Cini NewsSandalwood

ಪ್ರಾರಂಭ ನಿರ್ದೇಶಕ ಮನು ಹೊಸ ಚಿತ್ರಕ್ಕೆ ಯುವ ನಟ ಆನಂದ್ ಎಂಟ್ರಿ

ಚಂದನವನಕ್ಕೆ ಸಾಕಷ್ಟು ಯುವ ಪ್ರತಿಭೆಗಳು ತಮ್ಮ ಅದೃಷ್ಟ ಪರೀಕ್ಷೆಗೆ ನಿರಂತರವಾಗಿ ಬರುತ್ತಿದ್ದಾರೆ. ಆ ಸಾಲಿಗೆ ಮತ್ತೊಬ್ಬ ಸ್ಮಾರ್ಟ್ ಅಂಡ್ ಯಂಗ್ ಲುಕಿಂಗ್ ಹೀರೋ ಆನಂದ್ ಬೆಳ್ಳಿ ಪರದೆಯ ಮೇಲೆ ಬರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಸಿನಿಮಾ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವ ಈ ಪ್ರತಿಭೆ ನೋಡಲು ಸುರದ್ರೂಪಿ ಯಾಗಿದ್ದು , ಈ ಯುವಕ ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ವೈಫ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಸದ್ಯ ಹೋಟೆಲ್ ಉದ್ಯಮದಲ್ಲಿ ತಮ್ಮನ ತಾವು ತೊಡಗಿಸಿಕೊಂಡಿರುವ ಈ ಯುವ ಪ್ರತಿಭೆ ಸಿನಿಮಾ ರಂಗಕ್ಕೆ ಬರಲು ಬೇಕಾದಂತ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರಂತೆ.

ಈಗಾಗಲೇ ಸ್ಯಾಂಡಲ್ ವುಡ್ ಮನೋರಂಜನ್ ರವಿಚಂದ್ರನ್ ನಟನೆಯ ಪ್ರಾರಂಭ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿರುವಂತಹ ಮನು ಕಲ್ಯಾಡಿ ತಮ್ಮ ಎರಡನೇ ಚಿತ್ರವಾಗಿ ತಮ್ಮ ಆತ್ಮೀಯ ಗೆಳೆಯ ಆನಂದ್ ಗಾಗಿ ಈ ಚಿತ್ರದ ಸಾರಥ್ಯವನ್ನು ವಹಿಸಿಕೊಂಡಿದ್ದಾರಂತೆ.

ಯುವ ಪ್ರತಿಭೆ ಆನಂದ್ ಈ ಚಿತ್ರದ ಮೂಲಕ ನಾಯಕನಾಗಿ ಅಭಿನಯಿಸುವುದರ ಜೊತೆಗೆ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದು , ಮುಂದಿನ ತಿಂಗಳು ಜುಲೈನಲ್ಲಿ ಶೂಟಿಂಗ್ ಪ್ರಾರಂಭ ಮಾಡಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರಂತೆ. ಹಾಗೆಯೇ ಇನ್ನುಳಿದ ಕಲಾವಿದರು ಹಾಗೂ ತಂತ್ರಜ್ಞಾನರ ಆಯ್ಕೆ ಪ್ರಕ್ರಿಯೇ ನಡೆಸಿದ್ದು , ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ನೀಡಲಿದೆಯಂತೆ.

error: Content is protected !!