Cini NewsSandalwood

ಡಾಲಿ-ಸತ್ಯದೇವ್ ನಟನೆಯ “ಝೀಬ್ರಾ” ಶೂಟಿಂಗ್ ಮುಕ್ತಾಯ.

Spread the love

ಡಾಲಿ ಧನಂಜಯ್ ಹಾಗೂ ಸತ್ಯದೇವ್ ಕಾಂಬಿನೇಷನ್ ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಝೀಬ್ರಾ. ಶುರು ಆದಾಗಿನಿಂದಲೂ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ಝೀಬ್ರಾ ಎಂಬ ಮಾಸ್ ಎಂಟರ್‌ಟೇನರ್ ಚಿತ್ರವಾಗಿದ್ದು, ಡಾಲಿ ಜೊತೆ ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರದ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸತ್ಯದೇವ್ ಮತ್ತು ಡಾಲಿ ಇಬ್ಬರೂ ಚಿತ್ರದ ನಾಯಕರಾಗಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇಬ್ಬರದ್ದೂ 26ನೇ ಸಿನಿಮಾ ಎಂಬುದು ವಿಶೇಷ.

ಝೀಬ್ರಾ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಮೂಡಿ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್‌, ಸತ್ಯರಾಜ್‌, ಸುನೀಲ್‌ ವರ್ಮ, ಜೆನಿಫರ್‌ , ಸುರೇಶ್‌ಚಂದ್ರ ಮೆನನ್‌, ಕಲ್ಯಾಣಿ ನಟರಾಜ್‌ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.

ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕತೆ-ಚಿತ್ರಕತೆ ಅವರದ್ದೇ. ಪ್ಯಾನ್ ಇಂಡಿಯಾ ‘ZEBRA’ ಚಿತ್ರಕ್ಕೆ ಕೆಜಿಎಫ್​ ಚಿತ್ರ ಖ್ಯಾತಿಯ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ.

Visited 1 times, 1 visit(s) today
error: Content is protected !!