Cini NewsSandalwoodTV Serial

ರೋಬೋಟ್ ಮೂಲಕ “ಕುಂಟೆಬಿಲ್ಲೆ” ಚಿತ್ರದ ಟ್ರೇಲರ್ ರಿಲೀಸ್.

ಚಂದನವನದಲ್ಲಿ ವಿಭಿನ್ನ ಬಗೆಯ ‘ದಕ್ಷಯಜ್ಞ’ , ‘ತರ್ಲೆ ವಿಲೇಜ್’, ‘ಋತುಮತಿ’ ಯಂಥ ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಜೀವಿತ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿದ್ಧವಾಗಿರುವಂತಹ ಚಿತ್ರವೇ “ಕುಂಟೆಬಿಲ್ಲೆ”. ಈ ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಬಹಳ ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು , ಅದರಲ್ಲೂ ವಿಶೇಷವಾಗಿ ರೋಬೋಟ್ ಮೂಲಕ ಟ್ರೈಲರ್ ರಿಲೀಸ್ ಮಾಡಿದ್ದು , ಎಲ್ಲರ ಗಮನ ಸೆಳೆದಿತ್ತು. ಹಾಗೆಯೇ ವೇದಿಕೆಯಲ್ಲಿ ರೋಬೋಟ್ ಚಿತ್ರದ ‘ಜಾಲಿ.. ಜಾಲಿ.. ಎಲ್ಲಾ.. ಜಾಲಿ…’ ಗೀತೆಗೆ ಹೆಜ್ಜೆ ಹಾಕಿತು. ಈಗಾಗಲೇ ಈ ರೀತಿಯ ರೋಬೋಟ್ ಐಪಿಎಲ್ ಮ್ಯಾಚ್ ನಲ್ಲಿ ನೋಡಿದ್ವಿ, ಈಗ ಇದು ಸಿನಿಮಾ ಕ್ಷೇತ್ರಕ್ಕೂ ಬಂದಂತಾಯಿತು. ತಾಂತ್ರಿಕತೆ ಎಷ್ಟು ಮುಂದುವರೆದಿದೆ ಎಂಬುದನ್ನು ಗಮನಿಸಲೇಬೇಕು. ಈ ಒಂದು ರೋಬೋಟ್ ಜವಾಬ್ದಾರಿಯನ್ನ ಸ್ನಪ್ಪಿ ಫಾರ್ ಈವೆಂಟ್ ನಿರ್ವಹಿಸುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರುವ ಕುಂಟೆಬಿಲ್ಲೆ ಚಿತ್ರತಂಡ ಸೆಪ್ಟೆಂಬರ್ 26ರಂದು ರಾಜ್ಯಾದ್ಯಂತ ಚಿತ್ರವನ್ನ ಬಿಡುಗಡೆ ಮಾಡಲು ಸಿದ್ಧವಾಗಿದೆ. ಮೈಸೂರು ಮೂಲದ ಗೆಳೆಯರೆಲ್ಲ ಸೇರಿ ಸಿದ್ಧಪಡಿಸಿರುವ ಈ ಚಿತ್ರದ ಪ್ರಚಾರದ ಕಾರ್ಯವನ್ನು ತಂಡ ಆರಂಭಿಸಲು ಸಿದ್ಧವಾಗಿದ್ದು , ನಿರ್ದೇಶಕ ಸಿದ್ದೇಗೌಡ ಜಿ.ಬಿ.ಎಸ್ ಪೂರ್ವ ತಯಾರಿ ಮಾಡಿಕೊಂಡು , ಸಿನಿಮಾ ಟ್ರೈಲರ್ ಅನ್ನು ರೋಬೋಟ್
ಲಾಂಚ್ ಮಾಡುವುದರ ಜೊತೆಗೆ ಚಿತ್ರದ ಪ್ರಚಾರದ ಕಾರ್ಯವನ್ನು ಆರಂಭಿಸಲು ಸಜ್ಜಾಗಿದ್ದಾರೆ.

ಇನ್ನು ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸಿದ್ದೇಗೌಡ ಮಾತನಾಡುತ್ತಾ ನಾನು ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ವಿಭಿನ್ನ ಬಗೆಯ ಚಿತ್ರಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಚಿತ್ರಕ್ಕೆ ಕಥೆ, ಸಾಹಿತ್ಯ ಬೆರೆದು ನಿರ್ದೇಶನ ಮಾಡಿದ್ದೇನೆ. ನಾನು ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ನಾವು ಬೇರೆ ಯಾರನ್ನು ಗೆಸ್ಟ್ ಅಂತ ಕರೆಯದೆ ರೋಬೋಟ್ ಮೂಲಕ ಪ್ರಮೋಷನ್ ಪ್ರಾರಂಭಿಸಿದ್ದೇವೆ. ನಮ್ಮ ಚಿತ್ರದ ಎಲ್ಲಾ ಕಾರ್ಯಕ್ರಮಕ್ಕೂ ರೋಬೋಟ್ ಸಾಥ್ ನೀಡಲಿದೆ. ನಮ್ಮ ಜೀವಿತ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾದ 6ನೇ ಸಿನಿಮಾ ‘ಕುಂಟೆಬಿಲ್ಲೆ’. ಹಳ್ಳಿಯಲ್ಲಿ ಕುಂಟೆ ಬಿಲ್ಲೆ ಆಡುತ್ತಾ ಬೆಳೆದವರು ಮುಂದೆ ದೊಡ್ಡವರಾಗಿ ಗೆಳೆಯರಾಗುತ್ತಾರಾ! ಪ್ರೇಮಿಗಳಾಗುತ್ತಾರಾ! ಅವರ ಸಂಬಂಧ ಹೇಗಿರುತ್ತೆ ಎಂಬ ಅಂಶದ ಮೇಲೆ ಸಿನಿಮಾ ಸಾಗುತ್ತದೆ. ಇದೊಂದು ಹಳ್ಳಿ ಬ್ಯಾಗ್ರೌಂಡ್‌ನಲ್ಲಿ ನಡೆವ ಲವ್ ಸ್ಟೋರಿ ಚಿತ್ರ. ಇದರಲ್ಲಿ ಲವ್, ಸಸ್ಪೆನ್ಸ್, ಕ್ರೈಂ ಎಲ್ಲಾ ಇದೆ. ನಾವು ಈ ಚಿತ್ರವನ್ನು ಜನವರಿಯಲ್ಲಿ ಶುರುಮಾಡಿ ಈಗ ರಿಲೀಸ್‌ಗೆ ಸಿದ್ದ ಮಾಡಿದ್ದೇವೆ. ಒಟ್ಟು 40 ದಿನ ಹಳ್ಳಿಯೊಂದರಲ್ಲಿ ಶೂಟಿಂಗ್ ಮಾಡಲಾಗಿದೆ. ಇದರಲ್ಲಿ ಮೂರು ಹಾಡು ಒಂದು ಫೈಟ್ ಇದೆ. ಈ ನಮ್ಮ ಚಿತ್ರಕ್ಕೆ ಪ್ರಚಾರ ನೀಡಿ ಸಹಕರಿಸಿ ಎಂದು ಕೇಳಿಕೊಂಡರು.

ಈ ಚಿತ್ರದ ನಾಯಕ ಯದು ಮಾತನಾಡಿ, ‘ಇದು ನನ್ನ ಮೊದಲ ಸಿನಿಮಾ. ಕ್ರಿಕೆಟ್ ಪ್ಲೇಯರ್ ಆಗಬೇಕು ಎಂದುಕೊAಡಿದ್ದೆ. ಒಂದು ದಿನ ನನ್ನ ತಂದೆ ಅವರ ಕನಸು ಹೇಳಿದರು. ಅವರ ಆಸೆ ಇಡೇರಿಸಬೇಕು ಎಂದು ಸಿನಿಮಾ ಮಾಡಲು ಮುಂದಾದೆ. ಮಾಲುರು ಶ್ರೀನಿವಾಸ್ ಅವರ ನಟನ ಸ್ಕೂಲ್‌ನಲ್ಲಿ ಅಭಿನಯ ಸೇರಿದಂತೆ ಹಲವು ವಿಭಾಗಗಳಲ್ಲಿ ಶಿಕ್ಷಣ ಕಲಿತೆ. ಈ ಚಿತ್ರದಲ್ಲಿ ನಾನು ಬಡ ಕುಟುಂಬದ ಹುಡುಗ. ಆತ ಪ್ರೀತಿಯನ್ನು ಉಳಿಸಿಕೊಳ್ಳಲು ಏನೆಲ್ಲಾ ಮಾಡುತ್ತಾನೆ ಎಂಬುದು ನನ್ನ ಪಾತ್ರ ಎಂದರು. ಈ ಚಿತ್ರದ ನಾಯಕಿಯಾಗಿ ಮೇಘಶ್ರೀ ಅಭಿನಯಿಸಿದ್ದಾರೆ.

ಇನ್ನು ಈ ಚಿತ್ರವನ್ನು ಜೀವಿತ ಕ್ರಿಯೇಷನ್ಸ್ ಮೂಲಕ ನಿರ್ದೇಶಕರ ಸಹೋದರ ಎಸ್.ಬಿ ಶಿವು ನಿರ್ಮಾಣ
ಮಾಡ್ತಿದ್ದು , ಚಿತ್ರದ ಕುರಿತು ಮಾತನಾಡುತ್ತಾ ಒಂದು ದೊಡ್ಡ ಮಟ್ಟದ ಚಿತ್ರ ಮಾಡಬೇಕೆಂಬ ಆಸೆ ಇತ್ತು, ಅದರಂತೆ ಈ ಚಿತ್ರವು ಈಗ ಸಿದ್ಧವಾಗಿದೆ. ಎಲ್ಲಾ ರೀತಿಯ ಅಂಶವು ಈ ಚಿತ್ರದಲ್ಲಿ ಒಳಗೊಂಡಿದೆ. ನಮಗೆ ಮಾಧ್ಯಮದವರ ಬೆಂಬಲ ನೀಡಿ ನಮ್ಮನ್ನು ಬೆಳೆಸಬೇಕು ಎಂದು ಕೇಳಿಕೊಂಡರು. ಅದೇ ರೀತಿ ನಾಯಕ ಯದು ಅವರ ತಂದೆ ಕುಮಾರ್ ಗೌಡ ನಿರ್ಮಾಣದಲ್ಲಿ ಸಾತ್ ನೀಡಿ ಮಾತನಾಡುತ್ತಾ ನಾನು ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಬಂದೆ, ಅವಕಾಶ ಸಿಗದೆ ಇದ್ದಾಗ ಬ್ಯುಸಿನೆಸ್ ಮಾಡತಾ ಇದ್ದೆ. ಈಗ ನನ್ನ ಮಗ ಆಸೆ ಇಡೇರಿಸಿದ್ದಾನೆ. ಅವನಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ಈ ಚಿತ್ರಕ್ಕೆ ಬಿ.ಎ. ಮಧು ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಮುಂಜಾನೆ ಮಂಜು ಛಾಯಾಗ್ರಹಣ, ಹರಿಕಾವ್ಯ ಸಂಗೀತವಿದೆ. ವೇದಿಕೆಯಲ್ಲಿ ನಟರಾದ ದೀರಜ್ ತಮ್ಮ ಅನುಭವ ಹಂಚಿಕೊಂಡರು. ಒಟ್ಟಾರೆ ಇಡೀ ತಂಡ ಅಂದುಕೊಂಡಂತೆ ಚಿತ್ರ ಬಂದಿದ್ದು , ಅದ್ದೂರಿ ಪ್ರಚಾರದ ಮೂಲಕ ತೆರೆಯ ಮೇಲೆ ತರುವ ಪ್ಲಾನ್ ಹಾಕಿಕೊಂಡಿದೆ.

error: Content is protected !!