Cini NewsSandalwood

ಇದೇ ಜ.27ರಂದು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಶ್ರೀ ಡಿ.ವಿ. ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸುಸಂದರ್ಭದಲ್ಲಿ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಈಗ ಪ್ರಶಸ್ತಿಗಳ ಸಂಖ್ಯೆ 11ಕ್ಕೇರಿದೆ. ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 27ರ ಶನಿವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ.

ಈ ಬಾರಿಯ ಪ್ರಶಸ್ತಿಗಳ ವಿವರ

ಶ್ರೀ ದಿ. ರಾಮು (ರಾಮು ಎಂಟರ್ ಪ್ರೈಸಸ್), ಹಿರಿಯ ಚಲನಚಿತ್ರ ನಿರ್ಮಾಪಕರು
( ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ )

ಶ್ರೀ ಮುರಳಿಧರ ಖಜಾನೆ, ಹಿರಿಯ ಚಲನಚಿತ್ರ ಪತ್ರಕರ್ತರು
( ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ )

ಶ್ರೀ ಹೇಮಂತ್ ಕುಮಾರ್, ಖ್ಯಾತ ಹಿನ್ನಲೆ ಗಾಯಕರು
( ಡಾ. ರಾಜ್‌ಕುಮಾರ್ ಪ್ರಶಸ್ತಿ- ಡಾ|| ರಾಜ್‌ಕುಮಾರ್ ಕುಟುಂಬದವರಿಂದ )

ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕರು
(‘ ಯಜಮಾನ’ ಚಿತ್ರದ ಖ್ಯಾತಿ ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ – ಶ್ರೀಮತಿ ಭಾರತಿ ವಿಷ್ಣುವರ್ಧನ ಅವರಿಂದ )

ಶ್ರೀಮತಿ ಜಯಲಕ್ಷ್ಮಿ ಪಿ (ದುಬೈ), ಕಲಾವಿದರು
( ಖ್ಯಾತ ಅಭಿನೇತ್ರಿ ಶ್ರೀಮತಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ )

ಶ್ರೀ ಜೋ ಕೋಸ್ಟ, ಅತ್ಯತ್ತಮ ಸಂಗೀತ ನಿರ್ದೇಶನ ( “ಹೊಂದಿಸಿ ಬರೆಯಿರಿ” ಚಿತ್ರಕ್ಕಾಗಿ ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಪ್ರಶಸ್ತಿ )

ಶ್ರೀ ಹೇಮಂತ್ ರಾವ್, ಅತ್ಯುತ್ತಮ ಕಥಾಲೇಖಕರು ( ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕಾಗಿ )
( ಖ್ಯಾತ ನಿರ್ದೇಶಕ-ನಿರ್ಮಾಪಕ ಶ್ರೀ.ಕೆ.ವಿ. ಜಯರಾಂ ಪ್ರಶಸ್ತಿ – ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ )

ಶ್ರೀ ಬಿ.ಎಸ್. ಲಿಂಗದೇವರು ಹಾಗೂ ಶ್ರೀ ಶರಣು ಹುಲ್ಲೂರು, ಅತ್ಯುತ್ತಮ ಸಂಭಾಷಣೆ (‘ ವಿರಾಟಪುರದ ವಿರಾಗಿ ’ ಚಿತ್ರಕ್ಕಾಗಿ )
( ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ – ಡಾ. ಎಚ್.ಕೆ. ನರಹರಿ ಅವರಿಂದ )

ಕುಮಾರಿ ಸಿಂಧು ಶ್ರೀನಿವಾಸಮೂರ್ತಿ , (` ಆಚಾರ್ & ಕೋ’ – ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ )
( ರಂಗ ತಜ್ಞ, ಹಿರಿತೆರೆ, ಕಿರುತೆರೆ ನಿರ್ದೇಶಕ ಶ್ರೀ ಬಿ.ಸುರೇಶ್ ಪ್ರಶಸ್ತಿ )

ಶ್ರೀ ಡಾಲಿ ಧನಂಜಯ, (‘ಟಗರು ಪಲ್ಯ ’ ಚಿತ್ರದ – ‘ಸಂಬಂಜ ಅನ್ನೋದು ದೊಡ್ಡದು ಕನಾ’ ಗೀತರಚನೆಗಾಗಿ )
( ಹಿರಿಯ ಪತ್ರಕರ್ತರಾದ ಶ್ರೀ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ’ – ಪತ್ರಕರ್ತ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ )

ಶ್ರೀ ಸುಂದರರಾಜ್, ಹಿರಿಯ ಪೋಷಕ ಕಲಾವಿದರು
( ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ )

ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರಾದ ಶ್ರೀ ಬಿ.ಎನ್. ಸುಬ್ರಹ್ಮಣ್ಯ, ಶ್ರೀ ರಕ್ಷಿತ್ ಶೆಟ್ಟಿ ಹಾಗೂ ಶ್ರೀ ಅನಿರುದ್ಧ್ ಜತಕರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು

error: Content is protected !!