Cini NewsSandalwood

ಆಗಸ್ಟ್ 15 ರಂದು “ಗೌರಿ” ದರ್ಶನ.

ಸ್ವತಂತ್ರ ದಿನಾಚರಣೆಯ ದಿನದಂದು “ಗೌರಿ” ಚಿತ್ರದ ಮೂಲಕ ಸ್ವತಂತ್ರವಾಗಿ ಬೆಳ್ಳಿ ಪರದೆ ಮೇಲೆ ನಾಯಕನಾಗಿ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿಯಾಗಿ ಸಾನ್ಯ ಅಯ್ಯರ್ ರಾರಾಜಿಸಲಿದ್ದಾರೆ. ಈಗಾಗಲೇ ಈ ಚಿತ್ರದ ಪ್ರಚಾರದ ಕಾರ್ಯವನ್ನು ಬಹಳ ಜೋರಾಗಿ ಆರಂಭಿಸಿರುವ ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ತಮ್ಮ ಪುತ್ರ ಸಮರ್ಜಿತ್ ಲಂಕೇಶ್ ನನ್ನ “ಗೌರಿ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಇನ್ನು ಈ ಚಿತ್ರದ ಬಿಡುಗಡೆ ದಿನಾಂಕವನ್ನು ವಿಶೇಷವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ರಾಜಾಜಿನಗರದ ವಿದ್ಯಾವಿಹಾರ (ಎಂ. ಇ .ಎಸ್. ಮ್ಯಾನೇಜ್ಮೆಂಟ್ ) ಕಾಲೇಜಿನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಗಸ್ಟ್ 15 ರಂದು ಚಿತ್ರ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಹೊರಹಾಕಿದರು. ಇನ್ನು ವೇದಿಕೆಯ ಮೇಲೆ ವಿದ್ಯಾರ್ಥಿಗಳಿಂದ ನಾಯಕ ನಾಯಕಿಗೆ ಒಂದಷ್ಟು ಪ್ರಶ್ನೆಗಳ ಸುರಿಮಳೆಗೆ ಉತ್ತರವು ಸಿಕ್ಕಿತು.
ಸಿನಿಮಾ ನೋಡುವ ಉತ್ಸಾಹದಲ್ಲಿರುವ ವಿದ್ಯಾರ್ಥಿಗಳು ಚಿತ್ರವನ್ನ ಮೊದಲ ದಿನವೇ ಚಿತ್ರಮಂದಿರದಲ್ಲಿ ನೋಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದು ವಿಶೇಷವಾಗಿತ್ತು.

ನಂತರ ಇಡೀ ಚಿತ್ರತಂಡ ಮಾಧ್ಯಮ ಮುಂದೆ ಹಾಜರಿದ್ದು ಚಿತ್ರದ ಕುರಿತು ಒಂದಷ್ಟು ಮಾಹಿತಿಯನ್ನು ಹಂಚಿಕೊಂಡರು. ಮೊದಲು ಚಿತ್ರದ ನಿರ್ದೇಶಕ , ನಿರ್ಮಾಪಕ ಇಂದ್ರಜಿತ್ ಲಂಕೇಶ್ ಮಾತನಾಡುತ್ತಾ ನಮ್ಮ “ಗೌರಿ” ಚಿತ್ರತಂಡ ಕರ್ನಾಟಕದಾದ್ಯಂತ ಸಂಚಾರ ಮಾಡುತ್ತಿದೆ. ನಾವು ಹೋದ ಜಾಗದಲ್ಲೆಲ್ಲ ಚಿತ್ರ ಪ್ರೇಮಿಗಳು ಹಾಗೂ ಮಾಧ್ಯಮದವರು ನೀಡುತ್ತಿರುವ ಪ್ರೋತ್ಸಾಹಕ್ಕೆ ಮನ ತುಂಬಿ ಬಂದಿದೆ. ಒಂದೊಂದು ಹಾಡು ಕೂಡ ಬಹಳ ವಿಭಿನ್ನವಾಗಿ ಮೂಡಿ ಬಂದಿದೆ.

ಈಗ ಟ್ರೆಂಡಿಂಗ್ ನಲ್ಲಿ ಕೂಡ ಸದ್ದು ಮಾಡುತ್ತಿದೆ. ನಮ್ಮ “ಗೌರಿ” ಚಿತ್ರ ಅಗಸ್ಟ್ 15 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ವರಮಹಾಲಕ್ಷ್ಮೀ, ಸ್ವತಂತ್ರ ದಿನಾಚರಣೆ, ರಕ್ಷಾ ಬಂಧನ ಹೀಗೆ ಸಾಲುಸಾಲು ರಜೆ ದಿನಗಳು ಬಂದಿದೆ. ಆ ಸಮಯ ಸೂಕ್ತ ಎಂದು ನಾವು ಚಿತ್ರ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದೇವೆ. ನಿಮ್ಮೆಲ್ಲರ ಸಹಕಾರ , ಬೆಂಬಲ ನಮ್ಮ ಚಿತ್ರದ ಮೇಲೆ ಇರಲಿ ಎಂದು ಕೇಳಿಕೊಂಡರು.

ಇನ್ನು ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಮಾತನಾಡುತ್ತಾ ಅಪ್ಪ ಹೇಳಿದ ಹಾಗೆ ಹೋದ ಕಡೆಯಲ್ಲಾ ನಮ್ಮ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ‌. ಬಹಳಷ್ಟು ಅನುಭವಿ , ಹಿರಿಯರ ಜೊತೆ ನಟಿಸಬೇಕಾಗಿತ್ತು , ಹಾಗಾಗಿ ಮೊದಲೇ ಪೂರ್ವ ತಯಾರಿ ಮಾಡಿಕೊಂಡು ಹೋಗಿದ್ದೆ. ಚಿತ್ರೀಕರಣದಲ್ಲಿ ತುಂಬಾ ಕಲಿತಿದ್ದೇನೆ. ನನ್ನ ಹಲವು ವರ್ಷಗಳ ಶ್ರಮಕ್ಕೆ ಉತ್ತರ ಸಿಗುವ ದಿನ ಹತ್ತಿರ ಬಂದಿದೆ.

ನೀವೆಲ್ಲರೂ ಚಿತ್ರಮಂದಿರಕ್ಕೆ ಬಂದು ನಮ್ಮ ಚಿತ್ರವನ್ನು ನೋಡಿ ಹರಸಿ ಎಂದರು. ಹಾಗೆಯೇ ನಾಯಕಿಯಾಗಿ ಅಭಿನಯಿಸಿರುವ ಸಾನ್ಯ ಅಯ್ಯರ್ ಮಾತನಾಡುತ್ತಾ ಆಗಸ್ಟ್ 15, ನನ್ನ ಕನಸು ನನ್ನಸಾಗುವ ದಿನ. ಈ ದಿನಕ್ಕಾಗಿ ಕಾಯುತ್ತಿದೆ‌. ಅವಕಾಶ ನೀಡಿದ ಇಂದ್ರಜಿತ್ ಲಂಕೇಶ್ ಅವರಿಗೆ ಧನ್ಯವಾದ ಎಂದರು. ಈಗಾಗಲೇ ಬಿಡುಗಡೆ ಆಗಿರುವ ಒಂದೊಂದು ಹಾಡು ಬಾರಿ ವೈರಲ್ ಆಗಿದ್ದು ಎಲ್ಲರನ್ನ ಸೆಳೆಯುತ್ತಿದೆ. ಆಗಸ್ಟ್ 15 ಗೌರಿ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

error: Content is protected !!