Cini NewsSandalwood

ಸೈಕೋ ಕಿಲ್ಲರ್ “ಸತ್ಯ” ಕಿರುಚಿತ್ರದ ಟ್ರೈಲರ್ ರಿಲೀಸ್

ಬೆಳ್ಳಿ ಪರದೆಗೆ ಬರಬೇಕಾದರೆ ಒಂದಷ್ಟು ಪೂರ್ವ ತಯಾರಿದ್ದರೆ ಉತ್ತಮ ಅನ್ನು ಉದ್ದೇಶದೊಂದಿಗೆ ಐಟಿ ಕಂಪನಿಯಲ್ಲಿ ಒಳ್ಳೇ ಉದ್ಯೋಗವಿದ್ದರೂ ಸಹ ಸಿನಿಮಾನೇ ನನ್ನ ಜೀವನ ಎನ್ನುತ್ತಾ ಚಿತ್ರರಂಗಕ್ಕೆ ಬಂದಿದ್ದಾರೆ ಆನಂದ್ ಅಹಿಪತಿ. ತಾವೇ ಕಥೆ ಬರೆದು ಆಕ್ಟ್ ಮಾಡುವುದರ ಜೊತೆಗೆ ನಿರ್ದೇಶನ , ನಿರ್ಮಾಣದ ಜವಾಬ್ದಾರಿಯನ್ನ ವಹಿಸಿಕೊಂಡು 38 ನಿಮಿಷಗಳ ಸೈಕಲಾಜಿಕಲ್ ಕಿಲ್ಲರ್ ಕಂಟೆಂಟ್ ಅನ್ನು ಆನಂದ್ ಆಡಿಯೋ ಕನ್ನಡ ಚಾನೆಲ್ ನಲ್ಲಿ ಇದೆ 22ರಂದು ಪ್ರಸಾರವಾಗಲಿದೆ ಎಂಬ ಮಾಹಿತಿಯನ್ನು ನೀಡಲು ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿದರು.

ಈ ಕಿರು ಚಿತ್ರದ ಕುರಿತು ಮಾತನಾಡಿದ ನಟ , ನಿರ್ದೇಶಕ ಆನಂದ್ ಐಟಿ ಉದ್ಯೋಗ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಬರುವುದಕ್ಕಾಗಿ ಅನುಪಮ್ ಕೇರ್ ಆಕ್ಟಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಕಲಿತ ನಂತರ 2020ರಲ್ಲಿ ಒಂದು ಶಾರ್ಟ್ ಫಿಲಂ ನಲ್ಲಿ ಆಕ್ಟ್ ಮಾಡಿದ್ದೆ ಆದರೆ ಅದು ರಿಲೀಸ್ ಆಗಿಲ್ಲ , ಆಮೇಲೆ ನಾನೇ ನಿರ್ಧಾರ ಮಾಡಿ ಕತೆ ಬರೆದು ನಿರ್ದೇಶನ ಮಾಡಲು ಮುಂದಾದೆ ಅದೇ ಈ “ಸತ್ಯ” ಕಿರುಚಿತ್ರ.

ಯಾವುದೇ ಚಿತ್ರಕ್ಕೂ ಕಮ್ಮಿಯಿಲ್ಲದ ಹಾಗೆ ಬಹಳಷ್ಟು ಸಮಯ ತೆಗೆದುಕೊಂಡು ನಮಗೆ ಪರ್ಫೆಕ್ಟ್ ಅನ್ನುವವರೆಗೂ ಚಿತ್ರೀಕರಣ ಮಾಡಿ ಈ ಕಿರು ಚಿತ್ರವನ್ನು ನಿರ್ಮಾಣ ಮಾಡಿದೇನೆ. 38 ನಿಮಿಷಗಳ ಈ ಕಿರುಚಿತ್ರ ನಿರ್ದೇಶನ‌ ನನ್ನ ಪ್ರೀಕ್ವೇಲ್ ಟು ಫ್ಯೂಚರ್ ಫಿಲಂ ಅನ್ನಬಹುದು, ಹಣದ ಬಗ್ಗೆ ಯೋಚಿಸದೆ 11 ದಿನ ಬೆಂಗಳೂರಿನಲ್ಲಿ ಕ್ವಾಲಿಟಿ ಹೆಚ್ಚು ಆದ್ಯತೆ ಕೊಟ್ಟು ಈ ಚಿತ್ರ ಮಾಡಿದ್ದೇನೆ.

ಸತ್ಯ ಅಂದ್ರೆ ನಿಜ, ಈತ ಒಬ್ಬ ಸೈಕೋ ಕಿಲ್ಲರ್, ಆತನ ಮನದಲ್ಲಿ ಏನೇನು ನಡೀತಿದೆ ಅನ್ನೋದೇ ಈ ಚಿತ್ರದ ಕಾನ್ಸೆಪ್ಟ್. ಆತ ಏನೇನು ಮಾಡ್ತಾನೆ, ಯಾಕೆ ಮಾಡ್ತಾನೆ, ಹೇಗೆ ಮಾಡ್ತಾನೆ ಅಂತ ಈ ಚಿತ್ರದಲ್ಲಿ ತೋರಿಸಿದ್ದೇವೆ. ಕೊನೇವರೆಗೆ ನೋಡಿದಾಗ ಅದು ಅರ್ಥವಾಗುತ್ತದೆ ಎಂದರು.

ನಾಯಕಿ ಪಾತ್ರ ಮಾಡಿರುವ ಸೌಮ್ಯ ಮಾತನಾಡಿ ನಾನು ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಈ ಸಿನಿಮಾ ಆನಂದ್ ಕನಸು, ಇದೊಂದು ವಿಭಿನ್ನ ಜಾನರ್ ಸಿನಿಮಾ, ನಾನೊಬ್ಬ ಕಲಾವಿದೆಯಾಗೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು. ದುರ್ಗಾ ಸಿನಿಮಾಸ್ ಮೂಲಕ ನಿರ್ದೇಶಕ ಆನಂದ್ ಅಹಿಪತಿ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಚಿತ್ರದಲ್ಲಿ 2 ಹಾಡುಗಳಿದ್ದು, ಅಜಯ್ ಶಿವರಾಜ್ ಎರಡು ಹಾಡಿಗೆ ಸಂಗೀತ ನಿರ್ದೆಶನ ಮಾಡಿದ್ದಾರೆ. ಎಡಿಟಿಂಗ್ ಹಾಗೂ ಗ್ರೆಡಿಂಗ್ ಮಾಡಿದ್ದು , ಕಾರ್ತೀಕ್ ಸಿದ್ದರಾಜು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಸದ್ಯದಲ್ಲೇ ಬೆಳ್ಳಿ ಪರದೆಗೆ ಸಿನಿಮಾ ಮಾಡಲು ಸಕಲ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದ್ದಾರೆ.

 

error: Content is protected !!