“ಪ್ರೇಮದ ಊರಲಿ” ಚಿತ್ರದ ‘ಏರುಪೇರು ಹೃದಯಾ’ ಹಾಡು ಬಿಡುಗಡೆ

Spread the love

ಯುವ ಪ್ರತಿಭೆಗಳ “ಪ್ರೇಮದ ಊರಲಿ” ಚಿತ್ರದಿಂದ ಮತ್ತೊಂದು ಜನರ ಹೃದಯ ಗೆದ್ದಿರುವ ಪ್ರೀತಿ ಹಾಡು ‘ಏರುಪೇರು ಹೃದಯಾ’… ಬಿಡುಗಡೆಯಾಗಿದೆ. ಶ್ರೀರಾಮ್ ಮತ್ತು ರಮಿಕಾ ಶಿವು ಕ್ಯೂಟ್ ಮತ್ತು ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಈ ಹಾಡು ಈಗಾಗಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ.

ಸುನಾದ್ ಗೌತಮ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ನಿರ್ದೇಶಕ ಮನೋಜ್ ಕುಮಾರ್ ಹಾಗೂ ನವೀನ್ ವಿಶಾರದ ಜೊತೆಯಾಗಿ ಅರ್ಥಪೂರ್ಣ ಸಾಹಿತ್ಯ ಬರೆದಿದ್ದಾರೆ. ಗಾಯಕಿ ನಿನಾದ ನಾಯಕ್ ಅವರ ಮಧುರ ಧ್ವನಿ ಕಿವಿಗೆ ಇಂಪು ನೀಡುತ್ತಿದೆ.

“ಪ್ರೇಮದ ಊರಲಿ” ಚಿತ್ರವು ಉತ್ತಮ ಸಂಗೀತಕ್ಕೆ ಆದ್ಯತೆ ನೀಡುವ ಸುಂದರ ಮ್ಯೂಸಿಕಲ್ ಲವ್ ಸ್ಟೋರಿ ಆಗಿ ಮೂಡಿ ಬಂದಿದೆ. ಹಾಡುಗಳ ಮೂಲಕವೇ ಸದ್ಯ ಸಿನಿಮಾ ಪ್ರಿಯರ ಗಮನ ಸೆಳೆಯುತ್ತಿರುವ ಈ ರೋಮ್ಯಾಂಟಿಕ್ ಕಥಾಹಂದರದ ಪ್ರೇಮದ ಊರಲಿ ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ವೆನಿಲ್ಲಾ ಎಂಟರ್ಟೈನ್ಮೆಂಟ್ ಹಾಗು ಜಾನಕಮ್ಮ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಶ್ರೀ ರಾಮ್, ರಂಗಾಯಣ ರಘು, ತಪಸ್ವಿನಿ ಪೊಣ್ಣಚ್ಚ, ರಮಿಕಾ ಶಿವು, ಇಳವಿಟ್ಲ ಅಭಿನಯಿಸಿದ್ದಾರೆ. ಸಂಗೀತ ಸುನಾಥ್ ಗೌತಮ್, ಛಾಯಾಗ್ರಹಣ ರಾಜ್ ಕಾಂತ್, ಸಂಕಲನ ಹರ್ಷಿತ್ ಪ್ರಭು ಮಾಡಿದ್ದಾರೆ.

Visited 1 times, 1 visit(s) today
error: Content is protected !!