾ.ಜಾನ್ವಿರಾಯಲ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ’ಕೆಜಿಎಫ್’ದಲ್ಲಿ ಅಭಿನಯಿಸಿರುವ ರೂಪರಾಯಪ್ಪ ಖಳನಾಯಕಿ ಪಾತ್ರ, ಇವರೊಂದಿಗೆ ನವೀನ್‌ತಾತೇರ್, ವೆಂಕ್ಷ, ಪ್ರಶಾಂತ್, ದರ್ಶನ್ ಹಾಗೂ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಸಿಂಗಲ್ ಹಾಡಿಗೆ ಕೆವಿನ್.ಎಂ. ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರವಿವರ್ಮ.ಕೆ, ಸಾಹಿತ್ಯ ಮತ್ತು ಗಾಯನ ಅನುಷಾ ಈಶ್ವರ್ ಅವರದಾಗಿದೆ. ಬೆಂಗಳೂರು, ಹೊಸಕೋಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಹಲವು ಚಲನಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರದರ್ಶನ ಕಾಣಲಿದೆ. ಅಂದುಕೊಂಡಂತೆ ಆದರೆ ನವೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

error: Content is protected !!