Cini NewsTV Serial

‘ಕರ್ನಾಟಕ Love’s ಕೇರಳ’ ವೆಬ್ ಸಿರೀಸ್ ಗೆ ಮುಹೂರ್ತ

ಸ್ಯಾಂಡಲ್ವುಡ್ನಲ್ಲಿ ಈಗ ಹೊಸಬರಿಗೆ ವಿಫುಲ ಅವಕಾಶವಿದೆ. ಹೊಸಬರ ಚಿತ್ರಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿವೆ. ಇದೀಗ ಮತ್ತೊಂದು ಪ್ರತಿಭಾನ್ವಿತ ಹಾಗೂ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ‘ಕರ್ನಾಟಕ Love’s ಕೇರಳ’ ಎಂಬ ವೆಬ್ ಸಿರೀಸ್ ರೂಪಿಸುತ್ತಿದೆ.‌ ಅದರ ಮೊದಲ ಭಾಗವಾಗಿ ಇತ್ತೀಚೆಷ್ಟೇ ಬೆಂಗಳೂರಿನ ವೆಂಕಟೇಶ್ವರ ದೇಗುಲದಲ್ಲಿ ಚಿತ್ರ ಸೆಟ್ಟೇರಿದೆ. ‘ಕರ್ನಾಟಕ Love’s ಕೇರಳ’ ಸಿರೀಸ್ ಗೆ ಗರುಡ ರಾಮ್ ಕ್ಲಾಪ್ ಮಾಡಿದ್ದು, ವೀರಕಪುತ್ರ ಶ್ರೀನಿವಾಸ್ ಕ್ಯಾಮೆರಾ ಚಾಲನೆ ನೀಡಿದ್ದಾರೆ

‘ಕರ್ನಾಟಕ Love’s ಕೇರಳ’ ವೆಬ್ ಸರಣಿಗೆ ಯುವ ಪ್ರತಿಭೆ ಲೋಕೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಬಸ್ ಮೆಕಾನಿಕಲ್ ಆಗಿರುವ ಲೋಕೇಶ್‌‌ ಒಂದಷ್ಟು ಕಿರುಚಿತ್ರಗಳಿಗೆ ನಿರ್ದೇಶಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿಯಿಸಿದ್ದು , ಪೂರ್ಣ ಪ್ರಮಾಣದ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಜ್ಯೋತಿ, ಸಹನ ಸಾಥ್ ಕೊಟ್ಟಿದ್ದಾರೆ.

ಎಂಎಂಕೆ ಬಾಲು ನಿರ್ಮಾಣ‌ ಮಾಡುತ್ತಿರುವ ಕರ್ನಾಟಕದ love’s ಕೇರಳ ಸಿರೀಸ್ ಗೆ ಲೋಕೇಶ್ ಅವರದ್ದೇ ಕಥೆ ಚಿತ್ರಕಥೆ. ಟೈಟಲ್ ಹೇಳುವಂತೆ ಇದೊಂದು ಪ್ರೇಮಕಥೆ‌‌ ಒಳಗೊಂಡಿದೆ. ಆನಂದ್ ಇಳಯರಾಜ ಛಾಯಾಗ್ರಹಣ, ಪ್ರವೀಣ್ ಶ್ರೀನಿವಾಸ್ ಸಂಗೀತ, ಮಹೇಶ್ ಸಂಕಲನ ಸರಣಿಗಿದೆ.‌ ಮುಂದಿನ ವಾರದಿಂದ ಕೇರಳ ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ.

error: Content is protected !!