ನೆಲಮಂಗಲದಲ್ಲಿ “ಬೀಟ್ ಪೊಲೀಸ್” ಚಿತ್ರಕ್ಕೆ ಚಾಲನೆ.
ಆರ್ಯ ಫಿಲಂಸ್ ಲಾಂಛನದಲ್ಲಿ ಆರ್.ಲಕ್ಷ್ಮಿ ನಾರಾಯಣಗೌಡ್ರು ನಿರ್ಮಿಸುತ್ತಿರುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರ ನಿರ್ದೇಶನದ ಚಿತ್ರ ‘ಬೀಟ್ ಪೊಲೀಸ್’. ನೆಲಮಂಗಲ ಪೊಲೀಸ್ ಠಾಣೆಯ ಬಳಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದು, ಭೀಮ ಚಿತ್ರದ ಜನಪ್ರಿಯ ನಟಿ ಪ್ರಿಯಾ ಅವರು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ, ನಟ ಡ್ರ‍್ಯಾಗನ್ ಮಂಜು ಕೂಡ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ,
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಆರ್. ಲಕ್ಷ್ಮಿನಾರಾಯಣ ಗೌಡ್ರು, ನಮ್ಮ ಆರ್ಯ ಫಿಲಂಸ್‌ನ 4ನೇ ಚಿತ್ರವಿದು, ನೈಜ ಘಟನೆಯ ಸುತ್ತ ನಡೆವ ಕಥಾಹಂದರ ಚಿತ್ರದಲ್ಲಿದ್ದು, ಪ್ರಿಯಾ, ಡ್ರ‍್ಯಾಗನ್ ಮಂಜು, ಸುಚೇಂದ್ರ ಪ್ರಸಾದ್, ಪಾಪ ಪಾಂಡು ಚಿದಾನಂದ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿದ್ದಾರೆ, 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, 4 ಹಾಡು 4 ಫೈಟ್ಸ್ ನಮ್ಮ ಚಿತ್ರದಲ್ಲಿದೆ, ಈಗಿನ ಕಾಲದ ಎಜುಕೇಶನ್ ಬಗ್ಗೆ ಒಂದು ಗಟ್ಟಿ ಕಥೆಯನ್ನ ಈ ಚಿತ್ರದ ಮೂಲಕ ಹೇಳಲಾಗುತ್ತಿದ್ದು, ಜನರಿಗೆ ಎಚ್ಚರಿಕೆ ಕೊಡುವ ಪ್ರಯತ್ನ ಮಾಡಿದ್ದೇವೆ. ಸಮಾಜದಲ್ಲಿ ನಾವು ಹೇಗೆ ಎಚ್ಚರಿಕೆಯಿಂದ ಇರಬೇಕು, ಅಂತ ಹೇಳೋ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
ನಂತರ ನಾಯಕನಟ ಕೌರವ ವೆಂಕಟೇಶ್ ಮಾತನಾಡುತ್ತ ನಾನು ಗೂರ್ಖಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಈ ಚಿತ್ರದ ಕಥೆ ನಿರ್ಮಾಪಕರದೇ, ಅದಕ್ಕೆ ಚಿತ್ರರೂಪ ಕೊಟ್ಟಿದ್ದೇವೆ, ನಿರ್ಮಾಪಕರೂ ಸಹ ಖಳನಾಯನಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ, ಮುಂಜಾನೆ ಮಂಜು ಅವರ ಛಾಯಾಗ್ರಹಣ, ರಾಜೇಶ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ, ನಮ್ ಋಷಿ ಅವರು ಚಿತ್ರದ 4/ಹಾಡುಗಳನ್ನು ಬರೆದಿದ್ದಾರೆ ಎಂದರು.
ನಿರ್ದೇಶಕ ಕಪಿಲ್ ಮಾತನಾಡುತ್ತ ಬೀಟ್ ಪೋಲೀಸ್ ನೈಜ ಘಟನೆಗಳ ಸುತ್ತ ನಡೆಯುವ ಕಥೆ. ಈಗಿನ ಎಜುಲೇಶನ್ ಸ್ಕ್ಯಾಮ್ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ. ಪ್ರತಿಭಾವಂತ ವಿದ್ಯಾರ್ಥಿಗಳಗೆ ಹೇಗೆ ವಂಚನೆಯಾಗುತ್ತಿದೆ, ಅದರ ಪರಿಣಾಮಗಳೇನು ಎಂಬುದು ನಮ್ಮ ಚಿತ್ರದ ಕಥಾವಸ್ತು. ಇಂದಿನಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿ, 25 ದಿನದಲ್ಲಿ ಶೂಟಿಂಗ್ ಮುಗಿಸುತ್ತೇವೆ ಎಂದರು.
ನಂತರ ನಟ ಡ್ರಾಗನ್ ಮಂಜು ಮಾತನಾಡಿ ಇದು ನನ್ನ ಹತ್ತನೇ ಚಿತ್ರ, ಎಂದಿನಂತೆ ಖಳನ ಪಾತ್ರವಾದರೂ, ಒಂದು ಹಂತದಲ್ಲಿ ಆತ ಚೇಂಜ್ ಆಗಬಹುದು ಎಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ, ನಾಯಕಿ ಪ್ರಿಯಾ ಮಾತನಾಡುತ್ತ ಚಿತ್ರದಲ್ಲಿ ನನ್ನದು ಭಾರ್ಗವಿ ಎಂಬ ಡಿಸಿಪಿ ಪಾತ್ರ, ನಿರ್ಮಾಪಕರು ಈ ಹಿಂದೆಯೇ ನನಗೆ ಕೇಳಿದ್ದರು ಆಗಿರಲಿಲ್ಲ. ಅಲ್ಲದೆ ಈ ಹಿಂದೆ ಕೌರವ ವೆಂಕಟೇಶ್ ಅವರ ಜತೆ ಕೆಲಸ ಮಾಡಿದ್ದೆ ಎಂದು ಹೇಳಿದರು.
ಇಂದಿನ ಎಜುಕೇಶನ್ ವ್ಯವಸ್ಥೆಯ ಸಾಧಕ ಬಾಧಕಗಳ ಬಗ್ಗೆ ಹೆಣೆಯಲಾಗಿರುವ ವಿಭಿನ್ನ ಕಥಾವಸ್ತು ಚಿತ್ರದಲ್ಲಿದೆ. ದಶಕದ ಹಿಂದೆ ಕೋಲಾರ ಎಂಬ ಚಿತ್ರ ನಿರ್ಮಿಸಿದ್ದ ಆರ್. ಲಕ್ಷ್ಮೀ ನಾರಾಯಣಗೌಡ್ರು ಈ ಚಿತ್ರದ ನಿರ್ಮಾಪಕರು. ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ನಾಯಕರಾಗಿ ನಟಿಸುತ್ತಿರೋ ಈ ಚಿತ್ರದಲ್ಲಿ ಭೀಮ ಖ್ಯಾತಿಯ ನಟಿ ಪ್ರಿಯಾ ಅವರು ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ನಟ ಶೋಭರಾಜ್ ಅವರೂ ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.