Cini NewsSandalwood

“ಮಿಸ್ ಗೈಡ್” ಟೀಸರ್ ಬಿಡುಗಡೆ ಮಾಡಿ ನಾಗೇಂದ್ರ ಪ್ರಸಾದ್.

ಯಾವುದೇ ವಿಚಾರವಾಗಲಿ, ಸರಿ ತಪ್ಪುಗಳನ್ನ ಕೂಲಂಕುಶವಾಗಿ ಪರಿಶೀಲಿಸಿ ಮುಂದೆ ಸಾಗುವುದು ಬಹಳ ಮುಖ್ಯ. ಸತ್ಯ ತಿಳಿಯದೆ ತಪ್ಪು ನಿರ್ಧಾರ ಮಾಡಿದಾಗ ಆಗುವ ಎಡವಟ್ಟುಗಳ ಸುತ್ತ ಹೆಣೆದಿರುವ ಕಥೆ ಮಿಸ್ ಗೈಡ್. ಸೀಟಡೀಲ್ ಫಿಲಂಸ್ ಹಾಗೂ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ಹಾಗೂ ಸುಬ್ಬು ನಿರ್ಮಿಸಿರುವ ಈ ಚಿತ್ರಕ್ಕೆ ಮಂಜುಕವಿ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು, ಸಂಗೀತವನ್ನು ನೀಡಿದ್ದಾರೆ.

ಈ “ಮಿಸ್ ಗೈಡ್” ಚಿತ್ರದ ಟೀಸರ್ ಅನ್ನು ಖ್ಯಾತ ಸಾಹಿತಿ ಡಾ||ವಿ.ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿ ಕೆಲವು ವರ್ಷಗಳ ಪರಿಚಯ. ಕನ್ನಡ ಟೈಟಲ್ ಇಟ್ಕೊಂಡು ಮುಂದೆ ಸಿನೆಮಾ ಮಾಡಿ ಮಾತನಾಡುತ್ತಾ ನಿರ್ದೇಶಕ ಮಂಜು ಕವಿ ನನಗೆ ಸುಮಾರು ವರ್ಷಗಳ ಪರಿಚಯ. ಕನ್ನಡ ಶೀರ್ಷಿಕೆಗಳನ್ನ ಇಟ್ಟುಕೊಂಡು ಮುಂದೆ ಸಾಗಲಿ ಎಂಬುದು ನನ್ನ ಆಶಯ.

ಯಾರೇ ಆಗಲಿ ಯಾರಿಗೂ ಮಿಸ್ ಗೈಡ್ ಮಾಡದೆ ಸರಿಯಾದ ದಾರಿಯಲ್ಲಿ ಸಾಗಬೇಕು. ಸಿನಿಮಾ ಉತ್ತಮವಾಗಿ ಬಂದಿರಬೇಕು ಅಂದುಕೊಂಡಿದ್ದೇನೆ. ಜನರಿಗೆ ಸಿನಿಮಾ ಮುಟ್ಟಲು ಪಬ್ಲಿಸಿಟಿ ಆಗತ್ಯವಾಗಿದೆ. ಆ ನಿಟ್ಟಿನಲ್ಲಿ ತಂಡ ಸಾಗಲಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಗಗನ್ ರಾಜ್ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ಚಿತ್ರತಂಡದವರು “ಮಿಸ್ ಗೈಡ್” ಬಗ್ಗೆ ಮಾಹಿತಿ ನೀಡಿದರು.

ಇನ್ನು ನಿರ್ದೇಶಕ ಮಂಜು ಕವಿ ಮಾತನಾಡುತ್ತಾ ಇದು ನಾನು ನಿರ್ದೇಶಿಸಿರುವ ಎರಡನೇ ಚಿತ್ರ. ನನ್ನ ಕಥೆ ಮೆಚ್ಚಿ ನಾಗರಾಜ್ ಹಾಗೂ ಸುಬ್ಬು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಾವು – ಮುಂಗುಸಿಯ ಕಥೆಯನ್ನು ಆದರ್ಶವಾಗಿಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ. ಮುಂಗುಸಿಯೊಂದು ಮಗುವನ್ನು ಕಾಪಾಡಲು ಹಾವಿನೊಂದಿಗೆ ಸೆಣೆಸಾಡುತ್ತದೆ. ಆದರೆ ಮುಂಗುಸಿಯ ಬಾಯಲ್ಲಿ ರಕ್ತ ನೋಡಿದ ಮಗುವಿನ ತಾಯಿ ಮುಂಗುಸಿ ತನ್ನ ಮಗುವಿಗೆ ಏನೋ ಮಾಡಿದೆ ಅಂದುಕೊಳ್ಳುತ್ತಾಳೆ.

ಈ ಕಥೆಯೇ ನಮ್ಮ ಚಿತ್ರಕ್ಕೆ ಸ್ಪೂರ್ತಿ. ಇನ್ನು ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಎಲ್ಲಾ ಮುಕ್ತಾಯವಾಗಿದ್ದು, ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಚಿತ್ರತಂಡದ ಸಹಕಾರದಿಂದ “ಮಿಸ್ ಗೈಡ್” ಅಂದುಕೊಂಡ ಹಾಗೆ ಬಂದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ನಾನೇ ಗೀತರಚನೆ ಮಾಡಿ ಸಂಗೀತ ನೀಡಿದ್ದೀನಿ. ತಾಯಿ – ಮಗನ ಸೆಂಟಿಮೆಂಟ್ ಹಾಡನ್ನು ಜನಪ್ರಿಯ ಗಾಯಕ ಗುರುಕಿರಣ್ ಹಾಡಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಈ ಚಿತ್ರದ ಕಥೆ ಇಷ್ಟವಾಗಿ ನಿರ್ಮಾಣ ಮಾಡಲು ಮುಂದಾಗಿರುವುದಾಗಿ ನಿರ್ಮಾಪಕರಾದ ನಾಗರಾಜ್ ಹಾಗೂ ಸುಬ್ಬು ಹೇಳಿದರು. ಚಿತ್ರದ ಪ್ರಮುಖ ಪಾತ್ರದಲ್ಲಿ ನಟನೆ ಕೂಡ ಮಾಡಿರುವುದಾಗಿ ಸುಬ್ಬು ತಿಳಿಸಿದರು.

ಈ ಚಿತ್ರದ ನಾಯಕ ನಿತೀಶ್ ವಿನಯ್ ರಾಜ್ ಮಾತನಾಡುತ್ತ ಚಿತ್ರದ ಕಥೆ ಹಾಗೂ ನನ್ನ ಪಾತ್ರ ಎರಡು ಚೆನ್ನಾಗಿದೆ. ನಿರ್ದೇಶಕರು ಬಹಳಷ್ಟು ಹೇಳಿಕೊಟ್ಟಿದ್ದಾರೆ ಎಂದರು. ಈ ಚಿತ್ರದ ನಾಯಕಿಯರಾದ ಫರೀನ್ ಹಾಗೂ ರಕ್ಷ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹಾಜರಲಿಲ್ಲ.

ಸುಮಾರು 25 ಕ್ಷೇತ್ರಗಳಲ್ಲಿ ಅಭಿನಯಿಸಿರುವ ಜಗದೀಶ್ ಕೊಪ್ಪ ನಾಯಕಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಪ್ರಾಣೇಶ್ ಎಂಬ ಮತ್ತೊಬ್ಬ ಪ್ರತಿಭೆ ನೆಗೆಟಿವ್ ಪಾತ್ರವನ್ನು ಮಾಡಿದ್ದಾರೆ. ಹಿನ್ನೆಲೆ ಸಂಗೀತ ನೀಡಿರುವ ವಿನು ಮನಸು ಹಾಗೂ ಸಾಹಸ ನಿರ್ದೇಶಕ ಮಾಸ್ ಮಾದ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಸಹ ನಿರ್ದೇಶಕರಾಗಿ ಎಸ್‌. ಜೆ ಸಂಜಯ್, ಸಂಗೀತ ಶೆಟ್ಟಿ ಕಾರ್ಯ ನಿರ್ವಹಿಸಿದ್ದಾರೆ. ಸಾಕಷ್ಟು ರಂಗಭೂಮಿ ಕಲಾವಿದರೆ ಈ ಚಿತ್ರದಲ್ಲಿ ಅಭಿನಯಿಸಿದ್ದು , ಅತಿ ಶೀಘ್ರದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ತಂಡ ಹಾಕಿಕೊಂಡಿದೆ.

 

error: Content is protected !!