Bollywood Cinisuddi Fresh Cini News 

ಕನ್ನಡದಲ್ಲಿ ಡಬ್ ಆಗಿರುವ “83” ಚಿತ್ರವನ್ನ ತೆರೆಗೆ ಅರ್ಪಿಸಲಿದ್ದಾರೆ ಕಿಚ್ಚ

ಇಡೀ ಭಾರತೀಯ ಚಿತ್ರ ರಂಗವೇ ಎದುರು ನೋಡುತ್ತಿರುವ ಬಹು ಭಾಷಾ ಫ್ಯಾನ್ ಇಂಡಿಯ ಸಿನಿಮಾ ‘83’ ಭಾರತ ಏಕ ದಿನದ ವಿಶ್ವ ಕಪ್ ಕ್ರಿಕೆಟ್ ತನ್ನ ಮಡಿಲಿಗೆ ಪಡೆದ ವರ್ಷ ಕುರಿತಾದ ಸಿನಿಮಾ ಡಿಸೆಂಬರ್ ತಿಂಗಳ ಕ್ರಿಸ್ಮಸ್ ಬಿಡುಗಡೆ ಆಗಲು ಸಜ್ಜಾಗಿದೆ. ‘83’ ಕನ್ನಡದಲ್ಲಿ ಡಬ್ ಮಾಡಲಾದ ಚಿತ್ರವನ್ನು ಕ್ರಿಕೆಟ್ ಪ್ರೇಮಿ, ನಟ, ನಿರ್ದೇಶಕ, ನಿರ್ಮಾಪಕ ಕಿಚ್ಚ ಸುದೀಪ್ ಅವರು ತೆರೆಗೆ ಅರ್ಪಿಸುತ್ತಿದ್ದಾರೆ ಎಂಬುದು ಈ ಕ್ಷಣದ ಗೌರವಾನ್ವಿತ ವಿಷಯ. ಇಂದರೊಂದಿಗೆ ಕಿಚ್ಚ ಸುದೀಪ್ ರಿಲಯನ್ಸ್ ಎಂಟರ್ಟೈನ್ಮೇಂಟ್ ಜೊತೆ ಸೇರಿ ಬಹು ನಿರೀಕ್ಷಿತ ಸಿನಿಮಾ… Read More
Bollywood Cinisuddi Fresh Cini News 

ಹೃತಿಕ್ ಜೊತೆ ನಟಿಸುವ ಚಾನ್ಸ್ ಗಿಟ್ಟಿಸಿದ ನಭಾ ನಟೇಶ್..!

ಎ. ಹರ್ಷ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ `ವಜ್ರಕಾಯ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು ನಟಿ ನಭಾ ನಟೇಶ್. ಪಟಾಕಾ ಪಾರ್ವತಿ ಪಾತ್ರದಲ್ಲಿ ಬಿಂದಾಸ್ ಆಗಿ ನಟಿಸಿ ತಮ್ಮ ಮೊದಲ ಚಿತ್ರದಲ್ಲೇ ಕಮಾಲ್ ಮಾಡಿದ್ದವರು ನಭಾ. ವಜ್ರಕಾಯ ಚಿತ್ರದ ಗೆಲುವಿನ ನಂತರ `ಲೀ’ ಚಿತ್ರದಲ್ಲಿ ನಾಯಕಿಯಾಗಿ, `ಸಾಹೇಬ’ದಲ್ಲಿ ಅತಿಥಿ ಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದರು. `ನನ್ನು ದೋಚುಕುಂಡುವಟೆ’ ಚಿತ್ರದ ಮೂಲಕ ತೆಲುಗು ಚಿತ್ರಜಗತ್ತಿಗೆ ಎಂಟ್ರಿ ಕೊಟ್ಟಿದ್ದ ನಭಾ ಅಧುಗೋ, ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜ, ಅಲ್ಲುಡು ಅಧುರ್ಸ್ ಸೇರಿದಂತೆ ಒಂದರ ಹಿಂದೊಂದು ತೆಲುಗು… Read More
Bollywood Cinisuddi Fresh Cini News 

ಬಾಲಿವುಡ್ ನಲ್ಲಿ ಒಂದು ದಶಕವನ್ನು ಪೂರೈಸಿದ ರಣವೀರ್‌ ಸಿಂಗ್‌

ಭಾರತೀಯ ಸಿನಿಮಾ ರಂಗದಲ್ಲಿ ರಣವೀರ್‌ ಸಿಂಗ್‌ ಮಹತ್ವದ ನಟನಾಗಿದ್ದಾರೆ ಮತ್ತು ಯುವ ಸಮೂಹದ ಸೂಪರ್‌ಸ್ಟಾರ್‌ ಆಗಿದ್ದಾರೆ. ಪದ್ಮಾವತ್‌ ಸಿನಿಮಾ ಮೂಲಕ 300 ಕೋಟಿ ರೂ. ಗಳಿಕೆ ಮಾಡಿದ ಮೊದಲ ಯುವ ನಟ ಇವರು. ಅವರು ಉತ್ಸಾಹ ಮತ್ತು ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುತ್ತಾರೆ. ಅತ್ಯಂತ ಯಶಸ್ವಿ, ಸ್ವಯಂ ರೂಪುಗೊಂಡ ರೋಲ್‌ ಮಾಡೆಲ್‌ ಆಗಿ ಅವರು ತಮ್ಮ ಸ್ಟೇಟಸ್ ಅನ್ನು ಸಾಬೀತುಪಡಿಸಿದ್ದಾರೆ. ಭಾರತೀಯ ಸಿನಿಮಾ ವಲಯದ ಹೊರಗಿನಿಂದ ಬಂದು ಅವರು ಈ ಸ್ಥಾನಮಾನವನ್ನು ಅಲಂಕರಿಸಿದ್ದಾರೆ. ಡಿಸೆಂಬರ್‌ 10 ರಂದು, ಸಿನಿಮಾದಲ್ಲಿ ಒಂದು ದಶಕವನ್ನು ಪೂರೈಸಿದ್ದಾರೆ. ಇವರು ಮೊದಲು ಅಭಿನಯಿಸಿದ… Read More
Bollywood Cinisuddi Fresh Cini News 

100 ಕೋಟಿ ಅಪಾರ್ಟ್‍ಮೆಂಟ್ ಖರೀದಿಸಿದ ಹೃತಿಕ್

ಬಹುತೇಕ ನಟ, ನಟಿಯರಿಗೆ ಐಷಾರಾಮಿ ಅಪಾರ್ಟ್‍ಮೆಂಟ್ ಖರೀದಿಸಬೇಕು, ದುಬಾರಿ ಕಾರುಗಳನ್ನು ಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಬಹುತೇಕ ಸ್ಟಾರ್ ಕಲಾವಿದರು ಇದಕ್ಕಾಗಿ ತಮ್ಮ ವರಮಾನದ ಸಾಕಷ್ಟು ಹಣವನ್ನು ವ್ಯಯಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಬಾಲಿವುಡ್ ನಟ ಹಾಗೂ ಉದ್ಯಮಿ ಹೃತಿಕ್ ರೋಷನ್ ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ 100 ಕೋಟಿ ಮೊತ್ತದ ಮೂವರು ಫ್ಲಾಟ್ ಗಳನ್ನು ಖರೀದಿಸುವ ಮೂಲಕ ಎಲ್ಲರ ಚಿತ್ತ ಕೆರಳಿಸಿದ್ದಾರೆ. ಎಚ್‍ಆರ್‍ಎಕ್ಸ್ ಹೆಸರಿನ ಫ್ಯಾಷನ್ ಬ್ರ್ಯಾಂಡ್ ಮಾಲೀಕರೂ ಆಗಿರುವ ನಟ ಹೃತಿಕ್‍ರೋಷನ್ ಫ್ಯಾಷನ್ ಲೋಕದಲ್ಲಿ ತಮ್ಮ ಬ್ರ್ಯಾಂಡ್‍ಗೆ… Read More
Bollywood Cinisuddi Fresh Cini News 

ಬಾಲಿವುಡ್ ಹಿರಿಯ ನಟ ವಿಶಾಲ್ ಆನಂದ್ ವಿಧಿವಶ

ಮುಂಬೈ: ಬಾಲಿವುಡ್ ನ ಹಿರಿಯ ನಟ ವಿಶಾಲ್ ಆನಂದ್(82) ಅವರು ನಿಧನರಾಗಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ನಿಧನರಾಗಿದ್ದಾರೆ ಎಂದು ಅವರು ಕುಟುಂಬಸ್ಥರು ತಿಳಿಸಿದ್ದಾರೆ. ವಿಶಾಲ್ ಅವರು 1976ರಲ್ಲಿ ತೆರೆಕಂಡಿದ್ದ ಹಿಟ್ ಸಿನಿಮಾ ಚಲ್ತೆ, ಚಲ್ತೆ ಮೂಲಕ ಪ್ರಸಿದ್ಧರಾಗಿದ್ದರು. ಇವರ ಮೂಲ ಹೆಸರು ಭಿಶಂ ಕೊಹ್ಲಿ ಎಂಬುದಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಸುಮಾರು 11 ಚಿತ್ರಗಳಲ್ಲಿ ವಿಶಾಲ್ ನಟಿಸಿದ್ದರು. ಅಲ್ಲದೆ ಕೆಲವು ಚಿತ್ರಗಳ ನಿರ್ದೇಶನ ಹಾಗೂ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು. ಟ್ಯಾಕ್ಸಿ ಡ್ರೈವರ್, ಇಂತೆಜಾರ್, ದಿಲ್ ಸೆ ಮೈಲ್ ದಿಲ್ ಮುಂತಾದ… Read More
Bollywood Cinisuddi Fresh Cini News 

ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್ ಸರೋಜ್ ಖಾನ್ ಇನ್ನಿಲ್ಲ ..!

ಮುಂಬೈ: ಬಾಲಿವುಡ್‍ನ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ (71) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಸರೋಜ್ ಖಾನ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮುಂಬೈನ ಬಾಂದ್ರಾದಲ್ಲಿರುವ ಗುರು ನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ಸರೋಜ್ ಖಾನ್ ನಿಧನರಾಗಿದ್ದಾರೆ. 1974ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ ‘ನಾಮ್’ ಮೂಲಕ ನೃತ್ಯ ಸಂಯೋಜಕಿಯಾಗಿ ಬೆಳಕಿಗೆ ಬಂದ ಸರೋಜ್ ಖಾನ್, ಬಾಲಿವುಡ್‌ನ ಅನೇಕ ಹಿಟ್ ಚಿತ್ರಗಳಲ್ಲಿ ನೃತ್ಯ ಸಂಯೋಜಕಿಯಾಗಿ ಗುರುತಿಸಿಕೊಂಡಿದ್ದರು. ನಂತರ ಸುಮಾರು 2 ಸಾವಿರಕ್ಕೂ ಅಧಿಕ ಹಾಡುಗಳಿಗೆ… Read More
Bollywood Cini Gossips Cinisuddi Fresh Cini News 

ಹೋಂ ಕ್ವಾರಂಟೈನ್ ನಲ್ಲಿ ಬಾಲಿವುಡ್ ನಟ ಆಮಿರ್ ಖಾನ್

ಬಾಲಿವುಡ್ ನಟ ಕಂ ನಿರ್ದೇಶಕ ಅಮೀರ್ ಖಾನ್ ಅವರ ಮನೆಗೂ ಈಗ ಕೊರೋನಾ ವೈರಸ್ ದಾಳಿ ಇಟ್ಟಿದೆ. ಅಮೀರ್ ಖಾನ್ ಅವರ ಮನೆಯಲ್ಲಿ ಕೆಲಸ ಮಾಡುವ ಕೆಲವರಿಗೆ ಈಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ನಟ ಅಮೀರ್ ಖಾನ್ ಅವರು ಹೋಂ ಕ್ವಾರಂಟೈನ್ ಆಗಿದ್ದಾರೆ. ಸ್ವತ: ಅಮೀರ್ ಖಾನ್ ಅವರೇ ಈ ಬಗ್ಗೆ ಟ್ವಿಟ್ ಮಾಡಿದ್ದು, ನಮ್ಮ ಕುಟುಂಬದ ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿಸಿದ್ದು, ನಮ್ಮಲ್ಲಿ ಯಾರಿಗೂ ಕೊರೋನಾ ಬಂದಿಲ್ಲ ಎಂದು ತಿಳಿಸಿದ್ದಾರೆ. ಈಗ ಅಮೀರ್ ಖಾನ್ ಅವರು ತಮ್ಮ… Read More
Bollywood Cinisuddi Fresh Cini News 

ಕರಣ್ ಜೋಹರ್‌ಗೆ ಕೊರೊನಾ ಕಾಟ..!

ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಬಳಿ ಕೆಲಸ ಮಾಡುವ ಇಬ್ಬರು ನೌಕರರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಹೀಗಾಗಿ ಕರಣ್ ಜೋಹರ್ ಸ್ವಯಂ ಪರೀಕ್ಷೆಗೊಳಗಾಗಿದ್ದಾರೆ. ಕರಣ್ ಮನೆಯಲ್ಲಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತರಾಗಿ ಪರೀಕ್ಷೆಗೊಳಗಾಗಿರುವ ಕರಣ್ ತಮಗೆ ಕೊರೋನಾ ನೆಗೆಟಿವ್ ಬಂದಿರುವುದಾಗಿ ತಿಳಿಸಿದ್ದಾರೆ. ಹಾಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಕರಣ್ ಕುಟುಂಬಸ್ಥರೆಲ್ಲರೂ ಸ್ವಯಂ ಪರೀಕ್ಷೆ ಮಾಡಿಸಿಕೊಂಡಿದ್ದಲ್ಲದೆ, ಮುಂದಿನ 14 ದಿನಗಳವರೆಗೆ ಕ್ವಾರಂಟೈನ್ ನಲ್ಲಿ ಕಳೆಯಲಿದ್ದಾರೆ. Read More
Bollywood Cinisuddi Fresh Cini News 

ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಆಪ್ತರಕ್ಷಕನಾದ ಖಳನಟ ಸೋನು ಸೂದ್..!

ಕೊರೋನಾ ಲಾಕ್ಡೌನ್‍ನಿಂದಾಗಿ ಕಳೆದ 2 ತಿಂಗಳಿಂದ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರವರ ಊರುಗಳಿಗೆ ತೆರಳಲು ಬಾಲಿವುಡ್ ನಟ ಸೋನು ಸೂದ್ ಅವರು ಬಸ್‍ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸೋನುಸೂದ್ ಕನ್ನಡದಲ್ಲಿ ವಿಷ್ಣುವರ್ಧನ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ನೂರಾರು ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದುಕೊಂಡಿದ್ದರು. ಅಲ್ಲದೆ ತಾವೇ ಒಟ್ಟು ಹತ್ತು ಖಾಸಗಿ ಬಸ್ಸುಗಳನ್ನು ಬುಕ್… Read More
Bollywood Cinisuddi Fresh Cini News 

ಖ್ಯಾತ ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಇನ್ನಿಲ್ಲ..!

ಖ್ಯಾತ ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ವಿಧಿವಶರಾಗಿದ್ದಾರೆ. 54 ವರ್ಷದ ಇರ್ಫಾನ್‌ ಖಾನ್ ಅವರ‌ ಆರೋಗ್ಯ ಏರುಪೇರಾದ ಹಿನ್ನಲೆಯಲ್ಲಿ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು ಖಾನ್ ಅಗಲಿದ್ದಾರೆ. ಬಾಲಿವುಡ್, ಬ್ರಿಟಿಷ್ ಮತ್ತು ಅಮೆರಿಕನ್ ಸಿನಿಮಾಗಳಲ್ಲಿ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದ ಇರ್ಫಾನ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. 2018ರಲ್ಲಿ ನ್ಯೂರೋ ಎಂಡೊಕ್ರೊನಿಕ್ ಕ್ಯಾನ್ಸರ್‍ನಿಂದಾಗಿ ಇಂಗ್ಲೆಂಡ್‍ಗೆ… Read More