ಪ್ರೀತಿ , ವಾತ್ಸಲ್ಯವೇ ಉಸಿರು “ಜಾಲಿ” (ಚಿತ್ರವಿಮರ್ಶೆ – ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಜಾಲಿ
ನಿರ್ದೇಶಕ : ತಾರುಷ್
ನಿರ್ಮಾಪಕರು : ಬ್ರಿಜ್ ಯಾದವ್, ನಾಗವೇಣಿ
ಸಂಗೀತ : ನಿತಿನ್ ರಾಜ್
ಛಾಯಾಗ್ರಹಣ : ಯೋಗೇಶ್ವರನ
ತಾರಾಗಣ : ತಾರುಷ್ ಕೃಷ್ಣ , ಪದ್ಮಶ್ರೀ ಜೈನ್ , ಡಿ .ಕೃಷ್ಣಪ್ಪ ವೇಣುಗೋಪಾಲ್ , ರೇಖಾ ದಾಸ್, ಶೋಭರಾಜ್, ಸುಶ್ಮಿತಾ ಜಗಪ್ಪ , ಮಹಾಂತೇಶ್, ಅಭಿ, ಭರತ್ ಹಾಗೂ ಮುಂತಾದವರು…
ಜೀವನವೇ ಒಂದು ಪಾಠವಿದ್ದಂತೆ. ನಾವು ಬೆಳೆಯುವ ಸ್ಥಳ , ಸ್ನೇಹ , ಸಂಪರ್ಕ , ಸಂಬಂಧಗಳ ಒಡನಾಟ , ಪ್ರೀತಿ ಎಲ್ಲವೂ ಸರಾಗವಾಗಿ ಇರಬೇಕು. ಅದೇನಾದರೂ ಬದಲಾದರೆ ಬದುಕಿನ ದಿಕ್ಕೆ ಅಯ್ಯೋ ಮಾಯವಾಗುತ್ತಾ ಹೋಗುತ್ತದೆ. ಅಂತದ್ದೇ ತಾಯಿ ಇಲ್ಲದ ಮಗ , ತಂದೆ ಪ್ರೀತಿಯಲ್ಲಿ ಬೆಳೆಯುವ ಮಗಳು.
ಇದರ ನಡುವೆ ರೌಡಿಗಳ ಆರ್ಭಟ , ಮುಗ್ಧ ಪ್ರೇಮಿಗಳ ಪರದಾಟ ಹೀಗೆ ಕೊಂಡಿಯಂತೆ ಸಾಗುತ್ತಾ ಪ್ರೀತಿಯ ಕಥಾನಕದ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಜಾಲಿ”. ಯಾರಿಗೂ ಹೆದರದೆ ತನ್ನದೇ ಸ್ಟೈಲಿನಲ್ಲಿ ಜೀವನ ಮಾಡುವ ಹುಡುಗ ಜಾಲಿ (ತಾರುಷ್). ಇನ್ನು ತುಂಟತನದ ಹುಡುಗಿ ಅಪ್ಪನ ಪ್ರೀತಿಯ ಮಗಳು ಜಾನು (ಪದ್ಮಶ್ರೀ ಜೈನ್).
ಇನ್ನು ಪತ್ನಿಯನ್ನ ಕಳೆದುಕೊಂಡ ದಾದಾ (ಕೃಷ್ಣಪ್ಪ ) ತನ್ನ ಗ್ಯಾಂಗನೊಂದಿಗೆ ಆರ್ಭಟಿಸುತ್ತಾ , ಪುತ್ರಿಯನ್ನ ಮುದ್ದಾಗಿ ಬೆಳೆಸುತ್ತಾನೆ. ಮತ್ತೊಂದೆಡೆ ರಾಯಲ್ ಕೃಷ್ಣ (ಶೋಭ ರಾಜ್) ಲ್ಯಾಂಡ್ ಬಿಜಿನೆಸ್ ನಲ್ಲಿ ಹವಾ ಮೇಂಟೈನ್ ಮುಖ್ಯ ಎನ್ನುತ್ತಾ ಮಗನ ಪ್ರೀತಿಗೆ ಬೆಲೆ ಕೊಡದೆ ದೂರ ಉಳಿಯುತ್ತಾನೆ. ಆದರೂ ಮಗನಿಗೆ ಮದುವೆ ಮಾಡುವ ಆಸೆ. ಇನ್ನು ಕಾಲೇಜ್ ನಲ್ಲಿ ತನ್ನ ಗೆಳೆಯರೊಟ್ಟಿಗೆ ಓಡಾಡುವ ಜಾನು ಕಾರ್ ಗ್ಯಾರೇಜ್ ನಲ್ಲಿ ಕೆಲಸ ಮಾಡುವ ಜಾಲಿಯನ್ನ ಪ್ರೀತಿಸುತ್ತಾಳೆ.
ಇವರಿಬ್ಬರ ಸ್ನೇಹ , ಪ್ರೀತಿ ದಾದನಿಗೆ ತಿಳಿದು ಮಗಳಿಂದ ಜಾಲಿಯನ್ನ ದೂರ ಉಳಿಸಲು ನಾನಾ ರೀತಿಯ ಪ್ಲಾನ್ ಮಾಡುತ್ತಾನೆ. ಇದರ ನಡುವೆ ತನ್ನ ಮಗಳಿಗೂ ಹಾಗೂ ರಾಯಲ್ ಕೃಷ್ಣನ ಮಗನಿಗೆ ಮದುವೆ ಮಾಡಿಸಲು ನಿರ್ಧರಿಸುತ್ತಾರೆ. ಹಾಗೆಯೇ ಸೆಟಲ್ಮೆಂಟ್ ಸ್ವಾಮಿ ರೌಡಿಯ ಮೂಲಕ ಜಾಲಿಯನ್ನ ಕೊಲ್ಲಲು ನಿರ್ಧರಿಸುತ್ತಾರೆ. ಮುಂದೆ ಎದುರಾಗುವ ಒಂದಷ್ಟು ಘಟನೆಗಳು ಈ ಎಲ್ಲಾ ಸಂಬಂಧಗಳಿಗೂ ಕೊಂಡಿಯಂತೆ ಬೆಸೆದುಕೊಳ್ಳಲುತ್ತಾ ಹೋಗುತ್ತದೆ. ಅದು ಏನು.. ಹೇಗೆ… ಏಕೆ… ಪ್ರೇಮಿಗಳು ಒಂದಾಗುತ್ತಾರ ಎಂಬ ಉತ್ತರಕ್ಕೆ ಜಾಲಿ ಚಿತ್ರವನ್ನು ನೋಡಬೇಕು.
ಈ ಚಿತ್ರದ ನಿರ್ದೇಶಕ ಸಂಬಂಧ , ಸ್ನೇಹ, ಪ್ರೀತಿ , ಮಾರಣಾಂತಿಕ ಕಾಯಿಲೆ , ರೌಡಿಸಂ ನಡುವೆ ಬದುಕು ಹೇಗೆ ಎಂಬುವುದನ್ನು ಹೇಳಲು ಹೊರಟಿದ್ದಾರೆ. ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಸಾಧಿಸಬೇಕಿದ್ದು , ಮೊದಲ ಪ್ರಯತ್ನದಲ್ಲೇ ಗಮನ ಸೆಳೆಯುವಂತೆ ಸಾರಥ್ಯವಹಿಸಿದ್ದು , ನಟನಾಗಿಯೂ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿ , ಆಕ್ಷನ್ ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅದೇ ರೀತಿ ನಾಯಕಿ ಪದ್ಮಶ್ರೀ ಜೈನ್ ಕೂಡ ಅಚ್ಚುಕಟ್ಟಾಗಿ ಪಾತ್ರವನ್ನು ನಿರ್ವಹಿಸಿದ್ದು , ಹಾಡುಗಳಲ್ಲಿ ಇಬ್ಬರು ಭರ್ಜರಿಯಾಗಿ ಕುಣಿದಿದ್ದಾರೆ.
ನಾಯಕಿಯ ತಂದೆಯ ಪಾತ್ರದಲ್ಲಿ ಕೃಷ್ಣಪ್ಪ ವೇಣುಗೋಪಾಲ್ ಪಾತ್ರಕ್ಕೆ ನ್ಯಾಯವನ್ನು ನೀಡಿ ಗಮನ ಸೆಳೆದಿದ್ದಾರೆ. ಇನ್ನುಳಿದಂತೆ ಶೋಬರಾಜ್ , ರೇಖಾ ದಾಸ್, ಸುಶ್ಮಿತಾ ಜಗ್ಗಪ್ಪ , ಮಹಾಂತೇಶ್ ಹಿರೇಮಠ್ , ಅಭಿ ಸಾಮ್ರಾಟ್ , ಭರತ್ ಶಿವಣ್ಣ ಸೇರಿದಂತೆ ಎಲ್ಲರು ಚಿತ್ರದ ಓಟಕ್ಕೆ ಪೂರಕವಾಗಿ ಕಾಣಿಸಿಕೊಂಡಿದ್ದಾರೆ. ಹಣ ಹೂಡಿರುವ ನಿರ್ಮಾಪಕರ ಸಹವಾಸವನ್ನು ಕೂಡ ಮೆಚ್ಚಬೇಕು. ಸಂಗೀತ ಹಾಗೂ ಛಾಯಾಗ್ರಹಣ ಉತ್ತಮವಾಗಿ ಮೂಡಿ ಬಂದಿದೆ. ಆಕ್ಷನ್ , ಅಪ್ಪ-ಮಗಳ ಎಮೋಷನ್ ಎಲ್ಲವೂ ಉತ್ತಮವಾಗಿದ್ದು , ಈ ಯುವ ಪ್ರತಿಭೆಗಳ ಪ್ರಯತ್ನಕ್ಕೆ ಒಮ್ಮೆ ಚಿತ್ರವನ್ನು ನೋಡಬಹುದು.