Cini NewsTollywood

ಡಿ.8ಕ್ಕೆ ‘ಎಕ್ಸ್ಟಾ-ಆರ್ಡಿನರಿ ಮ್ಯಾನ್’ ಸಿನಿಮಾ ರಿಲೀಸ್

ತೆಲುಗು ಚಿತ್ರರಂಗದ ಪ್ರಾಮಿಸಿಂಗ್ ಹೀರೋ‌ ನಿತಿನ್ 32ನೇ ಸಿನಿಮಾ ‘ಎಕ್ಸ್ಟಾ-ಆರ್ಡಿನರಿ ಮ್ಯಾನ್’. ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಗಮನಸೆಳೆದಿರುವ ಈ ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಮೊದಲು ಡಿಸೆಂಬರ್ 23ಕ್ಕೆ ಚಿತ್ರ ತೆರೆಗೆ ತರುವುದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಈಗ ಅಂದುಕೊಂಡ ದಿನಕ್ಕಿಂತ ಮುನ್ನ ಅಂದ್ರೆ ಡಿಸೆಂಬರ್ 8ಕ್ಕೆ ‘ಎಕ್ಸ್ಟಾ-ಆರ್ಡಿನರಿ ಮ್ಯಾನ್’ ಥಿಯೇಟರ್ ಗೆ ಲಗ್ಗೆ ಇಡಲಿದೆ.

ಔಟ್ ಅಂಡ್ ಔಟ್ ಎಂಟರ್ ಟೈನ್ಮೆಂಟ್ ಸಿನಿಮಾವಾಗಿರುವ ‘ಎಕ್ಸ್ಟಾ-ಆರ್ಡಿನರಿ ಮ್ಯಾನ್’ಗೆ ವಕ್ಕಂತಂ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ. ಮೋಸ್ಟ್ ಬ್ಯುಸಿಯೆಸ್ಟ್ ನಟಿ ಶ್ರೀಲೀಲಾ ನಿತಿನ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಮೂಡಿಬಂದಿರುವ ಡೇಂಜರ್ ಪಿಲ್ಲಾ ಹಾಡು ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿವೆ.

ಇನ್ನು, ‘ಎಕ್ಸ್ಟಾ-ಆರ್ಡಿನರಿ ಮ್ಯಾನ್’ಗೆ ಸುಧಾಕರ್ ರೆಡ್ಡಿ ಹಾಗೂ ನಿಖಿತಾ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿರುವ ಚಿತ್ರ, ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಡಿಸೆಂಬರ್ 8ಕ್ಕೆ ರಿಲೀಸ್ ಆಗಲಿದೆ

error: Content is protected !!