Cini NewsSandalwood

ಸೆನ್ಸಾರ್ ಪಾಸಾದ ‘ಕೋಣ’ ಸಿನಿಮಾಗೆ ಸಿಕ್ತು U/A ಸರ್ಟಿಫಿಕೇಟ್

ಬಿಗ್​​ಬಾಸ್ ಮೂಲಕ ಖ್ಯಾತಿ ಪಡೆದ ನಟಿ ತನಿಷಾ ಕುಪ್ಪಂಡ ನಾಯಕಿಯಾಗಿ ಹಾಗೂ ನಿರ್ಮಾಪಕಿಯೂ ಆಗಿರುವ ‘ಕೋಣ’ ಸಿನಿಮಾ ಇದೇ ತಿಂಗಳ 31ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ನಾಯಕನಾಗಿ ಅಭಿನಯಿಸಿದ್ದಾರೆ. ಟ್ರೇಲರ್ ಮೂಲಕ ಗಮನಸೆಳೆದಿರುವ ಕೋಣ ಚಿತ್ರ ಸೆನ್ಸಾರ್ ಪ್ರಕ್ರಿಯೆ ಮುಗಿಸಿಕೊಂಡಿದೆ.

ಡಾರ್ಕ್ ಕಾಮೆಡಿ ಶೈಲಿಯಲ್ಲಿ ‘ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ದೊರೆತಿದೆ.ಕೀರ್ತಿರಾಜ್, ರಿತ್ವಿ ಜಗದೀಶ್, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ನಮ್ರತಾ ಗೌಡ, ವಿನಯ್ ಗೌಡ, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಹರಿಕೃಷ್ಣ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ನಾಗೇಶ್ ಎನ್ ಸಹ ನಿರ್ದೇಶಕರಾಗಿ ಆಗಿ ಕೆಲಸ ಮಾಡಿದ್ದಾರೆ. ಒಂದು ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದೆ.

ಶಶಾಂಕ್ ಶೇಷಗಿರಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ನಾಗರಾಜ್ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದು, ಉಮೇಶ್ ಆರ್ಬಿ ಅವರ ಸಂಕಲನ ಚಿತ್ರಕ್ಕಿದೆ, ಸಾಹಸ ನಿರ್ದೇಶಕರಾಗಿ ವಿನೋದ್‌ ಕುಮಾರ್‌, ಮುರುಗ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಗೂ ಶಶಿಕುಮಾರ್ ಅವರ ಸಂಭಾಷಣೆ ಕೋಣ ಚಿತ್ರಕ್ಕಿದೆ.

 

error: Content is protected !!