Cini NewsSandalwood

’ಕನ್ನಡತಿ’ ಆದಿ ಈಗ ಹೀರೋ…ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಹೆಜ್ಜೆಗೆ ಅರಸು ಡೈರೆಕ್ಷರ್

Spread the love

ಕನ್ನಡ ಕಿರುತೆರೆಲೋಕದಲ್ಲಿ ಜನಪ್ರಿಯ ಧಾರಾವಾಹಿ ಕನ್ನಡತಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದವರು ಆದಿ ಊರೂಫ್ ಸ್ಮೈಲ್ ಗುರು ರಕ್ಷಿತ್…ತಕಧಿಮಿತ, ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಮಿಂಚಿರುವ ರಕ್ಷಿತ್, ಪದ್ಮಾವತಿ ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿ ಈಗ ಬೆಳ್ಳಿತೆರೆಗೂ ಎಂಟ್ರಿ ಕೊಡುತ್ತಿದ್ದಾರೆ.

ಸ್ಮೈಲ್ ಗುರು ರಕ್ಷಿತ್ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಚೊಚ್ಚಲ ಕನಸ್ಸಿನ ಅರಸು, ಆಕಾಶನಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿರುವ ಮಹೇಶ್ ಬಾಬು ಜೊತೆಯಾಗಿ ನಿಂತಿದ್ದಾರೆ. ಅರ್ಥಾತ್ ರಕ್ಷಿತ್ ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾಗೆ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮಹೇಶ್ ಬಾಬು ಹಾಗೂ ರಕ್ಷಿತ್ ಕಾಂಬಿನೇಷನ್ ನಲ್ಲಿ ಮೂಡಿಬರ್ತಿರುವ ಸಿನಿಮಾ ಕಲ್ಟ್ ಪ್ರೇಮಕಥಾಹಂದರ ಹೊಂದಿದೆ. ಸ್ಕ್ರೀಪ್ಟ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಜನವರಿ ತಿಂಗಳಿಂದ ಶೂಟಿಂಗ್ ಅಖಾಡಕ್ಕೆ ಧುಮುಕಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಲೀಡಿಂಗ್ ಸ್ಟ್ಯಾಂಡಿಂಗ್ ಮೇಕರ್ಸ್ ಎಂಎಂಎಂ ಗ್ರೂಫ್ಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ.

ಕಿರುತೆರೆ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಕನ್ನಡತಿ ಆದಿ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಟನೆ ಜೊತೆಗೆ ಅದ್ಭುತ ಡ್ಯಾನ್ಸರ್ ಆಗಿರುವ ಸ್ಮೈಲ್ ಗುರು ರಕ್ಷಿತ್ ತಮ್ಮದೇ ಸ್ಮೈಲ್ ಗುರು ಡ್ಯಾನ್ಸ್ ಗ್ಯಾರೇಜ್ ಮೂಲಕ ಡ್ಯಾನ್ಸಿಂಗ್ ಟ್ರೈನಿಂಗ್ ನೀಡುತ್ತಿದ್ದಾರೆ. ಒಂದಷ್ಟು ತಯಾರಿಗಳೊಂದಿಗೆ ರಕ್ಷಿತ್ ಸ್ಯಾಂಡಲ್ ವುಡ್ ಗೆ ಅಡಿ ಇಡುತ್ತಿದ್ದು, ಪ್ರೇಮಕಥೆಗಳ ಸೂತ್ರಧಾರ ಮಹೇಶ್ ಬಾಬು ಈ ಬಾರಿ ಯಾವ ರೀತಿ ಕಥೆಯೊಂದಿಗೆ ಪ್ರೇಕ್ಷಕರ ಎದುರು ಹಾಜರಾಗಲಿದ್ದಾರೆ ನೋಡಬೇಕು.

Visited 1 times, 1 visit(s) today
error: Content is protected !!