Cini NewsSandalwood

ಪ್ರೀತಿಯ ಸುಳಿಯಲ್ಲಿ ಒಂಟಿ ಬಂಟಿ ಲವ್ ಸ್ಟೋರಿ (ಚಿತ್ರವಿಮರ್ಶೆ-ರೇಟಿಂಗ್ : 3/5)

ರೇಟಿಂಗ್ : 3/5
ಚಿತ್ರ : ಒಂಟಿ ಬಂಟಿ ಲವ್ ಸ್ಟೋರಿ
ನಿರ್ದೇಶಕ : ಯತೀಶ್ ಪನ್ನಸಮುದ್ರ
ಸಂಗೀತ : ಶ್ರೀಹರಿ ಶ್ರೇಷ್ಟಿ
ಛಾಯಾಗ್ರಹಕ : ಶಿವರಾಜ , ಹೃತಿಕ್ ರೋಷನ್
ತಾರಾಗಣ : ವೈಭವ ವರ್ಧನ , ಯತೀಶ್ ಪನ್ನಸಮುದ್ರ , ಶ್ವೇತಾ ಭಟ್, ಶ್ರುತಿ ಚಂದ್ರ ಶೇಖರ್, ರಾಜು, ಕೃಷ್ಣಕುಮಾರ್ , ರಾಘವೇಂದ್ರ ,ಅಭಿಷೇಕ್, ಶ್ರೀಪರ್ಣ ಶೆಟ್ಟಿ ಹಾಗೂ ಮುಂತಾದವರು…

ಸಾಮಾನ್ಯವಾಗಿ ಯುವ ಮನಸುಗಳ ಆಸೆ , ಆಸಕ್ತಿ , ಆಲೋಚನೆ ಬಹುತೇಕ ಗೊಂದಲದ ಗೂಡಾಗಿಯೇ ಸಾಗುತ್ತಿರುತ್ತದೆ. ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್ ಅನ್ನೋ ಮಾತಿದೆ , ಆದರೆ ಓದೋ ವಯಸ್ಸಲ್ಲಿ ಪ್ರೀತಿ , ಮೋಜು , ಮಸ್ತಿ , ಹಣ ಕಡೆ ಮನಸು ವಾಲಿದರೆ ಬದುಕು ಬೇರೆದೇ ದಿಕ್ಕನ್ನ ತೋರಿಸುತ್ತಾ ಹೋಗುತ್ತದೆ. ಅಂತದ್ದೇ ಇಬ್ಬರು ಗೆಳೆಯರ ಬದುಕಿನಲ್ಲಿ ಎದುರಾಗುವ ಪ್ರೀತಿಯ ಸೆಳೆತ , ಆಕರ್ಷಣೆಗೆ ಸಿಲುಕಿ ಎದುರಾಗುವ ಎಡವಟ್ಟುಗಳ ಸುತ್ತ ಹಾಸ್ಯ ಮಿಶ್ರಣದೊಂದಿಗೆ ಸಾಗಿ ಜೀವನದಲ್ಲಿ ಯಾವುದು ಮುಖ್ಯ ಎಂಬುದರ ಅರಿವು ಮೂಡಿಸುವ ಪ್ರಯತ್ನದೊಂದಿಗೆ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಒಂಟಿ ಬಂಟಿ ಲವ್ ಸ್ಟೋರಿ”.

ಗೆಳೆಯರೆಂದರೆ ಇವರಿಬ್ಬರ ತರ ಇರಬೇಕೆಂದುಕೊಳ್ಳುವ ಹಾಗೆ ಇರುವ ಒಂಟಿ (ವೈಭವ್ ವರ್ಧನ್) ಹಾಗೂ ಬಂಟಿ (ಯತೀಶ್ ಪನ್ನಸಮುಸ್ರ) ಕಾಲೇಜ್ ಲೈಫ್ ನ ಹೊರತಾಗಿಯೂ ಎಂಜಾಯ್ ಲೈಫ್ ಕಡೆ ಗಮನಹರಿಸುತ್ತಾ ಗರ್ಲ್ ಫ್ರೆಂಡ್ ಹುಡುಕಾಟದಲ್ಲಿ ಪರದಾಡುತ್ತಿರುತ್ತಾರೆ. ಇವರು ಕಂಡಲೆಲ್ಲಾ ಜೋಡಿ ಆಗಿ ಓಡಾಡುವ ಲವ್ ಬರ್ಡ್ಸ್ ಗಳು , ಆದರೆ ಒಂಟಿ ಗೆ ಸುಂದರಿಯೊಬ್ಬಳು ಸಿರಿ (ಶ್ವೇತಾ ಭಟ್) ಕಣ್ಣಿಗೆ ಬೀಳುತ್ತಾಳೆ. ಅವಳನ್ನ ಒಲಿಸಿಕೊಳ್ಳಲು ಗೆಳೆಯ ಬಂಟಿ ಸಹಾಯ ಕೇಳುತ್ತಾನೆ. ಆದರೆ ಬಂಟಿ ಹೆಣ್ಣಿನ ಸಹವಾಸ ಬೇಡ ಅನ್ನುವ ರೀತಿ ಹೇಳುತ್ತಾನೆ.

ಆದರೂ ಗೆಳೆಯನಿಗೆ ಸಹಾಯ ಮಾಡಿದರು ಏನು ಪ್ರಯೋಜನ ಆಗುವುದಿಲ್ಲ , ಒಮ್ಮೆ ಒಂದು ಕಠೋರ ಸತ್ಯ ಹೊರಬೀಳತ್ತೆ , ಒಂಟಿ ಯ ಪ್ರೇಯಸಿ ಸಿರಿಯೇ ಬಂಟಿಯ ಗೆಳತಿ ಎಂಬ ಸತ್ಯ. ಮುಂದೆ ಫ್ಲಾಶ್ ಬ್ಯಾಕ್ ಕೂಡ ಹೊರ ಬರುತ್ತದೆ. ಇದರ ನಡುವೆ ಪ್ರೇಮಿಗಳನ್ನೇ ಯಾಮಾರಿಸಿ ಸಹಾಯ ಬೇಡುತ್ತಾ ಹಣ ಪೀಕುವ ಐನಾಥಿ ವ್ಯಕ್ತಿ. ಇಲ್ಲಿಂದ ಹಲವು ತಿರುವುಗಳು ಎದುರಾಗುತ್ತಾ ಕ್ಲೈಮಾಕ್ಸ್ ಗೆ ಬಂದು ನಿಲ್ಲುತ್ತದೆ.
ಸಿರಿ ಯಾರ ಪಾಲು…
ಒಂಟಿ ಬಂಟಿ ಏನಾಗ್ತಾರೆ…
ಜೀವನದಲ್ಲಿ ಏನು ಮುಖ್ಯ…
ಕ್ಲೈಮಾಕ್ಸ್ ಉತ್ತರ ಏನು ಎಂಬುದನ್ನು ನೀವು ಚಿತ್ರಮಂದಿರದಲ್ಲಿ ನೋಡಬೇಕು.

ಈ ಚಿತ್ರದ ನಿರ್ದೇಶಕ ಯತೀಶ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಉತ್ತಮವಾಗಿದ್ದರು ಚಿತ್ರಕಥೆಯ ಹಾದಿಯಲ್ಲಿ ಮತ್ತಷ್ಟು ಪರಿಪಕ್ವತೆ ಅಗತ್ಯವೆನಿಸುತ್ತದೆ. ಚಿತ್ರದ ಓಟ ನಿಧಾನ ಗತಿಯಲ್ಲಿ ಸಾಗಿದ್ದು, ಮೊದಲ ಪ್ರಯತ್ನದಲ್ಲೇ ಚಿತ್ರವನ್ನು ನಿರ್ಮಿಸಿ , ನಿರ್ದೇಶನದ ಜೊತೆಗೆ ಪಾತ್ರಕ್ಕೆ ಜೀವ ತುಂಬಿ ನಟಿಸಿ ಗಮನ ಸೆಳೆದಿದ್ದಾರೆ. ಇನ್ನು ಮತ್ತೊಬ್ಬ ನಟ ವೈಭವ್ ವರ್ಧನ್ ಕೂಡ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಅದೇ ರೀತಿ ನಾಯಕಿಯರಾಗಿ ಅಭಿನಯಿಸಿರುವ ಶ್ವೇತಾ ಭಟ್ , ಶ್ರುತಿ ಚಂದ್ರಶೇಖರ್ ಮುದ್ದು ಮುದ್ದಾಗಿ ಗಮನ ಸೆಳೆಯುವಂತೆ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಪುಳಿಯೋಗರೆ ಪಾತ್ರ ಮಾಡಿರುವ ರಾಘವೇಂದ್ರ ಸೇರಿದಂತೆ ರಾಜು ಸಿರಿಗೆರೆ , ಅಭಿಷೇಕ್ ನಾರಾಯಣ್ , ಶ್ರಿಪರ್ಣ ಶೆಟ್ಟಿ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ಶ್ರೀಹರಿ ಸಂಗೀತದ ಮೋಡಿ ಗಮನ ಸೆಳೆದಿದ್ದು , ಒಂದು ಹಾಡು ಗುನುಗುವಂತಿದೆ. ಛಾಯಾಗ್ರಹಕರ ಕೈಚಳಕ ತಕ್ಕ ಮಟ್ಟಕ್ಕಿದೆ. ಒಟ್ಟಾರೆ ಯುವ ಪ್ರತಿಭೆಗಳು ಸೇರಿ ಮಾಡಿರುವ ಒಂಟಿ ಬಂಟಿ ಲವ್ ಸ್ಟೋರಿ ಯೂಥ್ ಸಬ್ಜೆಕ್ಟ್ ಹೊಂದಿದ್ದು ,  ಒಮ್ಮೆ ನೋಡಬಹುದು

error: Content is protected !!