Cini NewsSandalwood

ಬೆಂಗಳೂರಿನ IGNITE ಸೂಪರ್ ಕ್ಲಬ್ ಡಿಜೆ ಪಾರ್ಟಿಯಲ್ಲಿ ಸನ್ನಿ ಲಿಯೋನ್

Spread the love

IGNITE ಸೂಪರ್ ಕ್ಲಬ್ ನ ಡಿಜೆ ಪಾರ್ಟಿಯಲ್ಲಿ ಬೆಂಗಳೂರಿಗರನ್ನು ಕುಣಿಸಿದ ಸನ್ನಿ ಲಿಯೋನ್. ಕುಣಿದು, ಕುಣಿಸಿದ ಶೇಷಮ್ಮ…ಬೆಂಗಳೂರಿನ IGNITE ಸೂಪರ್ ಕ್ಲಬ್ ನಲ್ಲಿ ಸನ್ನಿ ಲಿಯೋನ್ ಡಿಜೆ ಪಾರ್ಟಿ ಜೋರು

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನಿ ನಿನ್ನೆ ಸಂಜೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದರು. ಸನ್ನಿ ಲಿಯೋನಿ ಬಂದಿದ್ದು ಯಾವುದೇ ಸಿನಿಮಾ ಶೂಟಿಂಗ್ಗಾಗಿ ಅಲ್ಲ. ಬದಲಿಗೆ ಬೆಂಗಳೂರಿನಲ್ಲಿ ಪಾರ್ಟಿ ಮಾಡಲು.

ಬೆಂಗಳೂರಿನ HSR ಲೇಔಟ್ ನಲ್ಲಿರುವ IGNITE ಸೂಪರ್ ಕ್ಲಬ್ನಲ್ಲಿ ನಡೆದ ಡಿಜೆ ಪಾರ್ಟಿಗೆ ಸನ್ನಿ ಲಿಯೋನ್ ಮುಖ್ಯ ಅತಿಥಿ ಆಗಿದ್ದರು. ನಿನ್ನೆ ಪಾರ್ಟಿ ಬಲು ಅದ್ಧೂರಿಯಾಗಿ ನಡೆದಿದ್ದು, ಪಾರ್ಟಿಯಲ್ಲಿ ಸನ್ನಿ ಲಿಯೋನಿ ಡ್ಯಾನ್ಸ್ ಪ್ರದರ್ಶನ ಸಹ ನೀಡಿದ್ದಾರೆ. ಸನ್ನಿ ಡಿಜೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಬೆಂಗಳೂರು ಹಾಡಿ ಕುಣಿದು ಎಂಜಾಯ್ ಮಾಡಿದರು.

ಬುಕ್ಮೈ ಶೋನಲ್ಲಿ ಈ ಪಾರ್ಟಿಯ ಟಿಕೆಟ್ಗಳನ್ನು ಸಹ ಮಾರಾಟ ಮಾಡಲಾಗಿತ್ತು. ಪಾರ್ಟಿಗೆ ಹೋಗುವ ಮುಂಚೆ ಮಾಧ್ಯಮದವರೊಟ್ಟಿಗೆ ಸನ್ನಿ ಲಿಯೋನಿ ಸಂವಾದ ನಡೆಸಿದರು, ಈ ಸಮಯದಲ್ಲಿ ಬೆಂಗಳೂರಿನ ಬಗ್ಗೆ, ಪಾರ್ಟಿ ಬಗ್ಗೆ ನಟಿ ಮಾತನಾಡಿದರು.

ನನಗೆ ಬೆಂಗಳೂರು ಎಂದರೆ ಇಷ್ಟ. ನಾನು ಇಲ್ಲಿ ಬಂದಿರುವುದು. ಈ ಡಿಜೆ ಪಾರ್ಟಿಯಲ್ಲಿ ಭಾಗವಹಿಸುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದೇನೆ. ಕನ್ನಡದಲ್ಲಿ ಅವಕಾಶಗಳು ಬಂದರೆ ಸಿನಿಮಾ ಮಾಡುತ್ತೇನೆ. ಡಿಜೆ ಪಾರ್ಟಿಯಲ್ಲಿ ಎಲ್ಲರೂ ಎಂಜಾಯ್ ಮಾಡೋಣಾ , ಫನ್ ಮಾಡೋಣಾ ಎಂದು‌ ಸನ್ನಿ ಲಿಯೋನ್ ಹೇಳಿದರು.

Visited 1 times, 1 visit(s) today
error: Content is protected !!