Cini NewsMovie Review

ಯೂಥ್ ಫುಲ್ ಲವ್ , ಫ್ಯಾಮಿಲಿ ಎಂಟರ್ಟೈನರ್ ಕೆಟಿಎಂ (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಕೆಟಿಎಂ
ನಿರ್ದೇಶಕ : ಅರುಣ್
ನಿರ್ಮಾಪಕ : ವಿನಯ್
ಸಂಗೀತ : ಚೇತನ್
ಛಾಯಾಗ್ರಹಕ : ನವೀನ್
ತಾರಗಣ : ದೀಕ್ಷಿತ್ ಶೆಟ್ಟಿ , ಸಂಜನಾ ದಾಸ್, ಕಾಜಲ್ ಕುಂದರ್ , ಉಷಾ ಭಂಡಾರಿ, ಪ್ರಕಾಶ್ ತುಮ್ಮಿನಾಡು, ರಘು ರಮಣಕೊಪ್ಪ, ಶಾನಿಲ್ ಗುರು, ಬಾಬು ಹಿರಣಯ್ಯ, ದೇವ್ ದೇವಯ್ಯ , ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಹಾಗೂ ಮುಂತಾದವರು…

ಕಾಲೇಜ್ ಲೈಫ್ ಇಸ್ ಗೋಲ್ಡನ್ ಲೈಫ್ ಅನ್ನೋ ಮಾತಿದೆ. ಅದರಂತೆ ವಿದ್ಯಾರ್ಥಿಗಳ ಬದುಕು , ಪ್ರೀತಿಯ ತಲ್ಲಣ , ಗೆಳೆಯರ ಒಡನಾಟ , ತಂದೆ ತಾಯಿಗಳ ಆತಂಕ , ಕಾಲೇಜಿನ ತುಂಟಾಟ , ತರಲೆ , ಹೊಡೆದಾಟ , ಪ್ರೀತಿಯ ಆಕರ್ಷಣೆ , ನೋವು , ನಲಿವು ಹೀಗೆ ಒಂದಷ್ಟು ವಿಚಾರಗಳದೊಂದಿಗೆ ಬಾಳಿ ಬದುಕಬೇಕಾದ ಮನಸ್ಸುಗಳಿಗೆ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಹಾದಿಯಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕೆಟಿಎಂ”. ತಂದೆ ತಾಯಿಯ ಪ್ರೀತಿಯ ಮಗನಾದ ಕಾರ್ತಿಕ್ (ದೀಕ್ಷಿತ್ ಶೆಟ್ಟಿ) ವಿದ್ಯಾಭ್ಯಾಸದಲ್ಲಿ ನಂಬರ್ ಒನ್ ಆಗಿದ್ದರು , ಗೆಳೆಯರ ಜೊತೆಗಿನ ತುಂಟಾಟ ತರ್ಲೆಗೇನು ಕಮ್ಮಿಇಲ್ಲ.

ಕಾರ್ತಿಕ್ ತನ್ನೂರಿನ ಸುಂದರ ಬೆಡಗಿ ತಾನ್ಯ (ಕಾಜಲ್ ಕುಂದರ್) ಳನ್ನ ಪ್ರೀತಿಸುತ್ತಿದ್ದರು ಹೇಳಿಕೊಳ್ಳಲಾರದೆ ಮನಸ್ಸಿನಲ್ಲಿ ಪರದಾಡುತ್ತಿರುತ್ತಾನೆ. ಆದರೆ ತಾನ್ಯ ಳನ್ನ ಪ್ರೀತಿಸುವರು ಬಹಳ ಹುಡುಗರು ಇರುತ್ತಾರೆ. ಒಂದು ಕಾರಣದಿಂದ ಕಾರ್ತಿಕ್ ಬೆಂಗಳೂರಿಗೆ ಬರುವಂತಾಗುತ್ತದೆ. ಅಲ್ಲೊಂದಷ್ಟು ಗೆಳೆಯರ ಪರಿಚಯ ಕಾರ್ತಿಕ್ ಸಿಗುತ್ತದೆ. ಕಾಲೇಜಿಗೆ ಟಾಪರ್ ಆಗಿ ಓದುವ ಈ ಸುಂದರನಿಗೆ ಬಹಳಷ್ಟು ಹುಡುಗಿಯರು ಲೈನ್ ಹಾಕುತ್ತಾರೆ.

ಅದೇ ರೀತಿ ನೇರ , ದಿಟ್ಟ , ನಿರಂತರ ಎನ್ನುವ ಹುಡುಗಿ ಮರ್ಸಿ (ಸಂಜನಾ ದಾಸ್) ಕಾಲೇಜಿನಲ್ಲಿ ಯಾರಿಗೂ ಕೇರ್ ಮಾಡದೆ ಬೋಲ್ಡ್ ಆಗಿ ಓಡಾಡುವ ಹುಡುಗಿ . ಆದರೆ ಈಕೆಯ ಸುತ್ತ ಹುಡುಗರ ಕಣ್ಣು , ಇದರ ನಡುವೆ ಇದೇ ಕಾಲೇಜಿನ ಹಳೆಯ ಟಾಪರ್ ವಿದ್ಯಾರ್ಥಿ ಲೆಕ್ಚರರಾಗಿ ಕಾಲೇಜಿಗೆ ಬರುತ್ತಾನೆ. ಅವನು ಕೂಡ ಮರ್ಸಿ ನೋಟಕ್ಕೆ ಮನಸೋತು ಆಕೆಗೆ ಪ್ರೊಪೋಸ್ ಮಾಡುತ್ತಾನೆ. ಆದರೆ ಮರ್ಸಿ ಕಾರ್ತಿಕ್ ನನ್ನ ಲವ್ ಮಾಡುತ್ತಿರುವುದಾಗಿ ಹೇಳುತ್ತಾಳೆ.

ಮುಂದೆ ಇವರಿಬ್ಬರ ಓಡಾಟ , ಪ್ರೇಮಾಂಕುರದ ಮಾತುಗಳು, ಸುತ್ತಾಟ ಇವರ ಬಾಳಿನಲ್ಲಿ ಮತ್ತೊಂದು ತಿರುವು ಪಡೆಯುತ್ತದೆ. ಇದರ ನಡುವೆ ಕಾರ್ತಿಕ್ ಗೆಳೆಯ ಜೂಜಿಗೆ ದಾಸನಾಗಿ ತನ್ನ ಪ್ರಾಣ ಕಳೆದುಕೊಳ್ಳುತ್ತಾನೆ. ಗೆಳೆಯನ ತಂದೆ ತಾಯಿಯನ್ನು ಕಾಪಾಡಲು ಹೋಗಿ ಕಾರ್ತಿಕ್ ಸಾಲದ ಹೊರೆ , ಕುಡಿತದ ದಾಸನಾಗಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಾನೆ.
ಕಾರ್ತಿಕ್ ಭವಿಷ್ಯ ಏನಾಗುತ್ತದೆ… ಕುಡಿತದಿಂದ ಹೊರ ಬರುತ್ತಾನಾ… ಇಬ್ಬರು ಗೆಳತಿಯರು ಏನಾಗುತ್ತಾರೆ…
ಪ್ರೀತಿ ಸಿಗುತ್ತಾ ಇಲ್ವಾ…
ಬದುಕು ಕಲಿಸುವ ಪಾಠ ಏನು.. ಎಂದು ತಿಳಿಯಬೇಕಾದರೆ ಈ ಚಿತ್ರವನ್ನು ನೋಡಬೇಕು.

ಇನ್ನು ನಿರ್ದೇಶಕ ಅರುಣ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಗಮನ ಸೆಳೆಯುವಂತಿದೆ. ಯುವ ಮನಸುಗಳ ಕಲರವ, ಕಾಲೇಜು ವಿದ್ಯಾರ್ಥಿಗಳ ಸ್ನೇಹ , ಪ್ರೀತಿ , ಆಕರ್ಷಣೆ , ಒಡನಾಟ , ಬಡಿದಾಟದ ನಡುವೆಯೂ ತಂದೆ ತಾಯಿಯ ಜವಾಬ್ದಾರಿ , ಕಷ್ಟ ಸುಖಗಳ ಏರಿಳಿತಗಳ ಜೊತೆ ಗುರಿಯು ಎಷ್ಟು ಮುಖ್ಯ ಎಂಬುದನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಮತ್ತಷ್ಟು ಬಿಗಿ ಮಾಡಬಹುದಿತ್ತು , ಮೊದಲ ಭಾಗಕ್ಕಿಂತ ದ್ವಿತೀಯ ಭಾಗ ಗಮನ ಸೆಳೆದು ಗಿರಿಕಿ ಹೊಡೆದರು ಕ್ಲೈಮಾಕ್ಸ್ ಸಂದೇಶ ರವಾನಿಸುತ್ತದೆ.

ನಿರ್ಮಾಪಕರು ಧೈರ್ಯ ಮಾಡಿ ಬಂಡವಾಳ ಹಾಕಿರುವುದು ಮೆಚ್ಚುವಂಥದ್ದು. ಸಂಗೀತ ಹಾಗೂ ಛಾಯಾಗ್ರಹಣದ ಕೆಲಸ ಉತ್ತಮವಾಗಿ ಮೂಡಿ ಬಂದಿದೆ. ಸಂಭಾಷಣೆ ಕೂಡ ಗಮನ ಸೆಳೆಯುತ್ತದೆ. ಇನ್ನು ನಾಯಕನಾಗಿ ಅಭಿನಯಿಸಿರುವ ದೀಕ್ಷಿತ್ ಶೆಟ್ಟಿ ಮತ್ತೊಮ್ಮೆ ತಮ್ಮ ನಟನ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ. ಮೂರು ಶೇಡ್ ಗಳಲ್ಲಿ ಬರುವ ಪಾತ್ರಕ್ಕೆ ಜೀವ ತುಂಬಿ ಮನಸನ್ನ ಗೆದ್ದಿದ್ದಾರೆ. ನಾಯಕಿಯಾಗಿ ಅಭಿನಯಿಸಿರುವ ಕಾಜಲ್ ಕುಂದರ್ ಕೂಡ ಕಣ್ಣಂಚಿನ ನೋಟದಲ್ಲಿ ಮೌನವಾಗಿ ಸೂಕ್ತ ಮಾತುಗಳಿಂದ ಪಾತ್ರಕ್ಕೆ ನ್ಯಾಯವನ್ನ ನೀಡಿದ್ದಾರೆ.

ಹಾಗೆಯೇ ಮತ್ತೊಬ್ಬ ನಾಯಕಿ ಸಂಜನಾ ದಾಸ್ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಗೆಳೆಯರಾಗಿ ಅಭಿನಯಿಸಿರುವ ಅಭಿಷೇಕ್ , ತುಕಾಲಿ ಸಂತೋಷ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಎಲ್ಲರೂ ಒಮ್ಮೆ ನೋಡುವಂತ ಚಿತ್ರ ಇದಾಗಿದೆ

error: Content is protected !!