Cini NewsMovie Review

ಸ್ಪೂರ್ತಿದಾಯಕ ‘ಸಾರಾಂಶ’ ಪಯಣ..(ಚಿತ್ರವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5
ಚಿತ್ರ : ಸಾರಾಂಶ
ನಿರ್ದೇಶಕ : ಸೂರ್ಯ ವಸಿಷ್ಠ
ನಿರ್ಮಾಪಕ : ರವಿ ಕಶ್ಯಪ್
ಸಂಗೀತ : ಉದಿತ್ ಹರಿತಾಸ್
ಛಾಯಾಗ್ರಾಹಕ : ಅನಂತ್
ತಾರಾಗಣ : ದೀಪಕ್ ಸುಬ್ರಹ್ಮಣ್ಯ , ಸೂರ್ಯ ವಸಿಷ್ಠ , ಶೃತಿ ಹರಿಹರನ್, ಶ್ವೇತ ಗುಪ್ತ , ಆಸೀಫ್ ಕ್ಷತ್ರಿಯ , ರವಿ ಭಟ್ ಹಾಗೂ ಮುಂತಾದವರು.

ಆಗಾಗ ಅಪರೂಪ ಎನಿಸುವ ಸೂಕ್ಷ್ಮ ಕಥಾನಕ ಮೂಲಕ ಮನಸ್ಸಿಗೆ ಹಾಗೂ ಬುದ್ದಿಗೆ ಕೆಲಸ ಕೊಡುವಂತ ಚಿತ್ರವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ ಸಾರಾಂಶ. ಸಾಮಾನ್ಯವಾಗಿ ಒಬ್ಬ ಮನುಷ್ಯನ ಮನಸ್ಥಿತಿ , ಆಲೋಚನೆ , ಬುದ್ಧಿಶಕ್ತಿ ಸಮಯಕ್ಕೆ ಸರಿಯಾಗಿ ಹೊಂದಿಕೊಂಡು ಸಾಗುವುದು ಬಹಳ ಮುಖ್ಯ. ಬಾಲ್ಯದಿಂದಲೂ ಒಂದು ಶಿಸ್ತು ಬದ್ಧ ಬದುಕಿನ ಹಾದಿಯಲ್ಲಿ ಬೆಳೆಯುವ ದತ್ತು ಮಗು ತನ್ನ ಇಷ್ಟ , ಆಸೆಗಳನ್ನು ಬರವಣಿಗೆಯ ಮೂಲಕ ಟೀಚರ್ ಬಳಿ ವ್ಯಕ್ತಪಡಿಸಿದರೂ ಮನೆಯಲ್ಲಿ ತಾಯಿ ಹೇಳಿದಂತೆ ತಂದೆಯ ಹಾದಿಯಲ್ಲಿ ತಾನು ಕೂಡ (ಸಿಎ) ಚಾರ್ಟೆಡ್ ಅಕೌಂಟೆಂಟ್ ಆಗುವ ದಾರಿಯಲಿ ಸಾಗುವ ತೇಜು (ದೀಪಕ್ ಸುಬ್ರಹ್ಮಣ್ಯ) ಆದರೆ ಅವನ ಮನಸ್ಸು ಕಥೆ , ಕವನಗಳ ಸುತ್ತ ಸುತ್ತುತ್ತಿರುತ್ತದೆ.

ಸದಾ ಪುಸ್ತಕಗಳ ಕಡೆ ಗಮನ ಕೊಡುವ ಅವನ ಮಾತುಕತೆ ನಿರ್ಜೀವಗಳ ಜೊತೆಗಿರುತ್ತದೆ. ಇನ್ನು ತನ್ನದೇ ಬದುಕನ್ನ ಕಟ್ಟಿಕೊಳ್ಳುವ ಹಾದಿಯಲ್ಲಿ ಒಬ್ಬ ಸೈಂಟಿಸ್ಟ್( ಸೂರ್ಯ ವಸಿಷ್ಠ) ಆದರೂ ತಂದೆಯಿಂದ ದೂರವಿದ್ದರೂ ತನ್ನ ಮನಸ್ಸಿನ ವೇದನೆ ದೂರ ಮಾಡಲು ದಾರಿ ಹುಡುಕುತ್ತಿರುತ್ತಾನೆ. ಹಾಗೆಯೇ ಸುಂದರ ಯುವತಿ ಮಾಯ (ಶ್ರುತಿ ಹರಿಹರನ್) ನೃತ್ಯಗಾತಿ ಆದರೂ ತನ್ನ ಮನಸ್ಸಿಗೆ ತೋಚಿದ ಹಾದಿಯಲ್ಲಿ ಸಾಗುತ್ತಾಳೆ, ಇವರಿಬ್ಬರ ಸ್ನೇಹ , ಸಂಬಂಧ ಎಲ್ಲವೂ ಅವರವರ ಮನಸ್ಥಿತಿಗೆ ತಕ್ಕಂತೆ ಸಾಗುತ್ತದೆ.

ನಾವು ಬಯಸಿದ್ದು ಸಿಗದಿದ್ದರೂ, ಸಮಯ ಸಂದರ್ಭಕ್ಕೆ ಅನುಗುಣವಾಗಿ ಬಂದದ್ದನ್ನು ಸ್ವೀಕರಿಸುವಂತಹ ಆಗಿರುತ್ತದೆ. ಇನ್ನು ಸದಾ ಅಲೋಚನೆ ಗೊಂದಲದಲ್ಲೇ ತೇಜು ತನ್ನ ಬದುಕನ್ನ ಕಟ್ಟಿಕೊಳ್ಳುವುದಕ್ಕೆ ಯಾವ ಮಾರ್ಗ ಸೂಕ್ತ ಎನ್ನುವ ನಿಟ್ಟನಲ್ಲಿ ಬೇರೆಯದೇ ದೃಷ್ಟಿಕೋನ ತೋರುತ್ತದೆ. ಇದರಲ್ಲಿ ಬರುವ 9 ಅಧ್ಯಾಯಗಳು ಬದುಕಿನ ಹಲವು ಮುಖಗಳನ್ನು ತೆರೆದಿದಿಡುತ್ತದೆ. ಇದೆಲ್ಲದರ ಹಿಂದೆ ಒಂದಷ್ಟು ಫ್ಲಾಶ್ ಬ್ಯಾಕ್ ಹಾದಿ ಕಾಣಲಿದ್ದು , ಅದು ಏನು… ಹೇಗೆ… ಯಾರಿಗೆ…
ಎಂಬ ಸೂಕ್ಷ್ಮತೆ ತಿಳಿಯಬೇಕಾದರೆ ಈ ಸಾರಾಂಶ ಚಿತ್ರ ನೋಡಬೇಕು.

ಇನ್ನು ಈ ಚಿತ್ರವನ್ನು ನಿರ್ದೇಶನ ಮಾಡಿರುವ ಸೂರ್ಯ ವಸಿಷ್ಠ ಆಲೋಚನೆಯೇ ವಿಶೇಷವಾದುದು , ಮನಸ್ಸಿನ ಆಲೋಚನೆ , ಭಾವನೆ , ಗೊಂದಲಗಳ ಸುಳಿ , ಬದುಕಿನ ನಡುವೆ ಇಷ್ಟಾರ್ಥಗಳ ಸೆಳೆತ , ತಂದೆ ತಾಯಿಗಳ ಪ್ರೀತಿ , ಕನಸು ಹೀಗೆ ಒಂದಷ್ಟು ಸೂಕ್ಷ್ಮ ವಿಚಾರವನ್ನು ಬಹಳ ವಿಭಿನ್ನ ಶೈಲಿಯಲ್ಲಿ ತೆರೆಯ ಮೇಲೆ ತಂದು ಗಮನ ಸೆಳೆದಿದ್ದಾರೆ. ಕನ್ನಡ ಚಿತ್ರದಲ್ಲಿ ಇಂಗ್ಲಿಷ್ ಬಳಕೆ ಹೆಚ್ಚಿದ್ದರು ಮನಸ್ಸಿಗೆ ಹತ್ತಿರವಾಗುವಂತಹ ವಿಚಾರ ತೆರೆದಿಟ್ಟಿದ್ದಾರೆ. ಇದು ನಿರ್ಮಾಪಕರಿಗೆ ಎಷ್ಟು ಲಾಭ ತರುತದೋ ತಿಳಿದಿಲ್ಲ , ಆದರೆ ಒಂದು ಸೂಕ್ಷ್ಮ ಸಂವೇದನೆಯ ಮನಸೆಳೆಯುವ ಚಿತ್ರ ಆಗುವ ಸಾಧ್ಯತೆ ಇದೆ.

ಇನ್ನು ಈ ಚಿತ್ರಕ್ಕೆ ತಾಂತ್ರಿಕ ವರ್ಗ ಕೂಡ ಪ್ಲಸ್ ಪಾಯಿಂಟ್ ಆಗಿದ್ದು , ಛಾಯಾಗ್ರಾಹಕರ ಕಾರ್ಯ ವೈಖರಿ , ಸಂಗೀತದ ಮೋಡಿ ಉತ್ತಮವಾಗಿದೆ. ಇನ್ನೂ ಪ್ರಮುಖ ಪಾತ್ರಗಳಲ್ಲಿ ದೀಪಕ್ ಸುಬ್ರಹ್ಮಣ್ಯ ನಟನೆ ಗಮನ ಸೆಳೆಯುವಂತಿದೆ. ಅದೇ ರೀತಿ ಸೂರ್ಯ ವಸಿಷ್ಠ , ಶೃತಿ ಹರಿಹರನ್, ಶ್ವೇತ ಗುಪ್ತ , ಆಸೀಫ್ ಕ್ಷತ್ರಿಯ , ರವಿ ಭಟ್ ಪಾತ್ರಗಳು ಕೂಡ ಚಿತ್ರದ ಓಟಕ್ಕೆ ಜೀವ ತುಂಬಿದೆ. ಒಂದು ಹೈ ಸ್ಟ್ಯಾಂಡರ್ಡ್ ಚಿತ್ರವಾಗಿಸಿದ್ದು, ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವವರಿಗೆ ಇಷ್ಟವಾಗುವ ಕಥೆ ಈ ಚಿತ್ರದಲ್ಲಿದೆ. ಒಟ್ನಲ್ಲಿ ಆಲೋಚನೆಗೆ ದೂಡುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.

error: Content is protected !!