ಏಪ್ರಿಲ್ 10ಕ್ಕೆ “ಪೀಟರ್ “ ಚಿತ್ರ ಬಿಡುಗಡೆ
ಕಳೆದ ಒಂದು ವಾರದಿಂದ ಚಿತ್ರರಂಗ ತುಂಬಾ ಲವಲವಿಕೆಯಿಂದ ಇದೆ. ‘ಲವ್ ಮಾಕ್ಟೇಲ್ 3’ ಮತ್ತು ‘ಧುರಂಧರ 2’ ಸಿನಿಮಾಗಳು ಥಿಯೇಟರ್‌ಗಳಲ್ಲಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿವೆ. ಇದೇ ಹೊತ್ತಿನಲ್ಲಿ ಕುತೂಹಲ ಮೂಡಿಸಿರುವ ಮತ್ತೊಂದು ಸಿನಿಮಾ ಅಂದ್ರೆ ಅದು “ಪೀಟರ್”. ಏಪ್ರಿಲ್ 10 ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Productions) ವಿತರಣೆ ಮಾಡುತ್ತಿದೆ.
ಈ ಸಿನಿಮಾವನ್ನು ಸುಕೇಶ್ ಶೆಟ್ಟಿ ನಿರ್ದೇಶನ ಮಾಡಿದ್ದು, ಈ ಹಿಂದೆ ‘ದೂರದರ್ಶನ’ ಎಂಬ ಉತ್ತಮ ಚಿತ್ರವನ್ನ ತೆರೆಯ ಮೇಲೆ ತಂದಿದ್ದರು.ಈ ಪೀಟರ್ ಸಿನಿಮಾವನ್ನ ರವಿ ಹಿರೇಮಠ್ ಮತ್ತು ರಾಕೇಶ್ ಹೆಗಡೆ (ವೃದ್ಧಿ ಸ್ಟುಡಿಯೋಸ್) ನಿರ್ಮಾಣ ಮಾಡಿದ್ದಾರೆ. ರವಿ ಹಿರೇಮಠ್ ಅವರು ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಈ ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ , ಜೋಶಿಕಿ ಜವಾನಿ ಗಾಯಕ ಅಜಯ್ ಗೊಗಾವಲೆ ಹಾಡಿರುವ ಫ್ರೆಂಡ್ ಶಿಪ್ ಸಾಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆಯಂತೆ. ಇನ್ನು ಈ ಚಿತ್ರದಲ್ಲಿ ನಾಯಕನಾಗಿ ರಾಜೇಶ್ ಧ್ರುವ ಹಾಗೂ ನಾಯಕಿಯಾಗಿ ರವೀಕ್ಷಾ ಶೆಟ್ಟಿ ಅಭಿನಯಸಿದ್ದಾರೆ. ಉಳಿದಂತೆ ಕಲಾವಿದರಾದ ಪ್ರತಿಮಾ ನಾಯಕ್, ಜಾನ್ವಿ ರಾಯಲ ಮತ್ತು ಇತರ ಹೊಸ ಪ್ರತಿಭೆಗಳು ಚಿತ್ರದಲ್ಲಿದ್ದಾರೆ.
‘ಪೀಟರ್’ ಸಿನಿಮಾದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಲವ್, ಎಮೋಷನ್ ಮತ್ತು ಫ್ರೆಂಡ್ ಶಿಪ್ ಹೀಗೆ ಎಂಟರ್ಟೈನ್ಮೆಂಟ್ ಗೆ ಬೇಕಾದ ಎಲ್ಲಾ ಎಲಿಮೆಂಟ್ಸ್ ಇವೆ. ಕರಾವಳಿ ಭಾಗದ ಮಣ್ಣಿನ ಸೊಗಡಿನ ಕಥೆ ಇದಾಗಿದ್ದು, ಏಪ್ರಿಲ್ 10 ರಂದು ತೆರೆಗೆ ಬರಲಿದೆ.