Cini NewsSandalwood

ಕುತೂಹಲ ಮೂಡಿಸುವ ‘ಕಣಂಜಾರು’ ಟೀಸರ್ ವೈರಲ್.

ಬೆಳ್ಳಿ ಪರದೆ ಮೇಲೆ ಮತ್ತೊಂದು ಕುತೂಹಲ ಮೂಡಿಸುವ ಥ್ರಿಲ್ಲರ್ ಕಥಾನಕ “ಕಣಂಜಾರು” ಚಿತ್ರ ತೆರಿಗೆ ಬರಲು ಸಿದ್ಧವಾಗಿದ್ದು , ಈ ಚಿತ್ರದ ಟೀಸರ್ ಈಗ ಬಿಡುಗಡೆಗೊಂಡು ಎಲ್ಲರ ಮೆಚ್ಚುಗೆಯನ್ನು ಪಡೆಯುತ್ತಿದೆ. ಆರ್. ಪಿ. ಫಿಲ್ಮ್ಸ್ ಬ್ಯಾನರ್ ಅಡಿ ಆರ್. ಬಾಲಚಂದ್ರ ನಿರ್ಮಿಸಿ, ನಿರ್ದೇಶಿಸಿರುವ “ಕಣಂಜಾರು” ಚಿತ್ರದ ಮೋಷನ್ ಪೋಸ್ಟರ್ ಮತ್ತು ಶೀರ್ಷಿಕೆ ಬಿಡುಗಡೆ ಮಾಡಿದ್ದ ತಂಡಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಈಗ ಟೀಸರ್ ಬಿಡುಗಡೆಯಾಗಿದ್ದು ಚಿತ್ರ ತಂಡಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರ್. ಪಿ. ಫಿಲಂಸ್ ಯೂ ಟ್ಯೂಬ್ ಚಾನಲ್ ನಲ್ಲಿ ಟೀಸರ್ ಬಿಡುಗಡೆ ಆಗಿದೆ. ಟೀಸರ್ ನೋಡಿ ಸಾಕಷ್ಟು ಪ್ರೇಕ್ಷಕರು, ಚಂದನವನದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರತಂಡದ ಬೆನ್ನು ತಟ್ಟಿದ್ದಾರೆ.

ಸದ್ಯ ಬಿಡುಗಡೆಯಾಗಿರುವ ಟೀಸರ್ ನಲ್ಲಿ ಮಳೆಯ ನಡುವೆ ಹುಡುಗಿಯನ್ನು ಕೊಲ್ಲಲು ಆಯುಧಗಳನ್ನ ಹಿಡಿದು ಬರುವ ದುಷ್ಟ ವ್ಯಕ್ತಿಗಳನ್ನು ಹೊಡೆದು ಉರುಳಿಸುವ ನಾಯಕನ ಎಂಟ್ರಿ ನಡುವೆ ಥ್ರಿಲ್ಲಿಂಗ್ ರೂಪದಲ್ಲಿ ಕಾಣುವ ಮುಖ ಹಾಗೂ ರೀ ರೆಕಾರ್ಡಿಂಗ್ ಬೇರೆಯದೆ ಕಥೆಯನ್ನು ಹೇಳುವಂತಿದೆ.

ಆರ್.ಬಾಲಚಂದ್ರ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕಾರ್ಕಳ, ಉಡುಪಿ, ಹೊನ್ನಾವರ ಸೇರಿದಂತೆ ಮತ್ತಿತರ ಕಡೆ 60 ದಿನಗಳ ಕಾಲ ಚಿತ್ರೀಕಣ ಮಾಡಲಾಗಿದೆ. ಕಾರ್ಕಳ ಬಳಿಯ ಊರಿನ ಹೆಸರು ಕಣಂಜಾರು. ಥ್ರಿಲ್ಲರ್ ವಿಷಯ ಆಗಿರುವುದರಿಂದ ಆ ಹೆಸರು ಇಡಲಾಗಿದೆ. ಅದು ಯಾಕೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎನ್ನುತ್ತಾರೆ ನಿರ್ಮಾಪಕರೂ ಆಗಿರುವ ಆರ್.ಬಾಲಚಂದ್ರ.

ಈ ಹಿಂದೆ ಮಹಾನುಭಾವರು ಚಿತ್ರದಲ್ಲಿ ನಾಯಕ ಜೊತೆಗೆ ನಿರ್ಮಾಣ ಮಾಡಿದ್ದೆ, ಇದೊಂದು ಆಸಕ್ತಿ ಮತ್ತು ಕುತೂಹಲ ಕಾರಿ ಸಂಗತಿಯ ಕಥೆಯನ್ನು ಹೊಂದಿದ್ದರಿಂದ ನಾನೇ ನಿರ್ದೇಶನ ಮಾಡಲು ಮುಂದಾದೆ. ಚಿತ್ರದ ಉಳಿದ ಮಾಹಿತಿಯನ್ನು ಹಂತ ಹಂತವಾಗಿ ಬಿಡುಗಡೆ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಬಾಲಚಂದ್ರ, ಅಪೂರ್ವ, ಶರ್ಮಿತಾ ಗೌಡ, ಹಿರಿಯ ನಟ ರಾಮಕೃಷ್ಣ, ಪಿ.ಎಸ್. ಶ್ರೀಧರ್ ಹಾಗು ಮೇಘ ಸೇರಿದಂತೆ ಹೊಸ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ ಸಂಕಲನ, ಮಂಜುನಾಥ್ ಹೆಗಡೆ ಕ್ಯಾಮರ ಚಿತ್ರಕ್ಕಿದೆ. ಬಿಡುಗಡೆಗೆ ಸಿದ್ಧವಿರುವ ಈ ಚಿತ್ರತಂಡ ಮತ್ತಷ್ಟು ಮಾಹಿತಿ ಸದ್ಯದಲ್ಲೇ ನೀಡಲಿದೆ

error: Content is protected !!