Cini NewsSandalwood

QPL ಟ್ರೋಫಿ ಹಾಗೂ ಜೆರ್ಸಿ ಅನಾವರಣ ಮಾಡಿದ ನಟ ಅನಿರುದ್ ಜತ್ಕರ್.

ಈಗ ಎಲ್ಲೆಲ್ಲೂ ಕ್ರಿಕೆಟ್ ಹಾವಳಿ ಜೋರಾಗಿದ್ದು , ಪುರುಷರ ಹಾಗೆಯೇ ಮಹಿಳೆಯರು ಕೂಡ ಕ್ರಿಕೆಟ್ ನಲ್ಲಿ ಬಾರಿ ಸದ್ದು ಮಾಡಲು ಮುಂದಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಇಡೀ ಹೆಣ್ಣು ಮಕ್ಕಳ ಸಮಾಗಮದಲ್ಲಿ 10 ತಂಡಗಳ ಮೂಲಕ ಕ್ರಿಯೇಟಿವ್ ಫ್ರೆಂಡ್ಸ್ ಸಂಸ್ಥೆಯು ಮೊದಲ ಬಾರಿಗೆ ಕ್ವೀನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ.

ಈ ಟೂರ್ನಮೆಂಟ್ ನಲ್ಲಿ ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರ ಜೊತೆಯಲ್ಲಿ ಆಂಕರ್ಸ್, ಮಾಡೆಲ್ ಗಳು ಸಹ ಭಾಗವಹಿಸಲು ವೇದಿಕೆ‌ ಕಲ್ಪಿಸಿಕೊಡಲಾಗಿದೆ. ಮೇ ತಿಂಗಳಲ್ಲಿ ಅದ್ಧೂರಿಯಾಗಿ QPL ನ ಲೋಗೋ ಬಿಡುಗಡೆ ಕಾರ್ಯಕ್ರಮ ಮಾಡಲಾಗಿತ್ತು. ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಟ್ರೋಫಿ ಹಾಗೂ ಜೆರ್ಸಿ ಅನಾವರಣ ಮಾಡಲಾಯಿತು.

ನಟ ಅನಿರುದ್ ಜತ್ಕರ್ ಅವರು ಟ್ರೋಫಿಯನ್ನು ಅನಾವರಣ ಮಾಡಿದರು. ಇದೇ ವೇಳೆ ಹತ್ತು ತಂಡಗಳಿಗೂ ನಾಯಕರ ಆಯ್ಕೆ ಮಾಡಲಾಯಿತು. ಸ್ಯಾಂಡಲ್ ವುಡ್ ಚೆಲುವೆಯರಾದ ಧನ್ಯ ರಾಮ್ ಕುಮಾರ್, ಶೃತಿ ಹರಿಹರನ್, ಭಾವನಾ ರಾವ್, ಸಿರಿ ರವಿಕುಮಾರ್, ಕಾರುಣ್ಯ ರಾಮ್, ಸುಕೃತಾ ವಾಗ್ಲೆ, ಜಾನವಿ ಕಾರ್ತಿಕ್, ಬೃಂದಾ ಆಚಾರ್ಯ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.

ತಂಡಗಳು ಭಾಗಿ
ಬೆಳಗಾವಿ ಕ್ಲೀನ್ಸ್, ಹುಬ್ಬಳ್ಳಿ ಕ್ಲೀನ್ಸ್, ಬೆಂಗಳೂರು ಕ್ಲೀನ್ಸ್, ಮೈಸೂರು ಕ್ರೀನ್ಸ್, ಕೋಲಾರ್ ಕ್ರೀನ್ಸ್, ಮಂಗಳೂರು ಕ್ಲೀನ್ಸ್, ಶಿವಮೊಗ್ಗ ಕ್ಲೀನ್ಸ್, ಚಿತ್ರದುರ್ಗ ಕ್ರೀನ್ಸ್, ಹಾಸನ ಕ್ಲೀನ್ಸ್ ಮತ್ತು ಬಳ್ಳಾರಿ ಕ್ಲೀನ್ಸ್ ತಂಡಗಳು ಸೇರಿದಂತೆ ಒಟ್ಟು 10 ತಂಡಗಳು ಕ್ವೀನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಯಾರ್ ಯಾರು ಕ್ಯಾಪ್ಟನ್
1. ಬೆಳಗಾವಿ ಕ್ಲೀನ್ಸ್
ಮಾಲೀಕರು: ಡಾ. ವನಿತಾ ಲೋಕೇಶ್
ನಾಯಕತ್ವ: ಸಪ್ತಮಿ ಗೌಡ
ಉಪನಾಯಕತ್ವ: ಸ್ಪೂರ್ತಿ ವಿಶ್ವಾಸ್

2.ಬೆಂಗಳೂರು ಕ್ವೀನ್ಸ್,
ಮಾಲೀಕರು: ಅರು ಗೌಡ
ನಾಯಕತ್ವ: ಶ್ರುತಿ ಹರಿಹರನ್
ಉಪನಾಯಕತ್ವ: ಅಕ್ಷತಾ ರಜತ್

3. ಮೈಸೂರು ಕ್ವೀನ್ಸ್
ಮಾಲೀಕರು: ವಿಷ್ಣು ಶ್ರೀನಿವಾಸಮೂರ್ತಿ
ನಾಯಕತ್ವ: ಅದ್ವಿತಿ ಶೆಟ್ಟಿ
ಉಪನಾಯಕತ್ವ: ಭವ್ಯ ಗೌಡ

4. ಬಳ್ಳಾರಿ ಕ್ವೀನ್ಸ್
ಮಾಲೀಕರು: ಪುರುಷೋತ್ತಮ ರೈ
ನಾಯಕತ್ವ: ಬೃಂದಾ ಆಚಾರ್ಯ
ಉಪನಾಯಕತ್ವ: ಯಶಸ್ವಿನಿ ದೇಶಪಾಂಡೆ

5. ಕೋಲಾರ ಕ್ವೀನ್ಸ್
ಮಾಲೀಕರು: ಶಶಾಂಕ್ ರೆಡ್ಡಿ
ನಾಯಕತ್ವ: ಧನ್ಯ ರಾಮ್ ಕುಮಾರ್
ಉಪನಾಯಕತ್ವ: ಅನುಷಾ ರೈ

6. ಹಾಸನ ಕ್ವೀನ್ಸ್
ಮಾಲೀಕರು: ಸುರೇಶ್ ಕುಮಾರ್ ರೆಡ್ಡಿ
ನಾಯಕತ್ವ: ಭಾವನಾ ರಾವ್
ಉಪನಾಯಕತ್ವ: ಐಶು

7. ಮಂಗಳೂರು ಕ್ವೀನ್ಸ್
ಮಾಲೀಕರು: ಸಚ್ಚಿದಾನಂದ
ನಾಯಕತ್ವ: ಸಿರಿ ರವಿಕುಮಾರ್
ಉಪನಾಯಕತ್ವ: ನೀತು ವನಜಾಕ್ಷಿ

8. ಹುಬ್ಬಳ್ಳಿ ಕ್ವೀನ್ಸ್
ಮಾಲೀಕರು: ವಿಕಾಸ್
ನಾಯಕತ್ವ: ಜಾನ್ವಿ
ಉಪನಾಯಕತ್ವ: ಭಾಗ್ಯಶ್ರೀ

9. ಚಿತ್ರದುರ್ಗ ಕ್ವೀನ್ಸ್
ಮಾಲೀಕರು: ಮಣಿಕಾಂತ್
ನಾಯಕತ್ವ: ಸುಕೃತಾ ವಾಗ್ಲೆ
ಉಪನಾಯಕತ್ವ: ಮಮತಾ ರಾಹುತ್

10: ಶಿವಮೊಗ್ಗ ಕ್ವೀನ್ಸ್
ಮಾಲೀಕರು ಮಂಜುನಾಥ್
ನಾಯಕತ್ವ: ಕಾರುಣ್ಯ ರಾಮ್
ಉಪನಾಯಕತ್ವ: ವಾಣಿಶ್ರೀ

ಕ್ವೀನ್ ಪ್ರೀಮಿಯರ್ ಲೀಗ್ ಆಯೋಜಕರ ಬಳಗದಲ್ಲಿ ಮಹೇಶ್ ಕುಮಾರ್, ಪ್ರಮೋದ್ ಶೆಟ್ಟಿ, ಭವ್ಯ ಗೌಡ, ಸಾತ್ವಿಕ್, ಸಂತೋಷ್, ಚೇತನ್, ಸಚಿನ್ ಹಾಗೂ ಪ್ರೇಮ್ ಇದ್ದಾರೆ. ಐದು ಓವರ್‌ಗಳ ಪಂದ್ಯ ಇದಾಗಿದ್ದು, ವಿಜೇತ ತಂಡಕ್ಕೆ 6 ಲಕ್ಷ ನಗದು ಹಾಗೂ ರನ್ನರ್ಸ್ ಅಪ್ ತಂಡಕ್ಕೆ 3 ಲಕ್ಷ ಬಹುಮಾನ ನೀಡಲಾಗುತ್ತದೆ

error: Content is protected !!