Cini NewsSandalwood

“ಕೃಷ್ಣಾವತಾರ” ಯುಗಾದಿ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಮಹಾರಾಜ ಯದುವೀರ್ ಒಡೆಯರ್.b

ಹಿರಿಯ ಸಾಹಿತಿ, ನಿರ್ದೇಶಕ ಡಾ.ವಿ. ನಾಗೇಂದ್ರಪ್ರಸಾದ್ ಅವರು ಒಬ್ಬ ಪರಿಸರ ಪ್ರೇಮಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ‘ಕೃಷ್ಣಾವತಾರ’ ಸಿರಿ ವೈ.ಎಸ್.ಆರ್. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಯುಗಾದಿ ಹಬ್ಬಕ್ಕಾಗಿ ವಿಶೇಷ ಹಾಡೊಂದನ್ನು ಡಾ.ವಿ. ನಾಗೇಂದ್ರಪ್ರಸಾದ್ ಅವರು ಬರೆದಿದ್ದಾರೆ. ‘ಯಗಗಳ ಆದಿ ಯುಗಾದಿ’ ಎಂಬ ಯುಗಾದಿ ಮಹತ್ವ ಸಾರುವ ಸಾಹಿತ್ಯ ಒಳಗೊಂಡ ಈ ಲಿರಿಕಲ್ ವಿಡಿಯೋ ಹಾಡನ್ನು ಮೈಸೂರು ಮಹಾರಾಜರಾದ
ಯದುವೀರ್ ಒಡೆಯರ್ ಅವರು ಬಿಡುಗಡೆ ಮಾಡಿದರು.

ಮುಂದಿನ ದಿನಗಳಲ್ಲಿ ಇದು ಯುಗಾದಿ ಹಬ್ಬದ ಖಾಯಂ ಹಾಡಾಗುವಂಥ ಎಲ್ಲಾ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಅಷ್ಟೊಂದು ಪರಿಣಾಮಕಾರಿಯಾದ ಸಾಹಿತ್ಯ, ರಾಗಸಂಯೋಜನೆ ಈ ಹಾಡಿನಲ್ಲಿದೆ. ಮ್ಯೂಸಿಕ್ ಬಜಾರ್ ಯು ಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದೆ.

ಮಾಯಾಬಜಾರ್ ಫಿಲಂಸ್ ಬ್ಯಾನರ್ ಅಡಿ ಗುರುಪ್ರಸಾದ್ ಕೆ. ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶುಭ ರಕ್ಷಾ, ತ್ರಿವೇಣಿ ರಾಜ್ ಚಿತ್ರದ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶ್ವನಾಥ್, ಮಾನಸಿ ಸುಧೀರ್, ರಘು ರಾಮನಕೊಪ್ಪ, ಪ್ರಕಾಶ್ ತುಮ್ಮಿನಾಡ್ ಹಾಗೂ ಇತರರು ಉಳಿದ ತಾರಾಗಣದಲ್ಲಿದ್ದಾರೆ. ಇನ್ನು ಈ ಚಿತ್ರಕ್ಕೆ ರಾಜ ಶಿವಶಂಕರ್ ಅವರು ಕ್ಯಾಮೆರಾ ವರ್ಕ್ ಮಾಡಿದ್ದು, ಎಬಿಎಂ ಸಂಗೀತ ಸಂಯೋಜನೆ ಮಾಡಿದ್ದಾರೆ.

error: Content is protected !!