Cini NewsSandalwood

“ಧೀರ ಸಾಮ್ರಾಟ್” ಚಿತ್ರದ ಟ್ರೈಲರ್ ರೀಲಿಸ್ ಮಾಡಿದ ನಟ ಪ್ರಜ್ವಲ್ ದೇವರಾಜ್.

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಯುವಪಡೆಗಳ ಬಳಗ “ಧೀರ ಸಾಮ್ರಾಟ್” ಮೂಲಕ ಲಗ್ಗೆ ಇಡಲು ಸಜ್ಜಾಗಿದೆ. ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿಮಾನಿಗಳ ಬಳಗವೇ ಸೇರಿಕೊಂಡು ನಿರ್ಮಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಆಯೋಜನೆಗೊಂಡಿದ್ದು , ತನ್ವಿ ಪ್ರೊಡಕ್ಷನ್ ಹೌಸ್ ಮುಖಾಂತರ ಗುಲ್ಬರ್ಗಾದ ಗುರುಬಂಡಿ ನಿರ್ಮಾಣ ಮಾಡಿರುವು ಈ ಚಿತ್ರದ ಟ್ರೈಲರ್ ಅನ್ನ ಪ್ರಜ್ವಲ್ ದೇವರಾಜ್ ಬಿಡುಗಡೆ ಮಾಡಿ ಇಡೀ ತಂಡ ನನಗೆ ಬಹಳ ಆತ್ಮೀಯರು , ಚಿತ್ರದ ಟ್ರೈಲರ್ ವಿಭಿನ್ನವಾಗಿ ಮೂಡಿ ಬಂದಿದೆ.

ಇಡೀ ತಂಡಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಾಯಕ ರಾಕೇಶ್ ಬಿರದಾರ್, ನಾಯಕಿ ಅದ್ವಿತಿ ಶೆಟ್ಟಿ, ನಾಗೇಂದ್ರ ಅರಸು, ಯತಿರಾಜ್, ರವೀಂದ್ರನಾಥ್, ಇಂಚರ, ಸಂಕಲ್ಪ್ , ಹರೀಶ್ ಅರಸು, ಸಾಹಸ ಸಂಯೋಜಕ ಕೌರವ ವೆಂಕಟೇಶ್, ಸಂಭಾಷಣೆಕಾರ ಸಾಯಿರಾಮ್ ಉಪಸ್ತಿತರಿದ್ದರು.

ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ , ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್ ಕುಮಾರ್ (ಪಚ್ಚಿ) ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುವ ಜತೆಗೆ ಇಷ್ಟಪಡುವಂತಹ ನಕರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾರೆ.

ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ , ಥ್ರಿಲ್ಲರ್ ಕಥೆಯಲ್ಲಿ, ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ’ಸಾವಿಗೆ ಸಾವಿಲ್ಲ’ ಅಂತ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂದಿಸಿದಂತೆ ಸಮಾಜದಲ್ಲಿ ಯಾವುದೋ ಒಂದು ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ. ಶೀರ್ಷಿಕೆ ಅಂದರೆ ಏನು? ಯಾತಕ್ಕೆ ಇಡಲಾಗಿದೆ. ಕೊನೆಯಲ್ಲಿ ಯಾರು ಎಂಬುದು ಕ್ಲೈಮಾಕ್ಸ್ದಲ್ಲಿ ತಿಳಿಯಲಿದೆ.

ತಾರಗಣದಲ್ಲಿ ಶಂಕರಭಟ್, ಶೋಭರಾಜ್, ಬಲರಾಜವಾಡಿ, ರಮೇಶ್ ಭಟ್, ಮನಮೋಹನ್ ರೈ , ರವಿರಾಜ್, ಜ್ಯೋತಿ ಮರೂರು, ಮಂಡ್ಯ ಚಂದ್ರು, ಗಿರಿಗೌಡ, ಪ್ರೇಮ, ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ. ರಾಘವ್ ಸುಭಾಷ್ ಸಂಗೀತ , ವೀರೇಶ್. ಎನ್.ಟಿ.ಎ-ಅರುಣ್ ಸುರೇಶ್ ಛಾಯಾಗ್ರಹಣ , ಸತೀಶ್ಚಂದ್ರಯ್ಯ ಸಂಕಲನ, ಎ.ಆರ್.ಸಾಯಿರಾಮ್, ಸಾಹಸ ಕೌರವವೆಂಕಟೇಶ್, ನೃತ್ಯ ಮುರಳಿ-ಕಿಶೋರ್ -ಸಾಗರ್ ಅವರದಾಗಿದೆ. ಬೆಂಗಳೂರು, ತುಮಕೂರು, ಚಿತ್ರದುರ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಯುಎ ಪ್ರಮಾಣಪತ್ರ ಪಡೆದುಕೊಂಡಿದೆ. ಈಗಾಗಲೇ ಎರಡು ಹಾಡುಗಳು ಬಿಡುಗಡೆಗೊಂಡು ಬಾರಿ ವೈರಲ್ ಆಗಿದ್ದು , ಚಿತ್ರ ಫೆಬ್ರವರಿ 16ರಂದು ರಾಜ್ಯಾದ್ಯಂತ  ತೆರೆಗೆ ಬರಲಿದೆ.

error: Content is protected !!