Cini NewsSandalwood

“ಮತ್ಸ್ಯಗಂಧ” ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಸಚಿವ ಮಾಂಕಾಳ ವೈದ್ಯ

ಕಡಲ ಕಿನಾರೆಯ ಮೀನುಗಾರರ ಬದುಕು , ಬಾವಣಿಯನ್ನ ಬಿಂಬಿಸುವ ನೈಜಕ್ಕೆ ಹತ್ತಿರ ಎನ್ನುವಂತಹ “ಮತ್ಸ್ಯಗಂಧ” ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಆಯೋಜನೆ ಗೊಂಡಿತ್ತು. ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೀನುಗಾರಿಕೆ ಸಚಿವ ಶ್ರೀ ಮಾಂಕಾಳ.

ಎಸ್. ವೈದ್ಯ ರವರು ಚಿತ್ರದ ಟ್ರೈಲರ್ ರಿಲೀಸ್ ಮಾಡಿದರು. ನಂತರ ಮಾತನಾಡುತ್ತಾ ತಮ್ಮದೇ ಜಿಲ್ಲೆಯ ಕಥೆಯನ್ನು ಸಿನಿಮಾ ಮಾಡಿರುವುದು ಬಹಳ ಖುಷಿ ಕೊಟ್ಟಿದೆ. ಹಾಗೆಯೇ ನಮ್ಮೆದೆ ಜಿಲ್ಲೆಯ ಪ್ರತಿಭೆ ಪ್ರಶಾಂತ್ ಸಿದ್ದಿ ಅವರ ಜನಾಂಗ ಬಹಳ ಹಿಂದುಳಿದಿದೆ ಆದರೂ ಶ್ರಮವಹಿಸಿ ಈ ಮಟ್ಟಕ್ಕೆ ಬೆಳೆದು ಬಂದು ಚಿತ್ರಗಳಲ್ಲಿ ನಟಿಸಿ ಈಗ ಮೊದಲ ಬಾರಿಗೆ ಸಂಗೀತ ನಿರ್ದೇಶಕನಾಗಿ ಹೊರ ಬರುತ್ತಿದ್ದಾರೆ. ಅವರ ಎಲ್ಲಾ ಪ್ರಯತ್ನಕ್ಕೂ ಯಶಸ್ಸು ಸಿಗಲಿ.

ಹಾಗೆ ಚಿತ್ರದ ನಟ ಪೃಥ್ವಿ ಅಂಬಾರ್ ಹಾಗೂ ನಿರ್ದೇಶಕ , ನಿರ್ಮಾಪಕ ಸೇರಿದಂತೆ ಎಲ್ಲರಿಗೂ ಯಶಸ್ಸು ಸಿಗಲಿ. ಈ ಟ್ರೈಲರ್ ನೋಡಿದಾಗ ನನಗೆ ಅನಿಸಿದ್ದು ಮೀನುಗಾರರ ಶ್ರಮ, ಅವರು ಪಡುವ ಕಷ್ಟ, ಕುಟುಂಬಗಳ ನೋವು, ಪೊಲೀಸರ ಹುಡುಕಾಟ ಕಾಣುತ್ತದೆ. ಚಿತ್ರ ಖಂಡಿತ ದೊಡ್ಡ ಮಟ್ಟದ ಯಶಸ್ವಿಯಾಗಲಿ, ನಾನು ಚಿತ್ರ ನೋಡುವುದು ಕಮ್ಮಿ , ಆದರೂ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡುತ್ತೇನೆ. ನನ್ನ ಕಡೆಯಿಂದ ಏನು ಸಹಾಯ ಆಗಬೇಕು ಅದನ್ನು ಮಾಡುತ್ತೇನೆ. ಚಿತ್ರ ತಂಡಕ್ಕೆ ಶುಭವಾಗಲಿ ಎಂದರು.

ಈ ಟ್ರೈಲರ್ ಬಿಡುಗಡೆಗೆ ಮುನ್ನ ಚಿತ್ರೋದ್ಯಮದ ಹಲವಾರು ಸ್ಟಾರ್ ನಟರು, ನಿರ್ದೇಶಕರು, ನಿರ್ಮಾಪಕರುಗಳಾದ ದುನಿಯಾ ವಿಜಯ್, ಸೂರಿ, ಯೋಗರಾಜ್ ಭಟ್, ತರುಣ್ ಸುಧೀರ್, ಉದಯ್ ಮೆಹ್ತಾ , ಶಶಾಂಕ್, ಕೆ.ಪಿ ಶ್ರೀಕಾಂತ್ , ಚೇತನ್ ಈ ಭರ್ಜರಿ ಟ್ರೈಲರ್ ನೋಡಿ ಜೊತೆಗೆ “ಕ ಪಿಚ್ಚರ್” ಪ್ರವೀಣ್ ಹಾಗೂ ತಂಡ ಈ ಚಿತ್ರವನ್ನು ಅರ್ಪಿಸಿ ರಾಜ್ಯದ್ಯಂತ ಬಿಡುಗಡೆ ಮಾಡಿಸುತ್ತಿರುವ ವಿಚಾರದ ಬಗ್ಗೆ ಹಾಗೂ ಚಿತ್ರರಂಗದಲ್ಲಿ ಅವರ ಒಡನಾಟದ ಕುರಿತು ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಾ ಇಡೀ ಚಿತ್ರತಂಡಕ್ಕೆ ಶುಭವನ್ನು ಹಾರೈಸಿದರು.

ಈಗಾಗಲೇ “ಮತ್ಸ್ಯಗಂಧ” ಚಿತ್ರದ ಬಗ್ಗೆ ಬಹಳಷ್ಟು ಕುತೂಹಲ ಮೂಡಿದ್ದು , ಸದ್ಯ ಬಿಡುಗಡೆ ಆಗಿರುವ ಟ್ರೈಲರ್ ಎನ್ನಡೆ ಬಾರಿ ವೈರಲ್ ಆಗಿದೆ.ಈ ಒಂದು ಕಥೆ ಸೂಕ್ಷ್ಮ ವಿಚಾರದ ಜೊತೆಗೆ ಟೆಕ್ನಿಕಲಿ ಸ್ಟ್ರಾಂಗ್ ಆಗಿದ್ದು , ಈ ಚಿತ್ರದ ಹಾಡುಗಳು ಈಗಾಗಲೇ ಸದ್ದು ಮಾಡಿದೆಯಂತೆ. ಕನ್ನಡ ಪಿಚ್ಚರ್ ಅರ್ಪಿಸುವ  ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್  ನಿರ್ಮಾಣದಲ್ಲಿ “ಮತ್ಸ್ಯಗಂಧ” ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನ ದೇವರಾಜ್ ಪೂಜಾರಿ ನಿರ್ದೇಶಿಸಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ್ ಛಾಯಾಗ್ರಹಣ ಚಿತ್ರಕ್ಕಿದ್ದು, ಪೃಥ್ವಿ ಅಂಬರ್, ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ತಾರಾಬಳ ಈ ಚಿತ್ರದಲ್ಲಿದೆ. ಈಗಾಗಲೇ ಅದ್ದೂರಿ ಪ್ರಚಾರ ನಡೆಯುತ್ತಿದ್ದು ಫೆಬ್ರವರಿ 23ಕ್ಕೆ “ಮತ್ಸ್ಯಗಂಧ” ಚಿತ್ರ ಶಾಲಿನಿ ಆರ್ಟ್ಸ್ ಮೂಲಕ ರಿಲೀಸ್ ಆಗುತ್ತಿದೆ. ಇನ್ನೇನಿದ್ದರೂ ಬೆಳ್ಳಿ ಪರದೆ ಮೇಲೆ “ಮತ್ಸ್ಯಗಂಧ” ಯಾವ ರೀತಿ ಗಮನ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕು.

error: Content is protected !!