Cini NewsSandalwood

ಆಗಸ್ಟ್ 29ಕ್ಕೆ ನಟ ವಿನಯ್ ರಾಜ್ ಕುಮಾರ್ ಅಭಿನಯದ “ಅಂದೊಂದಿತ್ತು ಕಾಲ” ಚಿತ್ರ ರೀಲಿಸ್.

ಚಂದನವನದಲ್ಲಿ ಸಿನಿಮಾಗಳ ರಂಗು ಕಳೆಕಟ್ಟಿದೆ . ಇತ್ತೀಚೆಗೆ ಬಿಡುಗಡೆಯಾದಂತಹ ಬಹುತೇಕ ಚಿತ್ರಗಳು ಪ್ರೇಕ್ಷಕರ ಮನಸನ್ನ ಗೆದ್ದು ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಕಂಟೆಂಟ್ ಇರುವ ಚಿತ್ರಗಳು ಪ್ರೇಕ್ಷಕರು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಈಗ ಮತ್ತೊಂದು ಸ್ಟ್ರಾಂಗ್ ಕಂಟೆಂಟ್ ಇರುವ 90ರ ಕಾಲಘಟ್ಟದ ಮನಸೆಳೆಯುವ ಪ್ರೇಮಕಥೆ “ಅಂದೊಂದಿತ್ತು ಕಾಲ” ಚಿತ್ರ ತೆರೆಯ ಮೇಲೆ ಬರಲು ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದು , ಇದೆ ಆಗಸ್ಟ್ 29ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಭುವನ್ ಸಿನಿಮಾಸ್ ಮೂಲಕ ಭುವನ್ ಸುರೇಶ್ ನಿರ್ಮಾಣದ ಈ ಚಿತ್ರಕ್ಕೆ ಕಥೆ , ಚಿತ್ರಕಥೆ ಬರೆದು ನಿರ್ದೇಶಕ ಮಾಡಿದ್ದಾರೆ ಯುವ ಸಾರಥಿ ಕೀರ್ತಿ ಕೃಷ್ಣ.

ಈಗಾಗಲೇ ಬಿಡುಗಡೆಯಾಗಿರುವ ಪ್ರತಿಗೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು , ರಾಘವೇಂದ್ರ. ವಿ ರವರ ಸಂಗೀತದ ಸುಧೆಯಲ್ಲಿ ಹೊಂದಿರುವಂತಹ ಅದ್ಭುತ ಹಾಡುಗಳು ಸಿನಿಪ್ರಿಯ ಮನಸ್ಸನ್ನು ಸೆಳೆದಿದೆ. ಅದರಲ್ಲೂ ವಿಶೇಷವಾಗಿ ಧನಂಜಯ್ ರಂಜನ್ ಸಾಹಿತ್ಯದಲ್ಲಿ ಮೂಡಿಬಂದಿರುವ ಮನಮುಟ್ಟುವ ಪದಗಳ ಸಾಲಗಳನ್ನು ಗಾಯಕ ಸಿದ್ಧ ಶ್ರೀರಾಮ್ ದ್ವನಿಯಲ್ಲಿ ಬಂದಂತಹ ‘ ಮುಂಗಾರು ಮಳೆಯಲ್ಲಿ… ತಂದಲೇ ನೀನಿಲ್ಲಿ… ಪ್ರೀತಿಯ ಮುನ್ಸೂಚನೆ…’ ಹಾಡು ಕೇಳುಗರ ಮನವನ್ನು ಗೆದ್ದಿದೆ.

ಈ ಹಾಡು ಚಿತ್ರ ಪ್ರೇಮಿಗಳನ್ನು ಸಿನಿಮಾ ಮಂದಿರಕ್ಕೆ ಕರೆತರುವ ಮೊದಲ ಆಮಂತ್ರಣವಾಗಿ ಭರ್ಜರಿ ಸದ್ದನ್ನ ಮಾಡುತ್ತಿದೆ. ಅದೇ ರೀತಿ ಚಿತ್ರದ ಟೀಸರ್ ಹಾಗೂ ಟ್ರೇಲರ್ ಕೂಡ ಬಹಳಷ್ಟು ನಿರೀಕ್ಷೆಯನ್ನ ಹುಟ್ಟುಹಾಕಿದ್ದು ಚಿತ್ರವನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ಈ ‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ನಟ ವಿನಯ್‍ ರಾಜ್‍ಕುಮಾರ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದರಂತೆ, ಈ ಚಿತ್ರ ವಿನಯ್ ಸಿನಿ ಪಯಣದ ವಿಭಿನ್ನ ಚಿತ್ರವಾಗಿ ಹೊರಬರಲಿಯಂತೆ. ಇದೊಬ್ಬ ನಿರ್ದೇಶಕನ ಜೀವನದ ಕಥೆ. ನಮ್ಮ ಚಿತ್ರದ ನಿರ್ದೇಶಕ ಕೀರ್ತಿ ಅವರು ಜೀವನದಲ್ಲಿ ಅನುಭವಿಸಿದ ಘಟನೆಗಳು, ಅವರ ಸ್ನೇಹಿತರ ಅನುಭವಗಳನ್ನು ಸೇರಿಸಿ ಒಂದೊಳ್ಳೆಯ ಕಥೆ ಹೇಳಿದ್ದಾರೆ. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

ಅದೇ ರೀತಿ ನಟಿ ಅದಿತಿ ಪ್ರಭುದೇವ ಕೂಡ ಚಿತ್ರದ ಟೈಟಲ್ಲಿ ಬಹಳ ಸೊಗಸಾಗಿದೆ. ನಿರ್ದೇಶಕ ಕೀರ್ತಿ ಮತ್ತು ನಿರ್ಮಾಪಕ ಸುರೇಶ್‍ ನನಗೆ ಸುಂದರವಾದ ಪಾತ್ರವನ್ನು ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನನಗೆ ಕಣ್ಣಲ್ಲೇ ಮಾತಾಡುವ ಪಾತ್ರವಿದೆ. ವಿನಯ್‍ ಅವರ ಜೊತೆಗೆ ಬಹಳ ಖುಷಿಯಿಂದ ಕೆಲಸ ಮಾಡಿದ್ದೇನೆ. ಸಂಗೀತ ನಿರ್ದೇಶಕ ರಾಘವೇಂದ್ರ ಬಹಳ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಖಂಡಿತವಾಗಿ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ನೋಡಿ ಎಂದಿದ್ದಾರೆ. ಅದೇ ರೀತಿ ಕಿರುತೆರೆ ಖ್ಯಾತಿಯ ನಟಿ ನಿಶಾ ರವಿಕೃಷ್ಣನ್ ಕೂಡ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಹಾಗೂ ಪ್ರಮುಖ ಅತಿಥಿ ಪಾತ್ರ ಒಂದರಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿನಯಿಸಿರುವುದು ವಿಶೇಷ. ಈ ಚಿತ್ರದಲ್ಲಿ ಅರುಣಾ ಬಾಲರಾಜ್ , ಜಗಪ್ಪ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರಂತೆ.

ಒಂದು ಸುಂದರ ಪ್ರೇಮಯ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ ಭುವನ್ ಸಿನಿಮಾಸ್ ನಿರ್ಮಾಪಕ ಭುವನ್ ಸುರೇಶ್. ಇದಕ್ಕೆ ಪೂರಕವಾಗಿ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಕೀರ್ತಿ ಕೃಷ ಒಂದಷ್ಟು ನೈಜ ಘಟನೆಗಳ ಸುತ್ತ ಮನೋರಂಜನೆಯ ಅಂಶಗಳೊಂದಿಗೆ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ.

ಈ ಚಿತ್ರವು ಸುಂದರವಾಗಿ ಮೂಡಿ ಬರಲು ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣ ಮಾಡಿದ್ದು , ಅಷ್ಟೇ ಅದ್ಭುತವಾಗಿ ತಮ್ಮ ಕ್ಯಾಮೆರಾ ಕೈಚಳಕದ ಮೂಲಕ ಅಭಿಷೇಕ್‍ ಕಾಸರಗೋಡು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆಯಂತೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ವಿ. ರಾಘವೇಂದ್ರ ಸಂಗೀತ ನೀಡಿದ್ದಾರೆ. ಎ ಆರ್ ಕೃಷ್ಣ , ಸುರೇಶ್ ಆರ್ಮುಗಂ ಸಂಕಲನ ಮಾಡಿದ್ದು , ರವಿವರ್ಮ ಸಾಹಸ , ರಘು ಆರ್ ಜೆ ನೃತ್ಯ ನಿರ್ದೇಶನ , ಸಿನಿಮಾ ಪ್ರಚಾರಕರ್ತ ಸುಮಂತ್ , ಕ್ರಿಯೇಟಿವ್ ನಿರ್ಮಾಪಕರಾಗಿ ಶಿವು ಗೌಡ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಲೊಕೇಶ್ ಎನ್ ಚಿತ್ರದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಚಿತ್ರ ಮೂಡಿ ಬಂದಿದ್ದು , ಈಗಾಗಲೇ ಅದ್ದೂರಿ ಪ್ರಚಾರದ ಮೂಲಕ ಎಲ್ಲರ ಗಮನವನ್ನು ಸೆಳೆದಿರುವ ಈ ಚಿತ್ರ ಅದ್ದೂರಿಯಾಗಿ ಬೆಳ್ಳಿ ಪರದೆಯ ಮೇಲೆ ಇದೆ ಆಗಸ್ಟ್ 29ರಂದು ರಾರಾಜಿಸಲಿದೆ.

error: Content is protected !!