Cini NewsSandalwood

“ಕೃಷ್ಣಂ ಪ್ರಣಯ ಸಖಿ” ಸಾಂಗ್ಸ್ ವೈರಲ್… ಆಗಸ್ಟ್ 15 ರಂದು ಚಿತ್ರ ತೆರೆಗೆ

ಪ್ರೇಕ್ಷಕರನ್ನ ಸಿನಿಮಾ ಮಂದಿರಕ್ಕೆ ಸೆಳೆಯುವುದಕ್ಕೆ ಪ್ರತಿಯೊಂದು ಚಿತ್ರ ತಂಡದಿಂದ ಒಂದೊಂದು ರೀತಿಯ ವಿಭಿನ್ನ ಪ್ರಯೋಗಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಹಿಂದೆ ದಂಡುಪಾಳ್ಯ ದಂತಹ ಕ್ರೂರ ರೋಚಕ ಚಿತ್ರ ತೆಗೆದಂತ ನಿರ್ದೇಶಕ ಶ್ರೀನಿವಾಸ ರಾಜು ಈಗ ಪ್ರೇಕ್ಷಕರನ್ನ ಸಂಪೂರ್ಣ ರಂಜಿಸಲು ಹೊಸ ಜಾನರ್ ನಲ್ಲಿ “ಕೃಷ್ಣಂ ಪ್ರಣಯ ಸಖಿ” ಮೂಲಕ ಬೆಳ್ಳಿ ಪರದೆಗೆ ಬರಲು ಸಜ್ಜಾಗುತ್ತಿದ್ದಾರೆ.

ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿದ್ದಾರೆ. ಈಗಾಗಲೇ ಈ ಚಿತ್ರದ ಎರಡು ಹಾಡುಗಳು ಬಿಡುಗಡೆ ಯಾಗಿದ್ದು, ಎಲ್ಲೆಡೆ ಬಾರಿ ವೈರಲ್ ಆಗಿ ಸದ್ದು ಮಾಡುತ್ತಿದೆ. ಸಿನಿಮಾ ಕುರಿತು ಹಾಗೂ ಹಾಡುಗಳ ವಿಶೇಷತೆ ಬಗ್ಗೆ ಇಡೀ ಚಿತ್ರತಂಡ ಮಾತನಾಡಲು ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತ್ತು.

ಈ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ಮಾತನಾಡುತ್ತಾ ನಾನು ಒಂದಷ್ಟು ಕಥೆಗಳನ್ನು ಮಾಡಿಕೊಂಡಿದ್ದೆ, ನಿರ್ಮಾಪಕರು ಸಿಕ್ಕಾಗ ಈ ಲಾಕ್ ಡೌನ್ ಸಂದರ್ಭ ಎಲ್ಲರಲ್ಲೂ ಆತಂಕ ಮೂಡಿಸುತ್ತಿದೆ. ಬೇರೆ ಒಂದು ಜಾನರ್ ಸ್ಟಾರ್ಟ್ ಮಾಡೋಣ ಎಂದಾಗ ಆರಂಭಗೊಂಡಂತಹ ಕಥೆಯೇ ಈ ಕೃಷ್ಣಂ ಪ್ರಣಯ ಸಖಿ. ಫ್ಯಾಮಿಲಿ ಎಂಟರ್ಟೈನ್ಮೆಂಟ್, ಕಾಮಿಡಿ ಟ್ರ್ಯಾಕ್ ಮಾಡಿದ್ದು ಈ ಚಿತ್ರ ಗಣೇಶ್ ಅವರಿಗೆ ಸೂಕ್ತವಾದ ಕಥೆ. ಈ ಚಿತ್ರದಲ್ಲಿ ಎಂಟು ಜನ ನಟಿಮಣಿಯರು ಅಭಿನಯಿಸಿರುವುದು ವಿಶೇಷ.

ಇನ್ನು ತ್ರಿಮೂರ್ತಿಗಳಾದ ರಂಗಾಯಣ ರಘು , ಸಾಧುಕೋಕಿಲ ಹಾಗೂ ಗಿರಿ ಸಿನಿಮಾದಲ್ಲಿ ಚಚ್ಚಿ ಕೆಡುವಿಕೊಂಡು ಅಭಿನಯಿಸಿದ್ದಾರೆ. ಹಿರಿಯ ನಟರಾದ ಶ್ರೀನಿವಾಸ್ ಮೂರ್ತಿ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಅಭಿನಯಿಸಿದೆ. ಹಾಗೆ ತಾಂತ್ರಿಕವಾಗಿ ಅರ್ಜುನ್ ಜನ್ಯ ಮ್ಯಾಜಿಕಲ್ ಮ್ಯೂಸಿಕ್ ಇಡೀ ಚಿತ್ರದ ಹೈಲೈಟ್ ಆಗಲಿದೆ. ಒಟ್ಟು ಆರು ಹಾಡುಗಳು ಒಂದೊಂದು ಶೈಲಿಯಲ್ಲಿ ಮೂಡಿಬಂದಿದ್ದು,

ಎರಡು ಹಾಡುಗಳು ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು , ‘ಚಿನ್ನಮ್ಮ’… ಹಾಡಂತೂ ಈಗಾಗಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ
ಟ್ರೆಂಡಿಂಗ್ ನಲ್ಲಿದೆ. ಮತ್ತಷ್ಟು ಕಾರ್ಯಕ್ರಮ ಮೂಲಕ ಮಾಹಿತಿಯನ್ನು ನೀಡುತ್ತೇವೆ. ಆಗಸ್ಟ್ 15 ರಂದು ನಮ್ಮ ಚಿತ್ರ ರಿಲೀಸ್ ಆಗಲಿದ್ದು, ನೀವೆಲ್ಲರೂ ನಮಗೆ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.

ನಟ ಗಣೇಶ್ ಮಾತನಾಡುತ್ತಾ ದಂಡುಪಾಳ್ಯ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ನನ್ನನ್ನ ಇಟ್ಕೊಂಡು ಯಾವ ರೀತಿ ಚಿತ್ರ ಮಾಡಬಹುದು ಎಂಬ ಆಲೋಚನೆ ಮೂಡಿತು. ಅವರು ಚಿತ್ರದ ಕಥೆ ಹೇಳಲು ಬಂದಾಗ ಅವರು ನನ್ನ ಜಾನರ್ ಬದಲಾಯಿಸುವ ಕಥೆ ಮಾಡಿರಬಹುದು ಅಂದುಕೊಂಡೆ. ಆದರೆ ಆರಂಭದಲ್ಲೇ ಅವರು ಎಂಟು ನಾಯಕಿಯರು ಎಂದಾಗ ಓ ಇದು ನನ್ನ ಜಾನರ್ ನ ಚಿತ್ರ ಅನಿಸಿತು.

“ಕೃಷ್ಣಂ ಪ್ರಣಯ ಸಖಿ” ಉತ್ತಮ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಬಹಳಷ್ಟು ವಿಷಯಗಳನ್ನು ಸರಾಗವಾಗಿ ಹೇಳಲು ಹೊರಟಿದ್ದಾರೆ. ಆದರೆ ಇದು ನಿರ್ದೇಶಕರೂ ತಮ್ಮ ಜಾನರ್ ಬದಲಿಸಿಕೊಳ್ಳುವ ಸಿನಿಮಾ ಮಾಡಿದ್ದಾರೆ ಅಂತಾನೆ ಹೇಳಬಹುದು. ಇನ್ನು ಈ ಚಿತ್ರದಲ್ಲಿ ಚಿತ್ರರಂಗದ ಹಿರಿಯ ನಟರೊಂದಿಗೆ ನಟಿಸಿದ್ದು ಸಂತೋಷವಾಯಿತು. ನಿರ್ದೇಶಕ ಶ್ರೀನಿವಾಸರಾಜು ಉತ್ತಮ ಚಿತ್ರ ಮಾಡಿದ್ದಾರೆ. ಪ್ರಶಾಂತ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ . “ಕೃಷ್ಣಂ ಪ್ರಣಯ ಸಖಿ” ನನ್ನ ಈವರೆಗಿನ ವೃತ್ತಿಜೀವನದ ಬಿಗ್ ಬಜೆಟ್ ನ ಚಿತ್ರ. ಆಗಸ್ಟ್ 15 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ನಮ್ಮ ಚಿತ್ರ ನೋಡಿ ಎಂದು ಹೇಳಿದರು.

ಇನ್ನು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿರುವ ನಿರ್ಮಾಪಕ ಪ್ರಶಾಂತ್ ರವರ ಸುಪುತ್ರಿ ಪ್ರೇರಣಾ ಪ್ರಶಾಂತ್ ಮಾತನಾಡುತ್ತಾ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಎಲ್ಲರಿಗೂ ಇಷ್ಟವಾಗುವಂತ ವಿಚಾರ ಇದೆ.ನೀವೆಲ್ಲರೂ ನೋಡಿ ನಮ್ಮನ್ನ ಬೆಳೆಸಿ ಎಂದು ಕೇಳಿಕೊಂಡರು.

ಇನ್ನು ನಾಯಕಿಯರಾದ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ಅದೇ ರೀತಿ ಹಿರಿಯ ನಟರಾದ ಶ್ರೀನಿವಾಸಮೂರ್ತಿ , ಸಾಧುಕೋಕಿಲ, ರಂಗಾಯಣ ರಘು, ಶಿವಧ್ವಜ್, ಗಿರಿ ಮುಂತಾದವರು “ಕೃಷ್ಣಂ ಪ್ರಣಯ ಸಖಿ” ಚಿತ್ರದ ಕುರಿತು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಹಳಷ್ಟು ನಿರೀಕ್ಷೆಯೊಂದಿಗೆ ನಿರ್ಮಾಣಗೊಂಡಿರುವ ಈ ಚಿತ್ರ ಅದ್ದೂರಿ ಪ್ರಚಾರದ ಮೂಲಕ ಬಿಡುಗಡೆಗೊಳ್ಳಲು ಸಿದ್ಧತೆಗಳನ್ನು ಮಾಡಿಕೊಂಡಿದೆ.

error: Content is protected !!