ಸೆನ್ಸರ್ ನಿಂದ ಯು/ ಎ ಸರ್ಟಿಫಿಕೇಟ್ ಪಡೆದ “ಆಸ್ಟಿನ್ ನ ಮಹನ್ಮೌನ” ಚಿತ್ರ ಸೆಪ್ಟೆಂಬರ್ 05ರಂದು ಬಿಡುಗಡೆ.
ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲಾಗಿ ಚಿತ್ರಗಳು ಬಿಡುಗಡೆ ಗೊಂಡು ಪ್ರೇಕ್ಷಕರ ಮನಸ್ಸನ್ನ ಗೆಲ್ಲುತ್ತಿದೆ. ಆ ನಿಟ್ಟಿನಲ್ಲಿ ಇದೇ ಸೆಪ್ಟೆಂಬರ್ 05ರಂದು ಲವ್, ಥ್ರಿಲ್ಲಿಂಗ್ ಹಾಗೂ ಭಾವನಾತ್ಮಕ ಕಥೆಯನ್ನು ಒಳಗೊಂಡಿರುವಂತಹ ಯುವ ಪಡೆಗಳ ವಿಭಿನ್ನ ಪ್ರಯತ್ನದ “ಆಸ್ಟಿನ್ ನ ಮಹನ್ಮೌನ” ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಯ ಮೇಲೆ ರಾರಾಜಿಸಲಿದೆ. ಈ ಚಿತ್ರ ಸೆನ್ಸರ್ ಮಂಡಳಿಯಿಂದ ಯು/ಎ ಪತ್ರವನ್ನು ಪಡೆದುಕೊಂಡಿದೆ. ಈ ಒಂದು ಚಿತ್ರ ಯುವ ಪ್ರತಿಭೆಗಳ ಬಳಗ ಸೇರಿಕೊಂಡು ಸಿದ್ಧಪಡಿಸಿದ್ದು, ಈ ಚಿತ್ರವನ್ನು ಮೂಲತಃ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದ ವಿನಯ್ ಕುಮಾರ್ ವೈದ್ಯನಾಥನ್ ನಟಿಸಿ , ನಿರ್ದೇಶನ ಮಾಡಿದ್ದಾರೆ. ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದು , ಬಹಳಷ್ಟು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದು , ನಂತರ ಕಿರು ಚಿತ್ರಗಳನ್ನ ನಿರ್ದೇಶಿಸಿ ತನ್ನ 13 ವರ್ಷದ ನಿರಂತರ ಶ್ರಮದ ಫಲವಾಗಿ ಈಗ ತಮ್ಮ AVV ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ಚಿತ್ರವನ್ನ ನಿರ್ಮಿಸುವ ಮೂಲಕ ನಿರ್ದೇಶನವನ್ನ ನಿಭಾಯಿಸಿದ್ದಾರೆ ಯುವ ಪ್ರತಿಭೆ ವಿನಯ್ ಕುಮಾರ್ ವೈದ್ಯನಾಥನ್.
ಈ ಚಿತ್ರದ ಶೀರ್ಷಿಕೆಯೇ ಬಹಳ ವಿಭಿನ್ನವಾಗಿದ್ದು , ಸಿನಿಮಾ ಕಥೆ ಹೇಗೆ ಇರ್ಬೋದು ಎಂಬ ಪ್ರಶ್ನೆ ಕಾಡುತ್ತದೆ. ಈ ಚಿತ್ರದಲ್ಲಿ ಯಾವುದೇ ಜಾತಿ , ಧರ್ಮದ ಕಥೆ ಒಳಗೊಂಡಿಲ್ಲ , ಇದೊಂದು ಪ್ಯೂರ್ ಎಮೋಷನಲ್ , ಲವ್ , ಥ್ರಿಲ್ಲಿಂಗ್ ಕಥೆಯನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಇರುವ ಎಲ್ಲಾ ಪಾತ್ರಗಳು ಕ್ರಿಶ್ಚಿಯನ್ ಧರ್ಮದಾಗಿದ್ದು , 90ರ ಕಾಲಘಟ್ಟದಲ್ಲಿ ನಡೆಯುವ ಕಡಲ ಭಾಗದ ಒಂದು ಕುಟುಂಬದ ಕಥಾನಕವನ್ನು ಒಳಗೊಂಡಿದೆಯಂತೆ. ಸುಮಾರು 23 ದಿನಗಳ ಕಾಲ ಮೈಸೂರು , ಹೊನ್ನಾವರ ಹಾಗೂ ಚಿಕ್ಕಮಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದಾರಂತೆ.
ಇದೊಂದು ಕಂಟೆಂಟ್ ಒರಿಯೆಂಟೆಡ್ ಚಿತ್ರವಾಗಿದ್ದು , ನಾಯಕನಾಗಿ ವಿನಯ್ ಕುಮಾರ್ ವೈದ್ಯನಾಥನ್ ಅಭಿನಯಿಸಿದ್ದು , ನಾಯಕಿರಾಗಿ ರಿಷಾ ಗೌಡ , ಪ್ರಕೃತಿ ಪ್ರಸಾದ್ ಕಾಣಿಸಿಕೊಂಡಿದ್ದು , ಉಳಿದಂತೆ ಬಾಲರಾಜ್ವಾಡಿ , ರಘು ರಾಮನಕೊಪ್ಪ , ಜಗಪ್ಪ , ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ರಾಜಕಾಂತ್ ಛಾಯಾಗ್ರಹಣ , ಶ್ರೀನಿವಾಸ್ ಹಾಗೂ ಶಶಿಧರ್ ಸಂಕಲನ , ವಿಶ್ವಿ ಸಂಗೀತ ನಿರ್ದೇಶನವಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದ್ದು , ಪೂರ್ವ ತಯಾರಿಯನ್ನ ಮಾಡಿಕೊಂಡು ಅದ್ದೂರಿಯಾಗಿ ಸೆಪ್ಟೆಂಬರ್ 05ರಂದು ರಾಜ್ಯದ್ಯಂತ ಬಿಡುಗಡೆಗೊಳ್ಳಲು ಸಕಲ ಸಿದ್ಧತೆಯಗಳನ್ನ ಚಿತ್ರತಂಡ ಮಾಡಿಕೊಂಡಿದೆ.